Hassan; ಬೇನಾಮಿ ಬಿಲ್‌ ಸೃಷ್ಟಿಸಿ 40 ಲಕ್ಷ ಗುಳುಂ ಮಾಡಿದ ನುಗ್ಗೇಹಳ್ಳಿ ಗ್ರಾಪಂ ಪಿಡಿಒ

By Suvarna News  |  First Published Oct 14, 2022, 1:24 PM IST

ಬೇನಾಮಿ ಬಿಲ್‌ ಸೃಷ್ಟಿಸಿ 40 ಲಕ್ಷ ಗುಳುಂ ಮಾಡಿದ ಪಿಡಿಒ. ನುಗ್ಗೇಹಳ್ಳಿ ಗ್ರಾಪಂ ಪಿಡಿಒ ವಿರುದ್ಧ ಮಾಜಿ ಎಂಎಲ್ಸಿ ಗೋಪಾಲಸ್ವಾಮಿ ಆರೋಪ. ತನಿಖೆ ನಡೆಸಿ ಪಿಡಿಒ ವಜಾಕ್ಕೆ ಆಗ್ರಹ.


 ಚನ್ನರಾಯಪಟ್ಟಣ (ಅ.14): ಕಳೆದ ಆರೇಳು ತಿಂಗಳ ಅವ​ಧಿಯಲ್ಲೆ ಬೇನಾಮಿ ಬಿಲ್‌ ಸೃಷ್ಟಿಸಿ ತಾಲೂಕಿನ ನುಗ್ಗೇಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ 40 ಲಕ್ಷ ರು. ಅವ್ಯವಹಾರ ನಡೆಸಿದ್ದಾರೆ. ಈ ಕುರಿತು ಮೇಲಧಿಕಾರಿಗಳು ತನಿಖೆ ನಡೆಸಿ ಆತನನ್ನು ಕರ್ತವ್ಯದಿಂದ ವಜಾ ಮಾಡದಿದ್ದಲ್ಲಿ ಹೋರಾಟಕ್ಕೆ ಮುಂದಾಗುವುದಾಗಿ ಮಾಜಿ ಎಂಎಲ್ಸಿ ಎಂ.ಎ.ಗೋಪಾಲಸ್ವಾಮಿ ಎಚ್ಚರಿಸಿದ್ದಾರೆ. ಕಳೆದ ಏಳೆಂಟು ವರ್ಷಗಳಿಂದ ನುಗ್ಗೇಹಳ್ಳಿ ಪಂಚಾಯಿತಿಯಲ್ಲಿ ಪಿಡಿಓ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಹರೀಶ್‌ ಬ್ರಹ್ಮಾಂಡ ಭ್ರಷ್ಟಚಾರದಲ್ಲಿ ತೊಡಗಿದ್ದು, ಗ್ರಾ.ಪಂ.ಸದಸ್ಯರಿಗೆ ಯಾವುದೇ ಮಾಹಿತಿ ನೀಡದೇ ಅ​ಕಾರ ದುರಪಯೋಗ ಮಾಡಿಕೊಂಡು ಕಾಮಗಾರಿ ನಿರ್ವಹಿಸದೇ ಲಕ್ಷಾಂತರ ಹಣವನ್ನು ಬೇನಾಮಿ ಬಿಲ್‌ ಸೃಷ್ಟಿಸಿ ಕೆಲವು ಅಂಗಡಿಗಳಿಗೆ ಚೆಕ್‌ ನೀಡಿದ್ದಾನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು. ಕಾಮಗಾರಿ ನಿರ್ವಹಿಸದೇ ನೀರಿನ ಪೈಪ್‌ ಅಳವಡಿಸಲಾಗಿದೆ ಎಂದು ಏಪ್ರಿಲ್‌ ಮಾಹೆಯಲ್ಲಿನ ಒಂದೇ ದಿನದಲ್ಲಿ 6.40 ಲಕ್ಷ ರು. ಹಣವನ್ನು ಮೂರು ಅಂಗಡಿಗಳಿಗೆ ಚೆಕ್‌ ನೀಡಿರುವುದು, ಕಚೇರಿಯಲ್ಲಿರುವ ಕಂಪ್ಯೂಟರ್‌ ರಿಪೇರಿಗೆಂದು ವಿಳಾವಿಲ್ಲದ ಇಂಡಿಯನ್‌ ಇನೊ​ೕಟೆಕ್‌ ಎಂಬ ಹೆಸರಿಗೆ 65 ಸಾವಿರ ರು.ಚೆಕ್‌ ನೀಡಿದ್ದಾರೆ. ಹೊಸ ಕಂಪ್ಯೂಟರ್‌ನ ಬೆಲೆಯೇ 40 ಸಾವಿರ ಇರುವಾಗ ರಿಪೇರಿಗೆ 65 ಸಾವಿರ ಕೊಟ್ಟಿರುವುದೆಷ್ಟುಸರಿ, ಸಾಮಾನ್ಯಸಭೆಯಲ್ಲಿ ಕೊಡಿಸಲಾಗುವ ಟೀ, ಕಾಫಿಗೆ 5ಸಾವಿರ ಬಿಲ್‌ ನೀಡುವುದು ಸೇರಿ, ಏ.12 ರಂದು ಗ್ರಾ.ಪಂ.ಗೆ ಬಂದ 9 ಜನರ ಅಧಿ​ಕಾರಿಗಳ ನಿಯೋಗಕ್ಕೆ ಊಟದ ಬಿಲ್‌ಬಾಬ್ತು ಎಂದು 26 ಸಾವಿರ ರು.ಗಳ ಚೆಕ್‌ನ್ನು ಪರಮೇಶಿ ಹೋಟೆಲ್‌ಗೆ ಪಾವತಿ ಮಾಡಿದ್ದಾರೆ ಎಂದರು.

