Chikkamagaluru: ಮಲೆನಾಡಿನಲ್ಲಿ ಜೀಪ್ ರ್ಯಾಲಿ: ಕೊರೋನಾದಿಂದ‌ ಸ್ಥಗಿತವಾಗಿದ್ದ ರೇಸ್

By Govindaraj S  |  First Published Jun 12, 2022, 10:43 PM IST

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಸ ಕ್ರೀಡೆ , ಮನೋರಂಜನೆಗಾಗಿ ಸಾಕಷ್ಟು ಕ್ರೀಡಾ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಜಿಲ್ಲೆಯಲ್ಲಿ ಆಗಾಗ್ಗೆ ಬೈಕ್-ಕಾರ್-ಜೀಪ್ ರ್ಯಾಲಿಗಳು ನಡೆಯುತ್ತಿರುತ್ತೆ.


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು

ಚಿಕ್ಕಮಗಳೂರು (ಜೂ.12): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಾಹಸ ಕ್ರೀಡೆ , ಮನೋರಂಜನೆಗಾಗಿ ಸಾಕಷ್ಟು ಕ್ರೀಡಾ ಚಟುವಟಿಕೆಗಳು ನಡೆಯುತ್ತಲೇ ಇರುತ್ತದೆ. ಜಿಲ್ಲೆಯಲ್ಲಿ ಆಗಾಗ್ಗೆ ಬೈಕ್-ಕಾರ್-ಜೀಪ್ ರ್ಯಾಲಿಗಳು ನಡೆಯುತ್ತಿರುತ್ತೆ. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಕೊರೋನಾವಿದ್ದ ಕಾರಣ ಯಾವುದೇ ರೇಸ್‌ಗಳು ನಡೆದಿರಲಿಲ್ಲ. ಆದ್ರೆ, ಇಂದು ನಾನಾ ರೀತಿಯ ಜೀಪ್‌ಗಳು ಅಖಾಡಕ್ಕಿಳಿದ್ದವು. ಒಂದಕ್ಕಿಂತ ಒಂದು ನಾನಾ ನೀನಾ ಅಂತ ಸೆಡ್ಡು ಹೊಡೆದು ನಿಂತಿದ್ವು. ಹಾವು ಬಳುಕಿನ ಮೈಕಟ್ಟಿನ ರಸ್ತೆಯಲ್ಲಿ ತಗ್ಗು-ದಿಬ್ಬುಗಳನ್ನ ಲೆಕ್ಕಿಸದೇ ಹೊಂಡ-ಗುಂಡಿಗಳಲ್ಲಿ ಜೀಪ್‌ಗಳು ಓಡಿದ ಪರಿ ಕಂಡು ಪ್ರೇಕ್ಷಕರು ಫುಲ್ ಖುಷ್ ಆದರು.

Tap to resize

Latest Videos

ಕೆಸರು ಗದ್ದೆಯಲ್ಲಿ ಜೀಪುಗಳು: ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರದ ಅಡ್ವೆಂಚರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮಡ್ ರೇಸನ್ನು ಆಯೋಜಿಸಿತ್ತು.ಎನ್ ಆರ್ ಪುರದ  ಹೊನ್ನೆಗುಡಿಗೆಯಲ್ಲಿ ನಡೆದ ಕೆಸರು ಗದ್ದೆಯಲ್ಲಿ ಶಕ್ತಿ ಮೀರಿ ಜೀಪ್‌ಗಳು‌ ಸಾಗಿದ್ರೆ ಮತ್ತೊಂದೆಡೆ ಜಾರೋ ಮಣ್ಣಿನಲ್ಲಿ ತಗ್ಗು-ದಿಬ್ಬಕ್ಕೆ ತಕ್ಕಂತೆ ಎಕ್ಸಲೇಟರ್ ರೈಜ್ ಮಾಡ್ತಿರೋ ಚಾಲಕರು. ಜಾರುವ ತಿರುವಿನಲ್ಲಿ ನೋಡ್ದೋರ ತಲೆ ತಿರುಗುವಂತೆ ನುಗ್ತಿರೋ ಜೀಪ್‌ಗಳನ್ನ ಕಂಡು ಕೂಗಾಡ್ತಿರೋ ಪ್ರೇಕ್ಷಕರು. ಹೌದು! ಮಹಿಂದ್ರಾ 4x4, ಬೊಲೆರೋ, ಜಿಪ್ಸಿ, ಪಜೆರೋ, ಮಿತ್ಸುಬಾ ಸೇರಿದಂತೆ ನಾನಾ ರೀತಿಯ ಜೀಪ್ಗಳು ರೇಸ್‌ನಲ್ಲಿ ಭಾಗಿಯಾಗಿದ್ದವು. 

Chikkamagaluru: ಪತ್ರಿಕೋದ್ಯಮ ಪದವಿಯಲ್ಲಿ ಚಿನ್ನದ ಪದಕ ಪಡೆದ ಆಮುದಾ!

