ಸಹೋದ್ಯೋಗಿಗಳ ಸ್ನಾನದ ವಿಡಿಯೋ ಪ್ರಿಯಕರಗೆ ಕಳಿಸುತ್ತಿದ್ದ ನರ್ಸ್ : ಪ್ರಿಯಕರ ಅರೆಸ್ಟ್

Kannadaprabha News   | Asianet News
Published : Dec 15, 2020, 08:36 AM ISTUpdated : Dec 15, 2020, 10:24 AM IST
ಸಹೋದ್ಯೋಗಿಗಳ ಸ್ನಾನದ ವಿಡಿಯೋ ಪ್ರಿಯಕರಗೆ ಕಳಿಸುತ್ತಿದ್ದ ನರ್ಸ್ : ಪ್ರಿಯಕರ ಅರೆಸ್ಟ್

ಸಾರಾಂಶ

ನರ್ಸ್ ಒಬ್ಬರು ತಮ್ಮ ಸಹೋದ್ಯೋಗಿಗಳ ಸ್ನಾನದ ವಿಡಿಯೋವನ್ನು ರೆಕಾರ್ಡ್ ಮಾಡಿ ತನ್ನ ಪ್ರಿಯಕರಗೆ ಕಳಿಸುತ್ತಿದ್ದ ವಿಚಾರ ಬೆಳಕಿಗೆ ಬಂದಿದ್ದು ಆಕೆಯನ್ನು ಅರೆಸ್ಟ್ ಮಾಡಲಾಗಿದೆ. 

ಬೆಂಗಳೂರು (ಡಿ. 15): ನರ್ಸ್‌ಗಳ ಸ್ನಾನದ ದೃಶ್ಯಾವಳಿಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದ ಪ್ರೇಯಸಿಯಿಂದ ಸ್ವೀಕರಿಸುತ್ತಿದ್ದ ಪ್ರಿಯಕರನನ್ನು ವೈಟ್‌ ಫಿಲ್ಡ್ ಪೊಲೀಸರು  ಬಂಧಿಸಿದ್ದಾರೆ. 

ಚೆನ್ನೈನ ಪ್ರತಿಷ್ಠಿತ ಹೋಟೆಲ್‌ ಬಾಣಸಿಗ ಪ್ರಭು (31) ಬಂಧಿತ ಆರೋಪಿಯಾಗಿದ್ದಾನೆ. 

ಪ್ರೇಯಸಿ ನರ್ಸ್ ಅಶ್ವಿನಿ  ವಾಟ್ಸ್‌ ಆಪ್‌ನಲ್ಲಿ ಕಳುಹಿಸುತ್ತಿದ್ದ ಅಶ್ಲೀಲ  ವಿಡಿಯೋಗಳನ್ನು ನೋಡಿ ಅನಂತರ ಡಿಲೀಟ್ ಮಾಡುತ್ತಿದ್ದಾಗಿ ಆರೋಪಿ ಹೇಳಿದ್ದಾನೆ. ಮೊಬೈಲ್ ವಶಕ್ಕೆ ಪಡೆದಿದ್ದು  ಹೆಚ್ಚಿನ ವಿಚಾರಣೆಗೆ ಒಳಪಡಿಸಿರುವುದಾಗಿ  ಪೊಲೀಸರು ಹೇಳಿದ್ದಾರೆ. 

ಪತ್ನಿಯನ್ನೇ ಪಣಕ್ಕಿಟ್ಟು ಸೋತು ಕಳುಹಿಸಿಕೊಟ್ಟ.. ಮನೆಗೆ ಬಂದವಳ ಗುಪ್ತಾಂಗಕ್ಕೆ ಆಸಿಡ್ ಹಾಕಿದ! .

ಅಶ್ವಿನಿ ವೈಟ್‌ಫಿಲ್ಡ್‌ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ಆಸ್ಪತ್ರೆ ಆಡಳಿತ ಮಂಡಳಿ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುತ್ತಿರುವ ನರ್ಸ್‌ಗಳಿಗೆ ವಸತಿ  ಗೃಹದ  ಸೌಲಭ್ಯ ಒದಗಿಸಿತ್ತು. ಡಿ.5ರ ಸಂಜೆ ನರ್ಸ್‌ ಒಬ್ಬರು ಸ್ನಾನ ಮಾಡಲು ಹೋದಾಗ ಮೊಬೈಲ್‌ ಬಚ್ಚಿಟ್ಟಿರುವುದು  ಪತ್ತೆಯಾಗಿದೆ. 

ಪರಿಶಿಲಿಸಿದಾಗ  ವಿಡಿಯೋ ರೆಕಾರ್ಡ್ ಆನ್‌ ಆಗಿರುವುದು ಕಂಡು ಬಂದಿದೆ. ಗಾಬರಿಗೊಂಡ ನರ್ಸ್ ಮೊಬೈಲ್‌ನಲ್ಲಿ  ಗ್ಯಾಲರಿ ಪರಿಶಿಲಿದಾಗ ಹಲವು ಸಿಬ್ಬಂದಿ ಸ್ನಾನದ ದೃಶ್ಯ ಸೆರೆಯಾಗಿತ್ತು. 

ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದುಇದೀಗ ಅಶ್ವಿನಿ ಹಾಗೂ ಪ್ರಿಯಕರನನ್ನು ಅರೆಸ್ಟ್ ಮಾಡಲಾಗಿದೆ. 

PREV
click me!

Recommended Stories

ದರ್ಶನ್ ಗ್ಯಾಂಗ್‌ನಿಂದ ಕೊಲೆಗೀಡಾದ ರೇಣುಕಾಸ್ವಾಮಿಗೆ ಸತ್ತಮೇಲೂ ನೆಮ್ಮದಿಯಿಲ್ಲ! ಸಮಾಧಿ ಧ್ವಂಸಗೈದ ಡೆವಿಲ್ ಗ್ಯಾಂಗ್‌!
ಧರ್ಮಸ್ಥಳ ನೂರಾರು ಶವ ಹೂಳಿದ ಕೇಸ್: ಬುರುಡೆ ಗ್ಯಾಂಗ್ ಷಡ್ಯಂತ್ರ ಬಯಲು - SIT ವರದಿಯಲ್ಲಿ ಒಬ್ಬರಿಗೆ ಕ್ಲೀನ್ ಚಿಟ್!