ಅಧಿಕಾರಿಗಳ ಹಣದ ಆಸೆಗೆ ಲೇಔಟ್ ಮಾಲೀಕರ ಪಾಲಾದ ಸಿಎ ಸೈಟ್

By Suvarna News  |  First Published Sep 19, 2022, 7:04 PM IST

 ಬಿಡದಿ ಶರವೇಗದಲ್ಲಿ ಬೆಳೆಯುತ್ತಿದೆ, ದೊಡ್ಡ ದೊಡ್ಡ ಕೈಗಾರಿಕೆಗಳು ತಲೆಯೆತ್ತಿದ್ದು, ಇಂಚಿಂಚು ಭೂಮಿಗೂ ಬಂಗಾರದ ಬೆಲೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂದೆಕೋರರು ಸಿಎ ನಿವೇಶನಗಳನ್ನು ಹೊಡೆಯಲು ಮುಂದಾಗಿದ್ದಾರೆ.


ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ರಾಮನಗರ (ಸೆ.19): ಸಿಲಿಕಾನ್ ಸಿಟಿ ಬೆಂಗಳೂರಿಗೆ ಹೊಂದಿಕೊಂಡಂತೆ ಇರುವ ಬಿಡದಿ ಶರವೇಗದಲ್ಲಿ ಬೆಳೆಯುತ್ತಿದೆ, ದೊಡ್ಡ ದೊಡ್ಡ ಕೈಗಾರಿಕೆಗಳು ತಲೆಯೆತ್ತಿದ್ದು, ಇಂಚಿಂಚು ಭೂಮಿಗೂ ಬಂಗಾರದ ಬೆಲೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ದಂದೆಕೋರರು ಸಿಎ ನಿವೇಶನಗಳನ್ನು ಹೊಡೆಯಲು ಮುಂದಾಗಿದ್ದಾರೆ. ಬೆಂಗಳೂರು ಕೂಗಳತೆ ದೂರದಲ್ಲಿರುವ ಬಿಡದಿಯಲ್ಲಿ ಒಂದೊಂದು ಇಂಚು ಭೂಮಿಗೂ ಬಂಗಾರದ ಬೆಲೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವು ಭೂಗಳ್ಳರು ಸರ್ಕಾರದ ಸಾಮಾಜಿಕ ಕೆಲಸಗಳಿಗೆ ಉಪಯೋಗವಾಗಬೇಕಿದ್ದ ಸಿಎ ಸೈಟ್ ಗಳು ಇದೀಗ ಭೂಗಳ್ಳರ ಪಾಲಾಗಿವೆ. 2006 ನೇ ಇಸವಿಯಲ್ಲಿ‌ ಬಿಡದಿಯ ಅವರಗೆರೆ ಬಳಿ ಉದಯ ಬಡಾವಣೆ ಹೆಸರಿನಲ್ಲಿ ಬೆಂಗಳೂರಿನ ಉದ್ಯಮಿಗಳಾದ ಶ್ರೀನಿವಾಸ್ ಹಾಗೂ ಮುರುಳೀಧರ್ ಎಂಬುವರು ಸುಮಾರು 80 ಕ್ಕೂ ಹೆಚ್ಚು ನಿವೇಶನಗಳುಳ್ಳ ಬಡಾವಣೆ ನಿರ್ಮಿಸಿರುತ್ತಾರೆ. ಈ ಸಂಬಂಧ ಸರ್ಕಾರದ ಬಳಕೆಗೆ 3 ಸಿಎ ನಿವೇಶನಗಳನ್ನು ಗುರುತಿಸಿರುತ್ತಾರೆ. ಆದರೆ ಅದು ಕೇವಲ ದಾಖಲೆಯಲ್ಲಿ ಮಾತ್ರವಿದ್ದು, ಅಧಿಕಾರಿಗಳ ಸಹಕಾರದಿಂದ ಕೋಟ್ಯಾಂತರ ರೂ ಬೆಲೆ ಬಾಳುವ ಸೈಟ್ ಗಳನ್ನ ತಾವೇ ಉಳಿಸಿಕೊಂಡು ಇದೀಗ ಬೆರೆಯವರಿಗೂ ಪರಭಾರೆ ಮಾಡಿರುತ್ತಾರೆ. ಅಂದಹಾಗೆ ಈ 3  ನಿವೇಶನಗಳ ವಿಸ್ತೀರ್ಣ ಸುಮಾರು 9 ಸಾವಿರ ಅಡಿಗಳಿದ್ದು, ಸರಿಸುಮಾರು 3 ಕೋಟಿಗೂ ಅಧಿಕ ಬೆಲೆ ಬಾಳುತ್ತದೆ. ಈ ಹಿಂದೆ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯಲ್ಲಿದ್ದ ಈ ಬಡಾವಣೆ 2016 ರಲ್ಲಿ ಹೊಸದಾಗಿ ರಚನೆಗೊಂಡ ಬಿಡದಿ ಪುರಸಭೆ ವ್ಯಾಪ್ತಿಗೆ ಒಳಪಟ್ಟಿದೆ.