ಕಿರಿದಾದ ಅಖಾಡದಲ್ಲಿ ರೋಯ್... ರೋಯ್... ಅಂತ ಸಾಗ್ತಿದ್ರೆ ನೋಡ್ದೋರಿಗೆ ತಾವೇ ಜೀಪ್ ಓಡಿಸಿದಷ್ಟು ಖುಷಿ ಆಗ್ತಿತ್ತು. ಕಾಫಿನಾಡು ಚಿಕ್ಕಮಗಳೂರಲ್ಲಿ ಈ ರೀತಿಯ ಜೀಪ್ ರೇಸ್‌ಗಳು ಆಗಾಗ-ಅಲ್ಲಲ್ಲಿ ನಡೀತಲೇ ಇರುತ್ತೆ. ಆದ್ರೆ ಕೊರೋನ ಕಾರಣದಿಂದ ಕಳೆದ ಎರಡು ವರ್ಷದಿಂದ ಇಂತಹ ರೇಸ್‌ಗಳನ್ನ ಮಿಸ್ ಮಾಡಿಕೊಂಡಿದ್ದ ಕಾಫಿನಾಡಿಗರು ವೀಕೆಂಡ್‌ನಲ್ಲಿ ನಡೆದ ಈ ಅಡ್ವೆಂಚರಸ್ ರೇಸ್ ನೋಡಿ ಸಖತ್ ಎಂಜಾಯ್ ಮಾಡಿದರು.

ಸ್ಪರ್ಧಾಳುಗಳಿಂದ  ಮೈನವಿರೇಳಿಸೋ ಪ್ರದರ್ಶನ: ಪ್ರೇಕ್ಷಕರ ಮನೋರಂಜನೆಗೆಂದೇ ಸಿದ್ಧಪಡಿಸಿದ್ದ ಟ್ರ್ಯಾಕ್‍ನಲ್ಲಿ ಸ್ಪರ್ಧಾಳುಗಳು ಮೈನವಿರೇಳಿಸೋ ಪ್ರದರ್ಶನ ತೋರಿಸಿದರು. ಬಯಲು ಪ್ರದೇಶದ ಹದಿನೈದು  ಕಿ.ಮೀ. ವ್ಯಾಪ್ತಿಯಲ್ಲಿ ನಡೆದ ಈ ರೇಸ್‌ನಲ್ಲಿ ಚಾಲಕರ ಚಾಕಚಕ್ಯತೆ ನೋಡ್ತಿದ್ದೋರು ವಾಹ್ ಅಂತ  ಕೂಗಾಡ್ತಿದ್ರು. ಅಖಾಡದಲ್ಲಿ ಕೇರಳ, ಚೆನ್ನೈ,ತಮಿಳುನಾಡಿನ ಡ್ರೈವರ್‌ಗಳಿಗೆ ರಾಜ್ಯದ ಚಿಕ್ಕಮಗಳೂರು, ಬೆಂಗಳೂರು,ಮೈಸೂರು, ಬೆಳಗಾಂ, ಹಾಸನ,ಮಂಗಳೂರು, ಕೊಡಗು, ತುಮಕೂರಿನ ರೈಡರ್‌ಗಳು ಸವಾಲೆಸೆದಿದ್ದರು. ರೇಸ್‌ನಲ್ಲಿ ಒಟ್ಟು 110ಕ್ಕೂ ಹೆಚ್ಚು ರೈಡರ್‌ಗಳು ಗೆಲುವಿನ ಜಿದ್ದಾಜಿದ್ದಿಗೆ ಬಿದ್ದಿದ್ರು. 

Chikkamagaluru ; ಅಕ್ರಮ ಗೋಮಾಂಸ ಮಾರಾಟ ಶೆಡ್ ತೆರವು

ಈ ಸ್ಪರ್ಧೆಯಲ್ಲಿ ಚಾಂಪಿಯನ್ ಆಗೋಕೆ ರೈಡರ್‌ಗಳು ಮನಸ್ಸೋ ಇಚ್ಛೆ ನುಗ್ತಿರೋದ್ನ ಕಂಡ ಪ್ರೇಕ್ಷಕರು ಫುಲ್ ಎಂಜಾಯ್ ಮಾಡಿದರು. ಜಾರುವ ಟ್ರಾಕ್, ಉಬ್ಬು ತಗ್ಗುಗಳ ಮಧ್ಯೆ ಜೀಪುಗಳನ್ನು ಚಾಲನೆ ಮಾಡೋದೇ ಸವಾಲಾಗಿತ್ತು. ಸ್ಥಳೀಯ ಶಾಸಕ ಟಿ.ಡಿ.ರಾಜೇಗೌಡ ಕೂಡ ಸ್ಪರ್ಧೆಯಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಒಟ್ಟಾರೆ, ಪ್ರಕೃತಿ ಮಡಿಲ ಮಧ್ಯೆ ನಡೆದ ಈ ರೋಮಾಂಚನ ಸ್ಪರ್ಧೆಯನ್ನು ನೋಡಲೆಂದೇ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿದ್ದರು. ನೆರೆದಿದ್ದ ಪ್ರೇಕ್ಷಕರನ್ನ ರಂಜಿಸುತ್ತಾ ರೋಂಯ್.. ರೋಂಯ್ ಅಂತ ಹೊರಟ ಜೀಪ್ ರೈಡರ್‌ಗಳು ಕೂಡ ಸಖತ್ ಎಂಟರ್ ಟೈನ್ಮೆಂಟ್ ಕೊಟ್ರು. ಪ್ರೇಕ್ಷಕರ ಮನೋರಂಜನೆಗೆಂದೇ ಆಯೋಜಿಸಿದ್ದ ಟ್ರ್ಯಾಕ್ ಹಾಗೂ ರೇಸ್‍ನಲ್ಲಿ ಹೊರ ರಾಜ್ಯದ ರೈಡರ್‌ಗಳ ಜೊತೆ ರಾಜ್ಯದ ಸ್ಪರ್ಧಾಳುಗಳು ಭಾಗವಹಿಸಿ ರೋಚಕ ಪ್ರದರ್ಶನ ನೀಡಿದ್ರು. ಜನ ಇಂತಹಾ ರ್ಯಾಲಿಗಳು ನಿರಂತರವಾಗಿರಲೆಂದು ಆಶಿಸಿದರು.

click me!