ನಲ್ಲಿ ರಿಪೇರಿಗೆ 10 ಸಾವಿರ ರು. ಮೂರು ತಿಂಗಳ ಹಿಂದೆ ಸುರಿದ ಮಳೆಯ ನಡುವೆಯೂ ಕುಡಿಯುವ ನೀರಿಗೆ ಹಾಹಾಕಾರವಿದೆಯೆಂದು ಟ್ಯಾಂಕರ್‌ನಲ್ಲಿ ನೀರು ಸರಬರಾಜು ಮಾಡಲಾಗಿದೆಯೆಂದು 40 ಸಾವಿರ ಬಿಲ್‌ ಸೇರಿ ಬೇಕಾಬಿಟ್ಟಿಮನಸೋಇಚ್ಛೆ ಹಣವನ್ನು ದುರುಪಯೋಗ ಮಾಡಿದ್ದಾನೆ. ಇದನ್ನು ಕೇಳಲು ಹೋದ ನಮ್ಮ ಪಕ್ಷದ ಸದಸ್ಯರಿಗೆ ನಿಮಗೆ ಲೆಕ್ಕ ಕೊಡುವ ಅವಶ್ಯಕತೆಯಿಲ್ಲ, ಸೋಷಿಯಲ್‌ ಆಡಿಟ್‌ಗೆ ಲೆಕ್ಕ ಕೊಡುವುದಷ್ಟೆನನ್ನ ಕೆಲಸವೆಂದು ಬೇಜಾವಬ್ದಾರಿತನದ ಮಾತುಗಳನ್ನಾಡುತ್ತಾನೆ ಎಂದು ಆರೋಪಿಸಿದರು.

