ಮೈಸೂರು (ಸೆ.26) : ಮೈಸೂರು (Mysuru) ಜಿಲ್ಲೆ ನಂಜನಗೂಡಿನ ಇತಿಹಾಸ ಪ್ರಸಿದ್ಧ 3000 ವರ್ಷಗಳಷ್ಟು ಹಳೆಯ ಹುಚ್ಚುಗಣಿ ದೇವಾಲಯ ಧ್ವಂಸ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವೆ ಶಶಿಕಲಾ ಜೊಲ್ಲೆ (shashikala Jolle) ಅಧಿಕಾರಿಗಳು ಮಾಡಿರುವುದು ತಪ್ಪು ಎಂದಿದ್ದಾರೆ.
ಮೈಸೂರಿನಲ್ಲಿಂದು ಮಾತನಾಡಿದ ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಹುಚ್ಚಗಣಿ ದೇವಾಲಯದ ವಿಚಾರದಲ್ಲಿ ಅಧಿಕಾರಿಗಳು ಮಾಡಿರುವುದು ತಪ್ಪು ಎಂದು ಹೇಳಿದರು.
undefined
ಅಧಿಕಾರಿಗಳು ಸರ್ಕಾರದ ಗಮನಕ್ಕೆ ಬಾರದಂತೆ ಕೆಲಸ ಮಾಡಿದ್ದಾರೆ. ಅಧಿಕಾರಿಗಳ ತಲೆದಂಡದ ಬಗ್ಗೆ ಸಿಎಂ ಹಾಗೂ ಕಂದಾಯ ಸಚಿವರು ಯೋಚನೆ ಮಾಡುತ್ತಿದ್ದಾರೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದರು.
ಮೈಸೂರಿನಲ್ಲಿ ದೇಗುಲ ತೆರವು ವಿರುದ್ಧ ಆಕ್ರೋಶ, ಸರ್ಕಾರಕ್ಕೆ ಹಿಂಜಾವೇ ಎಚ್ಚರಿಕೆ
ದೇವಾಲಯ ಧ್ವಂಸ (Temple Demolition) ಮಾಡಿರುವ ವಿಚಾರದ ಬಗ್ಗೆ ಅಧಿವೇಶನದಲ್ಲಿಯೂ ಚರ್ಚೆ ಆಗಿದೆ. ಇದರ ಬಗ್ಗೆ ಸರ್ಕಾರವು ಮಸೂದೆಯನ್ನು ಜಾರಿಗೆ ತರುತ್ತಿದೆ. ಇದು ಜನರ ಭಾವನಾತ್ಮಕ ವಿಚಾರವಾಗಿದೆ. ಅವರ ಭಾವನೆಗಳಿಗೂ ಬೆಲೆ ಕೊಡಬೇಕಾಗಿದೆ ಎಂದು ಸಚಿವೆ ತಿಳಿಸಿದರು.
ಉಚ್ಚ ನ್ಯಾಯಾಲಯ (Supreme Court) ಆದೇಶವನ್ನ ಪಾಲನೆ ಮಾಡಿಕೊಂಡು ಮಸೂದೆ ಜಾರಿಗೆ ತರಲಾಗುವುದು. ಈ ಮಸೂದೆಯಿಂದ ರಾಜ್ಯದ ಸಾವಿರಾರು ದೇವಾಲಯಗಳು ರಕ್ಷಣೆಯಾಗಲಿದೆ. ಎಲ್ಲಾ ಧರ್ಮದ ದೇವಾಲಯ, ಚರ್ಚು, ಮಸೀದಿಗಳು ರಕ್ಷಣೆಯಾಗಲಿದೆ ಎಂದು ಮೈಸೂರಿನಲ್ಲಿಂದು ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಹುಚ್ಚಗಣಿ ಮಹದೇವಮ್ಮ ಪುರಾತನ ದೇಗುಲ ಅಲ್ಲ
ನಂಜನಗೂಡು ತಾಲೂಕಿನ ಹುಚ್ಚಗಣಿ ಮಹದೇವಮ್ಮ ಪುರಾತನ ದೇಗುಲ ಅಲ್ಲ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಆಯುಕ್ತರು ತಿಳಿಸಿದ್ದಾರೆ.
3000 ಸಾವಿರ ವರ್ಷದ ನಂಜನಗೂಡು ದೇಗುಲವು ಧ್ವಂಸ : ಬೃಹತ್ ಪ್ರತಿಭಟನೆ
ಗ್ರಾಮದ ದೇವಾಲಯವು ಪುರಾತತ್ವ ಇಲಾಖೆಯ ಸಂರಕ್ಷಿತ ಸ್ಮಾರಕಗಳ ಪಟ್ಟಿಯಲ್ಲಿ ಸೇರಿಲ್ಲ ಎಂದು ಷರಾ ಬರೆದು ನಂಜನಗೂಡು ತಹಸೀಲ್ದಾರ್‌ಗೆ ತಿಳಿಸಿದ್ದಾರೆ. ದೇವಾಲಯ ನಿರ್ಮಾಣವಾಗಿದ್ದ ಸ್ಥಳದ ನಕ್ಷೆ ಲಭ್ಯವಾಗಿದೆ ಎಂದಿದ್ದಾರೆ.
ದೇವಾಲಯ ಹರದನಹಳ್ಳಿ ಸರ್ವೆ ನಂ 126ರ ಪಕ್ಕದಲ್ಲಿದೆ. ರಾಜ್ಯ ಹೆದ್ದಾರಿ 57ರ ಸರ್ಕಾರಿ ಜಾಗದಲ್ಲಿದೆ ಎಂದು ನಕ್ಷೆ ವರದಿ ತಿಳಿಸಿದೆ.
ಮೈಸೂರಿನಲ್ಲಿ 93 ದೇಗುಲಗಳ ಧ್ವಂಸಕ್ಕೆ ನೀಡಿದ ಆದೇಶದಂತೆ 3000 ವರ್ಷದಷ್ಟು ಹಳೆಯ ಹುಚ್ಚಗಣಿ ದೇಗುಲವನ್ನು ಧ್ವಂಸ ಮಾಡಲಾಗಿತ್ತು. ಇದನ್ನು ಅತ್ಯಂತ ಪುರಾತನ ಕಾಲದ ದೇಗುಲ ಎನ್ನುವುದಕ್ಕೆ ಅನೇಕ ಸಾಕ್ಷ್ಯಗಳು ಲಭ್ಯವಾಗಿದ್ದವು.