ಅರಣ್ಯ ಕಚೇರಿಗೆ ರೈತರ ಸಮಸ್ಯೆಗಳನ್ನು ಹೇಳಲು ಆಗಮಿಸಿದ ರೈತ ಮುಖಂಡರನ್ನು ಮಳೆಯ ನಡುವೆಯೂ ಕಚೇರಿಯ ಹೊರಗೇ ನಿಲ್ಲಿಸಿ ಅನವಶ್ಯಕವಾಗಿ ಗೊಂದಲ ನಿರ್ಮಿಸಿದ ಪ್ರಭಾರ ಡಿಎಫ್‌ಒ ರೋಶ್ನಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಕನಿಷ್ಠಪಕ್ಷ ರೈತರಿಗೆ ಗೌರವ ಕೊಡುವುದನ್ನು ಕಲಿಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಣಿಕೊಪ್ಪ(ಜೂ.30): ಅರಣ್ಯ ಕಚೇರಿಗೆ ರೈತರ ಸಮಸ್ಯೆಗಳನ್ನು ಹೇಳಲು ಆಗಮಿಸಿದ ರೈತ ಮುಖಂಡರನ್ನು ಮಳೆಯ ನಡುವೆಯೂ ಕಚೇರಿಯ ಹೊರಗೇ ನಿಲ್ಲಿಸಿ ಅನವಶ್ಯಕವಾಗಿ ಗೊಂದಲ ನಿರ್ಮಿಸಿದ ಪ್ರಭಾರ ಡಿಎಫ್‌ಒ ರೋಶ್ನಿ ಅವರನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯ ತೀವ್ರ ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳು ಕನಿಷ್ಠಪಕ್ಷ ರೈತರಿಗೆ ಗೌರವ ಕೊಡುವುದನ್ನು ಕಲಿಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಭೆಯ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಇದನ್ನು ಪರಿಗಣಿಸದೆ ಏಕಾಏಕಿ ರೈತರನ್ನು ಅಗೌರವದಿಂದ ಮಾತನಾಡಿಸಿದ ರೀತಿಯನ್ನು ತೀವ್ರವಾಗಿ ಖಂಡಿಸಿದರು. ಸಂಘಕ್ಕೆ ತನ್ನದೇ ಆದ ಸಿದ್ಧಾಂತ ಹಾಗೂ ಗೌರವವಿದೆ. ರಾಜ್ಯ, ಜಿಲ್ಲಾಮಟ್ಟದಲ್ಲಿ ಯಾವುದೇ ಇಲಾಖೆಯ ಹಿರಿಯ ಅಧಿಕಾರಿಗಳು ಗೌರವದಿಂದ ರೈತ ಮುಖಂಡರನ್ನು ಮಾತನಾಡಿಸುತ್ತಾರೆ. ಆದರೆ ಈ ರೀತಿ ಕಚೇರಿಗೆ ಬಂದ ರೈತ ಮುಖಂಡರನ್ನು ಪೊಲೀಸರ ಮೂಲಕ ತಡೆಯುವುದನ್ನು ರೈತ ಸಂಘ ಸಹಿಸುವುದಿಲ್ಲ. ಕೂಡಲೇ ಪ್ರಸ್ತುತ ಕೋವಿಡ್- 19 ಸುತ್ತೋಲೆಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಕೆಲವೇ ರೈತ ಮುಖಂಡರಗಳ ಸಭೆಗೆ ಒತ್ತಾಯಿಸಿದರು.
undefined
ಆಮದಲ್ಲ, ಈಗ ತಿಂಗಳಿಗೆ 50 ಲಕ್ಷ ಪಿಪಿಇ ಕಿಟ್ ರಫ್ತಿಗೆ ಕೇಂದ್ರ ಅನುಮತಿ!
ಈ ಸಂದರ್ಭ ಮಧ್ಯೆ ಪ್ರವೇಶಿಸಿದ ವಿರಾಜಪೇಟೆ ಪೊಲೀಸ್ ವೃತ್ತ ನಿರೀಕ್ಷಕ ಕ್ಯಾತೆಗೌಡ ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತು ಪ್ರಭಾರ ಡಿಎಫ್‌ಒ ರೋಶ್ನಿ ಅವರ ಮನವೊಲಿಸಿ ರೈತರ ಅಹವಾಲು ಸ್ವೀಕರಿಸಲು ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು. ಬಳಿಕ ಅಧಿಕಾರಿ, ತಮ್ಮ ಕಚೇರಿಯಲ್ಲಿ ಸಭೆ ನಡೆಸಲು ಒಪ್ಪಿಗೆ ಸೂಚಿಸಿದರು.
