
ಹುಬ್ಬಳ್ಳಿ(ಮಾ.10): ಕಳೆದ ಎರಡು ವರ್ಷ ಕೋವಿಡ್‌ನಿಂದಾಗಿ(Covid-19) ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ(NWKRTC) ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸರ್ಕಾರದ ಆರ್ಥಿಕ ಸಹಾಯದ ಅವಶ್ಯಕತೆ ಇದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗುರುದತ್ತ ಹೆಗಡೆ ಹೇಳಿದರು.
ಬುಧವಾರ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಸಂಸ್ಥೆಯ ಪುನಶ್ಚೇತನಕ್ಕಾಗಿ ಸರ್ಕಾರದಿಂದ(Government of Karnataka) ನೇಮಕಗೊಂಡ ಏಕ ವ್ಯಕ್ತಿ ಸಮಿತಿ ಅಧ್ಯಕ್ಷ ಎಂ.ಆರ್. ಶ್ರೀನಿವಾಸಮೂರ್ತಿ ಅವರು ವ್ಯವಸ್ಥಾಪಕ ನಿರ್ದೇಶಕರ ಜತೆಗೆ ಸಭೆ ನಡೆಸಿದ ವೇಳೆ ವ್ಯವಸ್ಥಾಪಕ ನಿರ್ದೇಶಕರು ಸಂಸ್ಥೆಯ ಪರಿಸ್ಥಿತಿ ತೆರೆದಿಟ್ಟರು.
Karnataka Buses: ಸರ್ಕಾರಿ ಬಸ್ ಹತ್ತೋ ಮುನ್ನ ಚಿಲ್ಲರೆ ಇಟ್ಕೊಳ್ಳಿ, ಜಗಳ ಮಾಡಿದ್ರೆ 3 ವರ್ಷ ಜೈಲೇ ಗತಿ!
ಸಂಸ್ಥೆಯು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆ, ಹಣಕಾಸಿನ ಸ್ಥಿತಿಗತಿ ಮತ್ತು ಕೋವಿಡ್‌ನಿಂದಾದ ನಷ್ಟದ ಕುರಿತು ವಿಸ್ತ್ರತವಾಗಿ ವಿವರಿಸಿದರು. ಕಳೆದ ಎರಡು ವರ್ಷದಿಂದ ಯಾವುದೇ ಹೊಸ ವಾಹನಗಳನ್ನು ಖರೀದಿಸಿಲ್ಲ. ನಿವೃತ್ತ ನೌಕರರಿಗೆ ಸಲ್ಲಬೇಕಾದ ಉಪಧಾನ ಮತ್ತು ಇನ್ನಿತರ ಸೌಲಭ್ಯವನ್ನು ಒದಗಿಸಲು ಸಾಧ್ಯವಾಗಿಲ್ಲ ಎಂದರು.
ಕಾರ್ಮಿಕ ಮುಖಂಡರು ಮಾತನಾಡಿ, ಸರ್ಕಾರದಿಂದ ಮೋಟಾರು ವಾಹನ ತೆರಿಗೆ ವಿನಾಯಿತಿ ಹಾಗೂ ಟೋಲ್‌ಗಳಲ್ಲಿ ಸಂಸ್ಥೆಯ ಬಸ್‌ಗಳಿಗೆ ವಿನಾಯಿತಿ ನೀಡುವಂತೆ ಸರ್ಕಾರ ಕ್ರಮ ವಹಿಸಬೇಕು. ಈಗಾಗಲೇ ನೌಕರರ ವೇತನ(Salary) ಪರಿಷ್ಕರಣೆ ಮಾಡುವುದು ಸಾಕಷ್ಟು ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತೆ ತಮ್ಮ ವರದಿಯಲ್ಲಿ ಉಲ್ಲೇಖಿಸಲು ಕೋರಿದರು.
