* ಪ್ರವಾದಿ ಮೊಹಮ್ಮದ್‌ರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ
* ರಸ್ತೆ ಬದಿಯ ಎರಡು ಕಟ್ಟಡಗಳಿಗೆ ಹಗ್ಗ ಕಟ್ಟಿ ಪ್ರತಿಕೃತಿ ನೇತುಬಿಟ್ಟ ಕಿಡಿಗೇಡಿಗಳು
* ಬೆಳಗಾವಿಯ ಫೋರ್ಟ್ ರಸ್ತೆಯ ಮಸೀದಿಯ ಕೂಗಳತೆ ದೂರದಲ್ಲೇ ನಡೆದ ಘಟನೆ
ಬೆಳಗಾವಿ(ಜೂ.10): ಪ್ರವಾದಿ ಮೊಹಮ್ಮದ್‌ರ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ ಹಿನ್ನೆಲೆ ಬಿಜೆಪಿಯಿಂದ ಅಮಾನತುಗೊಂಡಿದ್ದ ನೂಪುರ್ ಶರ್ಮಾರ ಪ್ರತಿಕೃತಿಯನ್ನು ತಡರಾತ್ರಿ ಯಾರೋ ಕಿಡಿಗೇಡಿಗಳು ನಡುರಸ್ತೆಯಲ್ಲೇ ನೇತು ಹಾಕಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬೆಳಗಾವಿ ನಗರದ ರೇಲ್ವೆ ನಿಲ್ದಾಣಕ್ಕೆ ತೆರಳುವ ಫೋರ್ಟ್ ರಸ್ತೆಯಲ್ಲಿರುವ ಮಸೀದಿಯ ಕೂಗಳತೆ ದೂರದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ.
ಪ್ರತಿಕೃತಿಗೆ ಕೇಸರಿ ಸೀರೆ ಹಾಕಿ, ನೂಪುರ್ ಶರ್ಮಾರ ಭಾವಚಿತ್ರ ಹಚ್ಚಿ, ರಸ್ತೆಯ ಎರಡು ಬದಿಗಳಲ್ಲಿ ಕಟ್ಟಡಗಳ ಮೇಲೆ ಹಗ್ಗ ಕಟ್ಟಿ ನೇತು ಬಿಡಲಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ವೈರಲ್ ಆಗುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಮಾರ್ಕೆಟ್ ಠಾಣೆ ಪೊಲೀಸರು ಪ್ರತಿಕೃತಿ ತೆರವುಗೊಳಿಸಿದ್ದಾರೆ.
ಆಸ್ತಿ ವಿವಾದ: ಹುಟ್ಟುಹಬ್ಬ ಆಚರಣೆ ಗುಂಗಲಿದ್ದವನ ಮೇಲೆ ಡೆಡ್ಲಿ ಅಟ್ಯಾಕ್!
ಘಟನೆಗಳ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಮಾರ್ಕೆಟ್ ಠಾಣೆ ಪೊಲೀಸರು ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮರಾಗಳ ಪರಿಶೀಲನೆಯಲ್ಲಿ ತೊಡಗಿದ್ದು ಯಾರು ಈ ಕೃತ್ಯವೆಸಗಿದ್ದಾರೆ ಎಂಬುವರ ಪತ್ತೆಗೆ ಬಲೆಬೀಸಿದ್ದಾರೆ.