ಹರಿಹರದಲ್ಲಿ ಮತ್ತೆರಡು ಕೊರೋನಾ ಪಾಸಿಟಿವ್‌ ಕೇಸ್‌ ಪತ್ತೆ..!

By Kannadaprabha NewsFirst Published Jun 30, 2020, 9:32 AM IST
Highlights

ಶಿವಮೊಗ್ಗ ಸರ್ಕಲ್‌ ಬಳಿ ಇರುವ ಕಂಟೈನ್ಮೆಂಟ್‌ ಝೋನ್‌ನ ಸೋಂಕಿತ ಗರ್ಭಿಣಿ ಮಹಿಳೆಯ ದ್ವಿತೀಯ ಸಂಪರ್ಕಿತರಾದ 40 ವರ್ಷದ ಮಹಿಳೆ ಹಾಗೂ 16 ವರ್ಷದ ಬಾಲಕಿಯಲ್ಲಿ ಕೊರೋನಾ ಪಾಸಿಟೀವ್‌ ದೃಢಪಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಹರಿಹರ(ಜೂ.30): ನಗರದಲ್ಲಿ ಮತ್ತೆರಡು ಪಾಸಿಟಿವ್‌ ಪ್ರಕರಣ ಸೋಮವಾರ ಸಂಜೆ ಬೆಳಕಿಗೆ ಬಂದಿದ್ದು, ಅವರನ್ನು ಜಿಲ್ಲಾ ಕೋವಿಡ್‌-19 ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ ಎಂದು ತಹಸೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.

ನಗರದ ಶಿವಮೊಗ್ಗ ಸರ್ಕಲ್‌ ಬಳಿ ಇರುವ ಕಂಟೈನ್ಮೆಂಟ್‌ ಝೋನ್‌ನ ಸೋಂಕಿತ ಗರ್ಭಿಣಿ ಮಹಿಳೆಯ ದ್ವಿತೀಯ ಸಂಪರ್ಕಿತರಾದ 40 ವರ್ಷದ ಮಹಿಳೆ ಹಾಗೂ 16 ವರ್ಷದ ಬಾಲಕಿಯಲ್ಲಿ ಕೊರೋನಾ ಪಾಸಿಟಿವ್‌ ದೃಢಪಟ್ಟಿದೆ.

ಮಾಹಿತಿ ತಿಳಿದ ಕೂಡಲೇ ಆರೋಗ್ಯ ಹಾಗೂ ಪೊಲೀಸ್‌ ಇಲಾಖೆಗಳ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪಾಸಿಟಿವ್‌ ಬಂದವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದಾಗ, ಸೋಂಕಿತ ಮಹಿಳೆಯ ಮಗ ಪ್ರತಿರೋಧ ವ್ಯಕ್ತಪಡಿಸಿದರು. ನಾವು ನಾಲ್ವರೂ ಒಂದೇ ಕುಟುಂಬದವರು, ಇಬ್ಬರಿಗೆ ಮಾತ್ರ ಸೋಂಕು ಕಾಣಿಸಿಕೊಳ್ಳಲು ಹೇಗೆ ಸಾಧ್ಯ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಘಟನೆ ನಡೆಯಿತು.

ಶಿವಮೊಗ್ಗದಲ್ಲಿ 150ರ ಗಡಿದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

ಹಿರಿಯ ಆರೋಗ್ಯ ಸಹಾಯಕರು ಮತ್ತು ಅಧಿಕಾರಿಗಳು ಪ್ರತಿರೋಧ ವ್ಯಕ್ತಪಡಿಸುತ್ತಿದ್ದ ವ್ಯಕ್ತಿಗೆ ಸೋಂಕಿನ ಬಗ್ಗೆ ಮಾಹಿತಿಯನ್ನು ನೀಡಿ, ಮನವೊಲಿಸಿ ಸೊಂಕಿತರನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಿ, ಉಳಿದ ಇಬ್ಬರೂ ಸದಸ್ಯರನ್ನು ಕ್ವಾರಂಟೈನ್‌ ಕೇಂದ್ರಕ್ಕೆ ಕಳುಹಿಸಲಾಯಿತು. ಸ್ಥಳಕ್ಕೆ ತಹಸೀಲ್ದಾರ್‌ ಕೆ.ಬಿ.ರಾಮಚಂದ್ರಪ್ಪ, ಟಿಎಚ್‌ಒ ಡಾ.ಚಂದ್ರಮೋಹನ್‌, ಹಿರಿಯ ಆರೋಗ್ಯ ಸಹಾಯಕರಾದ ಎಂ.ಉಮ್ಮಣ್ಣ, ಎಂ.ವಿ. ಹೊರಕೇರಿ, ಹಾಗೂ ಪೊಲೀಸ್‌ ಸಿಬ್ಬಂದಿ ಭೇಟಿ ನೀಡಿದರು.
 

click me!