ಕೋರ್ಟ್ ಆದೇಶಕ್ಕೂ ಕ್ಯಾರೇ ಇಲ್ಲ, ಕೊಂಚ ಇಳಿದರೂ, ಪೀಕ್ ಅವರ್, ಮಳೆ ಸಮಯದಲ್ಲಿ ಹೆಚ್ಚಿನ ದರ ಮುಂದುವರಿಕೆ
ಬೆಂಗಳೂರು(ಅ.15): ಸರ್ಕಾರ ನಿಗದಿಪಡಿಸಿದ ದರದೊಂದಿಗೆ ಶೇಕಡ 10ರಷ್ಟು ಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆ ಪಡೆದು ಆಟೋ ಸೇವೆ ಮುಂದುವರೆಸುವಂತೆ ಓಲಾ, ಉಬರ್ ಸಂಸ್ಥೆಗಳಿಗೆ ಹೈಕೋರ್ಟ್ ನಿರ್ದೇಶಿಸಿದ ಹೊರತಾಗಿಯೂ ಶುಕ್ರವಾರ ದರ ಮಾತ್ರ ಕಡಿಮೆಯಾಗಿಲ್ಲ.
ಆ್ಯಪ್ ಆಧಾರಿತ ಸೇವೆ ಒದಗಿಸುವ ಆಟೋರಿಕ್ಷಾಗಳನ್ನು ಜಪ್ತಿ ಮಾಡಲಾಗುವುದು ಮತ್ತು ಐದು ಸಾವಿರ ರು. ದಂಡ ವಿಧಿಸುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಓಲಾ ಹಾಗೂ ಉಬರ್ ಸಂಸ್ಥೆಗಳು ಹೈಕೋರ್ಚ್ ಮೆಟ್ಟಿಲೇರಿದ್ದವು. ನ್ಯಾಯಾಲಯವು 2021ರ ನವೆಂಬರ್‌ನಲ್ಲಿ ಸರ್ಕಾರ ನಿಗದಿಪಡಿಸಿರುವ ದರದ ಜತೆಗೆ ಶೇ.10ರಷ್ಟುಹೆಚ್ಚುವರಿ ಹಣ ಮತ್ತು ಸೇವಾ ತೆರಿಗೆ (ಅಪ್ಲಿಕೇಬಲ್ ಟ್ಯಾಕ್ಸ್) ಮಾತ್ರ ಪಡೆಯಬೇಕು ಎಂದು ನಿರ್ದೇಶಿಸಿದರೂ ಸಂಸ್ಥೆಗಳ ದರದಲ್ಲಿ ಯಾವುದೇ ಭಾರೀ ಬದಲಾವಣೆ ಆಗಿಲ್ಲ.
ಓಲಾ ಉಬರ್ ಗೆ ಬಿಗ್ ರಿಲೀಫ್, ಸಾರಿಗೆ ಇಲಾಖೆ ನೀಡಿದ್ದ ಆದೇಶಕ್ಕೆ ಕೋರ್ಟ್ ಮಧ್ಯಂತರ ತಡೆ
ಜನಾಕ್ರೋಶ ಹಾಗೂ ಪ್ರಯಾಣಿಕರು ದರ ಪ್ರಶ್ನಿಸುವುದಕ್ಕೆ ಆರಂಭಿಸಿರುವ ಹಿನ್ನೆಲೆಯಲ್ಲಿ ಸಾಮಾನ್ಯ ಅವಧಿಯಲ್ಲಿ ಸ್ವಲ್ಪ ಪ್ರಮಾಣದ ದರವನ್ನು ಉಭಯ ಸಂಸ್ಥೆಗಳು ಕಡಿತಗೊಳಿಸುವುದು ಕಂಡು ಬಂದಿದೆ. ಆದರೆ, ಪೀಕ್ ಅವಧಿಯಲ್ಲಿ ಅಂದರೆ, ಬೆಳಗ್ಗೆ 8ರಿಂದ 11 ಗಂಟೆ ಹಾಗೂ ಸಂಜೆ 4ರಿಂದ 8 ಗಂಟೆಯ ಅವಧಿಯಲ್ಲಿ ಯಥಾ ಪ್ರಕಾರ ಹೆಚ್ಚಿನ ದರವನ್ನೇ ಸಾರ್ವಜನಿಕರಿಂದ ವಸೂಲಿ ಮಾಡಲಾಗಿತ್ತಿದೆ. ಇನ್ನು ನಗರದಲ್ಲಿ ಮಳೆ ಸುರಿಯುವ ಅವಧಿ, ಹೆಚ್ಚಿನ ಜನದಟ್ಟಣೆ ಪ್ರದೇಶದಲ್ಲಿ ಹೆಚ್ಚಿನ ದರವನ್ನೇ ಪ್ರಯಾಣಿಕರಿಂದ ವಸೂಲಿ ಮುಂದುವರೆದಿದೆ.
