ಕೊರೋನಾ : ಬೆಂಗಳೂರಿಗರೇ ನಿಮಗಿಲ್ಲಿದೆ ಗುಡ್ ನ್ಯೂಸ್

Kannadaprabha News   | Asianet News
Published : Aug 25, 2020, 12:14 PM IST
ಕೊರೋನಾ  : ಬೆಂಗಳೂರಿಗರೇ ನಿಮಗಿಲ್ಲಿದೆ ಗುಡ್ ನ್ಯೂಸ್

ಸಾರಾಂಶ

ಕೊರೋನಾ ಆತಂಕದಿಂದ ಬದುಕುತ್ತಿರುವ ಬೆಂಗಳೂರಿನ ಜನತೆಗೆ ಇಲ್ಲೊಂದು ನಿರಾಳತೆಯ ಸುದ್ದಿ ಇಲ್ಲಿದೆ. ಅದೇನದು..?

ಬೆಂಗಳೂರು (ಆ.25):  ರಾಜಧಾನಿಯಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವಿಕೆ ಮುಂದುವರಿದಿದ್ದು, ಕಳೆದ 24 ತಾಸಿನಲ್ಲಿ 1,918 ಹೊಸ ಪ್ರಕರಣಗಳು ವರದಿಯಾಗಿವೆ.

ಭಾನುವಾರ ಸಂಜೆ 5 ಗಂಟೆಯಿಂದ ಸೋಮವಾರ ಸಂಜೆ 5ರಿಂದ ನಗರದಲ್ಲಿ 1,918 ಹೊಸ ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಈವರೆಗೆ ನಗರದಲ್ಲಿ ಕೊರೋನಾ ಸೋಂಕಿಗೆ ತುತ್ತಾದವರ ಒಟ್ಟು ಸಂಖ್ಯೆ 1,09,793ಕ್ಕೆ ಏರಿಕೆಯಾಗಿದೆ. ಸೋಮವಾರ ಒಂದೇ ದಿನ 2,034 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.

ಈ ಮೂಲಕ ಈವರೆಗೆ ಸೋಂಕಿನಿಂದ ಗುಣಮುಖರಾದವರ ಒಟ್ಟು ಸಂಖ್ಯೆ 73,363ಕ್ಕೆ ಏರಿಕೆಯಾಗಿದೆ. ಈ ನಡುವೆ ನಗರದಲ್ಲಿ ಇನ್ನೂ 34,735 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳು, ಕೋವಿಡ್‌ ಆರೈಕೆ ಕೇಂದ್ರಗಳು ಹಾಗೂ ಹೋಂ ಐಸೊಲೇಷನ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 327 ಮಂದಿ ಸೋಂಕಿತರಿಗೆ ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಉಸೇನ್ ಬೋಲ್ಟ್‌ಗೂ ವಕ್ಕರಿಸಿದ ಕೊರೋನಾ; ಕ್ರಿಸ್ ಗೇಲ್‌ಗೂ ಶುರುವಾಯ್ತು ಭೀತಿ..!

26 ಮಂದಿ ಸೋಂಕಿಗೆ ಬಲಿ: 17 ಪುರುಷರು ಹಾಗೂ 9 ಮಂದಿ ಮಹಿಳೆಯರು ಸೇರಿದಂತೆ ಒಟ್ಟು 26 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರೊಂದಿಗೆ ನಗರದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1,694ಕ್ಕೆ ಏರಿಕೆಯಾಗಿದೆ.

2,537 ಮಂದಿ ಪರೀಕ್ಷೆ

ಬಿಬಿಎಂಪಿ ನಗರದಲ್ಲಿ ತೆರೆದಿರುವ 150 ಫೀವರ್‌ ಕ್ಲಿನಿಕ್‌ಗಳಲ್ಲಿ ಸೋಮವಾರ 2,537 ಮಂದಿಗೆ ಕೊರೋನಾ ಸೋಂಕು ಪರೀಕ್ಷೆಗೆ ಒಳಪಡಿಸಲಾಗಿದೆ. ಈ ಮೂಲಕ ಈವರೆಗೆ ಫೀವರ್‌ ಕ್ಲಿನಿಕ್‌ಗಳಲ್ಲಿ ಕೊರೋನಾ ಪರೀಕ್ಷೆಗೆ ಒಳಗಾದವರ ಒಟ್ಟು ಸಂಖ್ಯೆ 1,43,973ಕ್ಕೆ ಏರಿಕೆಯಾಗಿದೆ.

PREV
click me!

Recommended Stories

New Year 2026: ಕಾಫಿನಾಡಿಗರಿಗೆ ನಿರಾಸೆ ಮೂಡಿಸಿದ ಹೊಸ ವರ್ಷ, ಉದ್ಯಮಿಗಳಿಗೆ ಆತಂಕ!
ಮುಗಿದ ವಿದ್ಯುದೀಕರಣ ಪ್ರಕ್ರಿಯೆ, ಬೆಂಗಳೂರು-ಮಂಗಳೂರು ವಂದೇ ಭಾರತ್‌ಗೆ ಸಿಕ್ತು ಗ್ರೀನ್‌ಸಿಗ್ನಲ್‌!