ಅಪರಿಚಿತರಿಂದ ಬ್ಯಾಂಕ್ ಖಾತೆಗೆ ಬಂತು 18.60 ಲಕ್ಷ ರು : ಆಮೇಲೇನಾಯ್ತು..?

By Kannadaprabha News  |  First Published Dec 15, 2020, 7:42 AM IST

ಅಪರಿಚಿತರಿಂದ ಮಹಿಳೆಯೋರ್ವರ ಬ್ಯಾಂಕ್ ಖಾತೆಗೆ 19 ಲಕ್ಷ ಹಣ ಬಂದಿತ್ತು. ಹಣ ಪಡೆದ ಮಹಿಳೆ ಅದರಲ್ಲಿ ಅಲ್ಪ ಪಾಲನ್ನು ಬಳಸಿಕೊಂಡಿದ್ದಳು. ಆಮೇಲೇನಾಯ್ತು..?


 ಬೆಂಗಳೂರು (ಡಿ.15): ಸ್ನೇಹಿತೆಯೊಬ್ಬರ ಬ್ಯಾಂಕ್ ಖಾತೆಗೆ ಹಾಕಬೇಕಿದ್ದ 18.60 ಲಕ್ಷ ಹಣವನ್ನು ಕಣ್ತಪ್ಪಿನಿಂದಾಗಿ  ಬೇರೊಬ್ಬರ ಖಾತೆಗೆ ಜಮೆ ಮಾಡಿದ್ದು ಹಣ ವಾಪಸ್ ಕೇಳಿದ್ದಕ್ಕೆ ಬೆದರಿಕೆ ಹಾಕಲಾಗಿದೆ. 

ಈ ಸಂಬಂಧ ಚನ್ನಮ್ಮನಕೆರೆ ಅಚ್ಚುಕಟ್ಟು  ನಿವಾಸಿ ಜ್ಯೋತಿ  ಎಂಬುವವರು ಬಸವನಗುಡಿ ಠಾಣೆಯಲ್ಲಿ ಶಾಂತರತ್ನ ಎಂಬುವರ ವಿರುದ್ಧ ದೂರು ನೀಡಿದ್ದಾರೆ.

Latest Videos

undefined

ಸ್ನೇಹಿತೆಯೊಬ್ಬರಿಗೆ  ಹಣಕಾಸಿನ ತೊಂದರೆ ಇತ್ತು.  ಸಹಾಯ ಮಾಡಲು ಮುಮದಾಗಿದ್ದ ಜ್ಯೀತು ಸ್ನೇಹಿತೆ ನೀಡಿದ್ದ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಪ್ಪಾಗಿ  ಗ್ರಹಿಸಿ ಅಪರಿಚಿತರಾದ ಶಾಂತರತ್ನ ಖಾತೆಗೆ  ಜೂನ್ 19ರಮದು  ಆರ್‌ಟಿಜಿಎಸ್‌ ಮೂಲಕ ಹಣ ಜಮೆ ಮಾಡಿದ್ದರು. 

ಚಿನ್ನ ಖರೀದಿದಾರರಿಗೆ ಬಂಪರ್, ದರ ಭಾರೀ ಕುಸಿತ: ಹೀಗಿದೆ ಡಿ. 14ರ ರೇಟ್! ..

ಹಣ ತಮ್ಮ ಖಾತೆಗೆ  ಬಂದಿಲ್ಲವೆಂದು ಸ್ನೇಹಿತೆ  ಜ್ಯೋತಿಗೆ ಹೇಳಿದ್ದರು. ಬ್ಯಾಂಕ್‌ನಲ್ಲಿ ಪರಿಶೀಲನೆ ನಡೆಸಿದಾಗ ಶಾಂತರತ್ನ  ಖಾತೆಗೆ ಹಣ ಜಮೆ ಆಗಿದ್ದು  ಗೊತ್ತಾಗಿತ್ತು. ಅಷ್ಟರಕ್ಕೇ ಶಾಂತರತ್ನ  1.60 ಲಕ್ಷ ಡ್ರಾ ಮಾಡಿಕೊಂಡಿದ್ದರು. 

ಉಳಿದ ಹಣ ನೀಡುವಂತೆ  ಜ್ಯೋತಿ ಕೇಳುತ್ತಿದ್ದಂತೆ ಶಾಂತರತ್ನ ಜೀವ ಬೆದರಿಕೆ ಹಾಕಿದ್ದಾರೆ. ವಿಚಾರಣೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. 

click me!