ಅಣ್ಣ-ತಮ್ಮ ಇಬ್ಬರೂ ಆತ್ಮಹತ್ಯೆಗೆ ಶರಣು: ಸಾವಲ್ಲೂ ಒಂದಾದ ಸಹೋದರರು

By Kannadaprabha NewsFirst Published Sep 26, 2021, 10:57 AM IST
Highlights
  • ಮನೆಯಲ್ಲಿ ಅಣ್ಣ ತಮ್ಮ ಇಬ್ಬರೂ ಆತ್ಮಹತ್ಯೆ ಶರಣಾಗಿ ಸಾವಿನಲ್ಲೂ ಸಹೋದರರು ಒಂದಾದ ಘಟನೆ
  • ಅಣ್ಣನ ಸಾವಿನ ಸುದ್ದಿ ತಿಳಿಯುತ್ತಿದ್ದ ವಿಷ ಸೇವಿಸಿ ತಮ್ಮನೂ ಆತ್ಮಹತ್ಯೆಗೆ ಶರಣು

 ಮೈಸೂರು (ಸೆ.26): ಮನೆಯಲ್ಲಿ ಅಣ್ಣ ತಮ್ಮ ಇಬ್ಬರೂ ಆತ್ಮಹತ್ಯೆ (Suicide) ಶರಣಾಗಿ ಸಾವಿನಲ್ಲೂ ಸಹೋದರರು ಒಂದಾದ ಘಟನೆ ಮೈಸೂರಲ್ಲಿ (mysuru) ನಡೆದಿದೆ. 

ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆಮನುಗನಹಳ್ಳಿ ಗ್ರಾಮದಲ್ಲಿ ಅಣ್ಣ ಸಿದ್ದರಾಜು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು, ಸಾವಿನ ಸುದ್ದಿ ತಿಳಿದು ಕ್ರಿಮಿನಾಶಕ ಸೇವಿಸಿ ತಮ್ಮ‌ ನಾಗರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ನಾಲ್ಕು ದಿನಗಳ ಹಿಂದೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ತಮ್ಮ ನಾಗರಾಜು  ವಿಷ ಸೇವನೆ ಮಾಡಿದ್ದು ವಿಷಯ ತಿಳಿಯುತ್ತಿದ್ದಂತೆ ತಕ್ಷಣ ಆಸ್ಪತ್ರೆಗೆ (hospital) ದಾಖಲಿಸಲಾಗಿತ್ತು. ಅದರೆ  ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. 

ಸಾವಿನಲ್ಲೂ ಒಂದಾದ ಅವಳಿ ಸಹೋದರಿಯರು!

ಹೆಚ್.ಡಿ.ಕೋಟೆ ತಾಲೂಕಿನ ಕಟ್ಟೆ ಮನುಗನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ.  ಮನೆಯಲ್ಲಿ ಕಿತ್ತು ತಿನ್ನುವ ಬಡತನ ಇದ್ದು ಕುಟುಂಬ ನಿರ್ವಹಣೆಯು ಅತ್ಯಂತ ದುಸ್ಥರವಾಗಿದೆ. ಕೊರೋನಾ (corona) ಮಹಾಮಾರಿ ಕಾಡಿದ ಸಂದರ್ಭದಲ್ಲಿ ಸೂಕ್ತ ರೀತಿಯ ಉದ್ಯೊಗವು ಇಲ್ಲದಂತಾಗಿದೆ. ಈ ನಡುವೆ ಅಣ್ಣನ ಸಾವಿನ ಬಳಿಕ ಸಂಭವಿಸಿದ ತಮ್ಮನ ಸಾವು ಕುಟುಂಬವನ್ನು ಇನ್ನಷ್ಟು ಕಂಗೆಡಿಸಿ ದಿಕ್ಕು ತೊಚದಂತೆ ಮಾಡಿದೆ. 

ಸಿದ್ದರಾಜು ಮನೆಯಲ್ಲಿ ಅವರ ಪತ್ನಿ ಮಕ್ಕಳಿದ್ದು, ಮುಂದಿನ ದಾರಿ ಕಾಣದೆ ಕುಟುಂಬ ಕಂಗಾಲಾಗಿದೆ.  ಹೆಚ್.ಡಿ.ಕೋಟೆ ಪೊಲಿಸ್ (police) ಠಾಣಾ ವ್ಯಾಪ್ತಿಯಲ್ಲಿ ಘಟನೆ. 

ಈ ಹಿಂದೆಯೂ ಮಂಡ್ಯ ಜಿಲ್ಲೆಯಲ್ಲಿ ಮದುವೆ ವಿರೋಧಿಸಿ ಸಹೊದರಿಯರು ಇಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಮದುವೆಯಾದ ಬಳಿಕ ಸಹೋದರಿಯರು ದೂರಾಗುವ ಆತಂಕದಲ್ಲಿ  ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದರು. ಅದೇ ರೀತಿ ಇದೀಗ ಅಣ್ಣ ತಮ್ಮನೂ ಆತ್ಮಹತ್ಯೆ ಮಾಡಿಕೊಂಡು ಒಂದೇ ಹಾದಿ ಹಿಡಿದಿದ್ದಾರೆ. 

ನಂಜನಗೂಡು ದೇವಾಲಯಲ್ಲಿ ವ್ಯಕ್ತಿ ಆತ್ಮಹತ್ಯೆ

ಮೈಸೂರು (mysuru) ಜಿಲ್ಲೆಯ ನಂಜನಗೂಡಿನ (Nanjanagudu) ಪ್ರಸಿದ್ದ  ನಂಜುಂಡೇಶ್ವರನ‌ ಸನ್ನಿದಿಯಲ್ಲಿ ವ್ಯಕ್ತಿ‌ಯೋರ್ವರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. 

ದೇವಾಲಯದ ದಾಸೋಹ ಭವನದ ಪಕ್ಕದಲ್ಲಿ ಇರುವ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ವ್ಯಕ್ತಿ ಮೃತ ದೇಹ ಪತ್ತೆಯಾಗಿದೆ. ಆದರೆ ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.

ವಾಕಿಂಗ್ ಮಾಡುತ್ತಿದ್ದ ಜನರು ನೋಡಿ ದೇವಾಲಯದಲ್ಲಿ ವ್ಯಕ್ತಿ ನೇಣಿಗೆ ಶರಣಾಗಿರುವ ವಿಚಾರದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸದ್ಯ ನೆಲಕ್ಕೆ ತಾಗುವ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.

ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. 

click me!