ಸಾರಿಗೆ ಸಂಸ್ಥೆಗಳು ಸಾಕಷ್ಟುಸಾಮಾಜಿಕ ಹೊಣೆಗಾರಿಕೆ ನಿಭಾಯಿಸುತ್ತಿವೆ. ನಗರ, ಗ್ರಾಮೀಣ, ಅಂತರ್ ರಾಜ್ಯಗಳಿಗೆ ಸಾರಿಗೆ ಸೌಕರ್ಯವನ್ನು ಅತ್ಯಂತ ಜವಾಬ್ದಾರಿಯುತವಾಗಿ ಒದಗಿಸಲಾಗುತ್ತಿದೆ. ಆದ್ದರಿಂದ ಪ್ರತಿ ವರ್ಷ ಸರ್ಕಾರವು ಮಂಡಿಸುವ ಮುಂಗಡ ಪತ್ರದಲ್ಲಿ ಬೇರೆ ಇಲಾಖೆಗಳಿಗೆ ಒದಗಿಸುತ್ತಿರುವಂತೆ ಸಾರಿಗೆ ಸಂಸ್ಥೆಗೂ ಸಹ ಅನುದಾನ ಒದಗಿಸಲು ಒತ್ತಾಯಿಸಿದರು. ಜತೆಗೆ ಸಿಬ್ಬಂದಿ ವೇತನವನ್ನು ಪೂರ್ಣ ಪ್ರಮಾಣದಲ್ಲಿ ನೀಡಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಕೋವಿಡ್ ಬಿಟ್ಟರೂ ವಾಯುವ್ಯ ಸಾರಿಗೆ ಸಂಸ್ಥೆಗೆ ತಪ್ಪದ ಸಂಕಷ್ಟ
ಸಭೆಯ ನಂತರ ಎಂ.ಆರ್. ಶ್ರೀನಿವಾಸಮೂರ್ತಿ, ಹುಬ್ಬಳ್ಳಿಯ(Hubballi) ನಗರ ಸಾರಿಗೆ ಮತ್ತು ಗ್ರಾಮಾಂತರ ವಿಭಾಗ ಹಾಗೂ ಬಿಆರ್‌ಟಿಎಸ್(BRTS) ಕಾರಿಡಾರ್ ಮತ್ತು ಘಟಕಗಳಿಗೆ ಭೇಟಿ ನೀಡಿ ಸಿಬ್ಬಂದಿಯ ಅಹವಾಲು ಸ್ವೀಕರಿಸಿದರು. ಸಭೆಯಲ್ಲಿ ಹಿರಿಯ ಅಧಿಕಾರಿಗಳಾದ ರಾಜೇಶ ಹುದ್ದಾರ, ಮಂಜುಳಾ ಪಿ. ನಾಯ್ಕ, ಮಾಲತಿ ಎಸ್.ಎಸ್., ಜಗದಂಬಾ ಕೊಪರ್ಡೆ, ವಿವೇಕಾನಂದ ವಿಶ್ವಜ್ಞ ಮತ್ತು ಟಿ.ಎಲ್. ಶ್ರೀನಾಥ, ಕಾರ್ಮಿಕ ಮುಖಂಡರಾದ ಹನಮಂತಪ್ಪ ಇಟಗಿ, ಗಂಗಾಧರ ಕಮಲದಿನ್ನಿ, ಆರ್.ಎಫ್. ಕವಳಿಕಾಯಿ, ಎಂ.ವಿ. ಭಗವತಿ, ಡಿ.ಪ್ರಸಾದ, ಜಿ.ಎಚ್. ಯಾವಗಲ್ ಹಾಗೂ ಇನ್ನಿತರರು ಪಾಲ್ಗೊಂಡಿದ್ದರು.
'ಕೊರೋನಾ ಬಳಿಕವೂ ಸಾರಿಗೆ ಸಂಸ್ಥೆ ಪ್ರಗತಿ ನಿರೀಕ್ಷೆಯಂತಿಲ್ಲ'
ಕಾರವಾರ: ಕೊರೋನಾ(Coronavirus) ಬಳಿಕವೂ ಸಾರಿಗೆ ಸಂಸ್ಥೆ(KSRTC) ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್. ಪಾಟೀಲ್ ಹೇಳಿದ್ದರು.
ಫೆ.18 ರಂದು ಇಲ್ಲಿನ ಬಸ್ ಡಿಪೋಗೆ ಶುಕ್ರವಾರ ಭೇಟಿ ನೀಡಿದ್ದ ಅವರು ಕೊರೋನಾ ಲಾಕ್‌ಡೌನ್(Lockdown) ಆಗಿದ್ದರಿಂದ ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಕಳೆದೊಂದು ವಾರದಿಂದ ಕೊಂಚ ಸುಧಾರಿಸಿಕೊಂಡಿದೆ. ಒಂದು ಕಿಮೀಗೆ 40 ರು. ಆದಾಯವಾದರೆ ತಕ್ಕ ಮಟ್ಟಿಗೆ ಸುಧಾರಿಸಿಕೊಳ್ಳಬಹುದು. ಇಷ್ಟಾದರೆ ಮಾತ್ರ ನಿರ್ವಹಣೆ, ವೇತನ ನೀಡಲು ಸಾಧ್ಯ. ಆದರೆ ಈ ಪ್ರತಿ ಕಿ.ಮೀ.ಗೆ 29ರಿಂದ 30 ರು. ಬರುತ್ತಿದೆ. ಇನ್ನು ನಿರೀಕ್ಷಿತ ಮಟ್ಟದಲ್ಲಿ ಪಿಕ್ ಅಪ್ ಆಗಿಲ್ಲ ಎಂದು ತಿಳಿಸಿದ್ದರು.