ಓಲಾ, ಉಬರ್ ರಿಕ್ಷಾಕ್ಕೆ ದರ ನಿಗದಿ ಮಾಡಿ: ಹೈಕೋರ್ಟ್
ಕನಿಷ್ಠ 100 ಮೀ. ದೂರದ ಹಾದಿಗೂ .49ರಿಂದ .57 ದರವಿತ್ತು. ಇನ್ನು ಒಂದರಿಂದ ಎರಡು ಕಿ.ಮೀ ದೂರಕ್ಕೆ ಓಲಾ ಆ್ಯಪ್‌ಗಳಲ್ಲಿ .70 ರಿಂದ .80, ಮೂರು ಕಿ.ಮೀಗೆ .100 ಅಧಿಕ ದರ ಮುಂದುವರೆದಿದೆ. ಶಿವಾನಂದ ಸರ್ಕಲ್‌ನಿಂದ ಎಂಜಿ ರಸ್ತೆಗೆ ಒಟ್ಟು 4.3 ಕಿ.ಮೀ. ಇದ್ದು ಆಟೋ ಪ್ರಯಾಣಕ್ಕೆ .127 ಇದೆ. ಇನ್ನು ಶಿವಾನಂದ ವೃತ್ತದಿಂದ ಲಾಲ್‌ಬಾಗ್‌ಗೆ 6.3 ಕಿ.ಮೀ ಇದ್ದು, ಆಟೋ ಪ್ರಯಾಣಕ್ಕೆ .132 ದರ ಇದೆ.
ಇನ್ನೂ ಬರುತ್ತಿವೆ ದೂರು
ಸಾರಿಗೆ ಇಲಾಖೆಯೆ ಆ್ಯಪ್ ಸಂಯೋಜಿತ ಆಟೋರಿಕ್ಷಾ ಓಡಾಟ ಕಂಡು ಬಂದರೆ ದೂರು ನೀಡುವಂತೆ ಸಹಾಯವಾಣಿ ಸಂಖ್ಯೆಯನ್ನು ನೀಡಿದ್ದು, ಶುಕ್ರವಾರ 30ಕ್ಕೂ ಹೆಚ್ಚು ದೂರುಗಳು ಬಂದಿದ್ದು, ಈವರೆಗೆ ಒಟ್ಟು 200ಕ್ಕೂ ಅಧಿಕ ದೂರು ದಾಖಲಾಗಿವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸದ್ಯದ ಆಟೋ ದರ
ಸರ್ಕಾರವು ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರ ಮೊದಲ 2 ಕಿಮೀಗೆ .30, ನಂತರದ ಪ್ರತಿ ಕಿ.ಮೀಗೆ .15 ಇದೆ. ಮೊದಲ 5 ನಿಮಿಷಕ್ಕೆ ಯಾವುದೇ ಕಾಯುವ ಶುಲ್ಕ (ವೇಟಿಂಗ್ ಚಾರ್ಜ್) ಇರುವುದಿಲ್ಲ ಮತ್ತು ನಂತರ ಪ್ರತಿ 15 ನಿಮಿಷಕ್ಕೆ .5 ಇದೆ. ರಾತ್ರಿ ಪ್ರಯಾಣದಲ್ಲಿ (ರಾತ್ರಿ 10ರಿಂದ ಬೆಳಗ್ಗೆ 5) ಶೇ.50 ದರ ಹೆಚ್ಚು ನಿಗದಿಪಡಿಸಿದೆ.