Latest Videos

undefined

ಬಿಡಿಎ ವತಿಯಿಂದಲೇ 42 ಕಡೆ ಕೆರೆ ಒತ್ತುವರಿ ಮಾಡಿ ಬಡಾವಣೆ ನಿರ್ಮಾಣ!

 ಗ್ರಾಪಂ ನಿಂದ ಪುರಸಭೆಗೆ ಖಾತೆ ವರ್ಗಾವಣೆ ವೇಳೆ ಆಧಿಕಾರಿಗಳ ಸಹಕಾರದಿಂದ ಲೇಔಟ್ ನ ಮಾಲೀಕರು ತಮ್ಮದೇ ಹೆಸರಿಗೆ ಸಿಎ ನಿವೇಶನಗಳನ್ನು ಖಾತೆ ಮಾಡಿಸಿಕೊಂಡು ತದನಂತರ ಬೇರಯವರಿಗೆ ಸೈಟ್ ಗಳನ್ನು ಮಾರಾಟ ಕೂಡ ಮಾಡಿ ಸರ್ಕಾರಕ್ಕೆ ಕೋಟ್ಯಾಂತರ ರೂ ವಂಚಿಸಿದ್ದಾರೆ. 

ಸಿಎ ಸೈಟ್‌ ವಾಪಸ್‌ ಪಡೆಯಲು ಹುಡಾ ನೋಟಿಸ್‌

ಈ ಸಂಬಂಧ ಈ ಹಿಂದೆ ಪುರಸಭೆ ಕಮೀಷನರ್ ಆಗಿದ್ದ ಶಿವಕುಮಾರ್,ಹಾಲಿ ಕಂದಾಯ ನಿರೀಕ್ಷಕ ನಾಗರಾಜು, ಕಛೇರಿ ಸಹಾಯಕ ಪುರುಷೋತ್ತಮ್ ವಿರುದ್ದ ಲೋಕಾಯುಕ್ತ, ಹಾಗೂ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದು, ಹಾಲಿ ನಿವೇಶನಗಳ ಖಾತೆಗಳನ್ನು ರದ್ದು ಮಾಡಿ ಸರ್ಕಾರದ ಇಲಾಖೆಗಳಿಗೆ ಉಪಯೋಗಿಸಿಕೊಳ್ಳಬೇಕು ಜೊತೆಗೆ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ಸಂಪತ್ ಕುಮಾರ್ ದೂರು ನೀಡಿದ್ದಾರೆ. ಒಟ್ಟಾರೆ ಸರ್ಕಾರದ ಸಾಮಾಜಿಕ ಕಾರ್ಯಗಳಿಗೆ ಉಪಯೋಗವಾಗಬೇಕಿದ್ದ ನಿವೇಶನಗಳು ಅಧಿಕಾರಿಗಳ ಹಣದಾಸೆಯಿಂದ ಭೂಗಳ್ಳರ ಪಾಲಾಗಿವೆ.

click me!