ಕೊಡಗು ಜಿಲ್ಲೆಯಲ್ಲಿ ನಿರಂತರ ಕಾಡಾನೆ, ಹುಲಿ ಹಾಗೂ ಕಾಡುಹಂದಿಯ ಉಪಟಳದಿಂದ ರೈತರ ಭತ್ತದ ಗದ್ದೆಗಳು ಹಾಗೂ ಕಾಫಿ ತೋಟಗಳು ಹಾಳಾಗುತ್ತಿದ್ದು ತಕ್ಷಣವೇ ಕ್ರಮ ಕೈಗೊಳ್ಳಬೇಕು. ನೊಂದ ರೈತರಿಗೆ ಪರಿಹಾರ ವಿತರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾದ ಕಾಡ್ಯಮಾಡ ಮನುಸೋಮಯ್ಯನವರ ಮುಂದಾಳತ್ವದಲ್ಲಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಕಚ್ಚಾತೈಲ ಸಂಗ್ರಹಾಗಾರ ಸಮೀಪ ವಿಚಿತ್ರ ವಾಸನೆ: ಅನಿಲ ಸೋರಿಕೆ ಭೀತಿ
ಪ್ರಭಾರ ಅಧಿಕಾರಿ ರೋಶ್ನಿ, ರೈತರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ ಈಗಾಗಲೇ ಆರು ಕಾಡಾನೆಗಳನ್ನು ಸೆರೆ ಹಿಡಿಯಲು ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಏಪ್ರಿಲ್ ತಿಂಗಳಿನಲ್ಲಿ ರೈತರ ಪರಿಹಾರ ಅನುದಾನ 14 ಲಕ್ಷ ಬಿಡುಗಡೆಯಾಗಿದೆ. ಇನ್ನು ಈ ಭಾಗದಲ್ಲಿ 65 ಲಕ್ಷ ಪರಿಹಾರ ಅನುದಾನ ಬಿಡುಗಡೆಯಾಗಲು ಬಾಕಿ ಇದೆ. ಇದನ್ನು ಆದಷ್ಟುಬೇಗ ಬಿಡುಗಡೆಗೊಳಿಸಲು ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ತಿತಿಮತಿ ಎಸಿಎಫ್ ಶ್ರೀಪತಿ, ವಿರಾಜಪೇಟೆ ವೃತ್ತ ನಿರೀಕ್ಷಕ ಕ್ಯಾತೆಗೌಡ, ಪೊನ್ನಂಪೇಟೆ ಆರ್‌ಎಫ್‌ಒ ತೀರ್ಥ, ತಿತಿಮತಿ ಆರ್‌ಎಫ್‌ಒ ಅಶೋಕ್ ಹುನಗುಂದ,ದಿಲೀಪ್, ಕೇಶವ್ ಸೇರಿದಂತೆ ರೈತ ಸಂಘದ ಜಿಲ್ಲಾ ಸಂಚಾಲಕ ಪುಚ್ಚಿಮಾಡ ಸುಭಾಶ್ ಸುಬ್ಬಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚೆಟ್ರುಮಾಡ ಸುಜಯ್ ಬೋಪಯ್ಯ, ಕಾರ್ಯದರ್ಶಿ ಅಜ್ಜಮಾಡ ಚಂಗಪ್ಪ, ಮುಖಂಡರಾದ ಚೆಪ್ಪುಡೀರ ರೋಶನ್, ವಿ. ಬಾಡಗದ ರೈತ ಮುಖಂಡರಾದ ಮಚ್ಚಾರಂಡ ಪ್ರವೀಣ್, ಚೇಮಿರ ಈರಪ್ಪ, ಬೊಳ್ಳಂಡ ರಘು, ಕರ್ತಮಾಡ ಪೊನ್ನುಮಣಿ, ಕುಂದ ಗ್ರಾಮದ ರೈತ ಮುಖಂಡರಾದ ಸಣ್ಣುವಂಡ ತಿಮ್ಮಯ್ಯ, ಎಸ್.ಪಿ. ಪೂಣಚ್ಚ, ಎಸ್.ಎಂ. ಕುಶಾಲಪ್ಪ, ತೀತಮಾಡ ಶರಣು, ಮದ್ರಿರ ಎ. ರವೀಂದ್ರ,ಅಮ್ಮತ್ತಿಯ ಮನೆಯಪಂಡ ಗೌತಮ್, ಅಜ್ಜಮಾಡ ನವೀನ್ ಮುಂತಾದವರು ಸಭೆಯಲ್ಲಿ ಹಾಜರಿದ್ದರು.