Tap to resize

Latest Videos

ನರೇಗಾದಡಿ ತಾಲೂಕಿನಲ್ಲಿ 50 ಕೋಟಿ ಕೆಲಸವಾಗುತ್ತಿದೆ. ಎಲ್ಲ ಪಂಚಾಯಿತಿಗಳಲ್ಲೂ ನಿಯಮಗಳ ಪಾಲನೆ ಆಗುತ್ತಿಲ್ಲಾ, ಸಾಮಗ್ರಿ ಹಣ ದುರಪಯೋಗವಾಗಿದೆ. ಇದನ್ನೆಲ್ಲಾ ಕೇಳಲು ಹೋದ್ರೆ ನಮ್ಮ ಸದಸ್ಯರನ್ನು ಶಾಸಕರ ಬಳಿ ಮಾತನಾಡಿ ಎನ್ನುವ ಪಿಡಿಓಗಳ ಅಕ್ರಮಕ್ಕೆ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ. ಇದರಲ್ಲಿ ಅವರ ಪಾತ್ರವೇನು ಎಂಬುದನ್ನು ತಿಳಿಸಬೇಕು. ಅ​ಧಿಕಾರಿಗಳ ತಪ್ಪು ತೋರಿಸಿದ್ರೆ ಗೋಪಾಲಸ್ವಾಮಿ ಅ​ಧಿಕಾರಿಗಳನ್ನು ಹೆದರಿಸುತ್ತಿದ್ದಾರೆ ಎಂದು ಶಾಸಕರು ನನ್ನ ಮೇಲೆ ಆರೋಪ ಮಾಡುತ್ತಾರೆ ಎಂದರು.

Chitradurga: ಅಬಕಾರಿ ಡಿಸಿ ನಾಗಶಯನ ವಿರುದ್ದ ಸಿಡಿದೆದ್ದ ಬಾರ್ ಮಾಲೀಕರು!

ನುಗ್ಗೇಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಗೌಡಾಕ್ಕಿ ಮಂಜ ಮಾತನಾಡಿ 14 ಮತ್ತು 15ನೇ ಹಣಕಾಸಿನಡಿ 25 ಲಕ್ಷ ರು.ಗಳನ್ನು ಅಧ್ಯಕ್ಷೆ ಮಂಜುಳಾರವರ ಅವ​ಧಿಯಲ್ಲಿ ದುರುಪಯೋಗ ಮಾಡಿರುವ ಪಿಡಿಓ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಪ್ರಿಯಾ ಸಾಫ್ಟವೇರ್‌ನಡಿ ಡೋಂಗಲ್‌ ಸಹಾಯದೊಂದಿಗೆ ಹಣ ಪಾವತಿಮಾಡುವ ನಿಯಮ ಮೀರಿ ನೇರಾ ಚೆಕ್‌ ನೀಡಿದ್ದಾರೆ. ಇನ್ನೂ ವಸತಿ ಯೋಜನೆಯಡಿ ಪಂಚಾಯಿತಿಗೆ ಬಂದಿರುವ ಮನೆಗಳ ಮಾಹಿತಿ ನೀಡಿಲ್ಲ, ಯಾವುದೇ ಗ್ರಾಮಸಭೆ ನಡೆಸದೇ ಫಲಾನುಭವಿಗಳ ಪಟ್ಟಿಮಾಡಲಾಗಿದೆ. ನಮ್ಮ ವಿರುದ್ಧ ಸೋತ ಅಭ್ಯರ್ಥಿಗಳಿಗೆ ಎರಡೆರೆಡು ಮನೆ ಹಂಚಲಾಗಿದೆ ಎಂದು ಆರೋಪಿಸಿದರು.

ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹತ್ಯೆಗೆ ಬೇನಾಮಿ ಆಸ್ತಿ ಕಾರಣನಾ?

ಸದಸ್ಯ ಕಿರಣ್‌ಕುಮಾರ್‌ ಮಾತನಾಡಿ ಪರಿಶಿಷ್ಟಕಾಲೋನಿಗೆ 60 ಬಲ್‌್ಬ ಅಳವಡಿಸಿ 4ಲಕ್ಷ ಬಿಲ್‌ ನೀಡಲಾಗಿದೆ. ನೈರ್ಮಲಿಕರಣದ ಹೆಸರಿನಲ್ಲಿ 70 ಮನೆಗಳಿರುವ ಕಾಲೋನಿಗೆ 70 ಲಕ್ಷ ಹಣ ಖರ್ಚು ತೋರಿಸಲಾಗಿದೆ. ಇದ್ಯಾವುದಕ್ಕೂ ಸೂಕ್ತ ಮಾಹಿತಿ ನೀಡದ ಪಿಡಿಒ ಎಸ್ಸಿ ಎಸ್ಟಿಗೆ ಮೀಸಲಾದ ಹಣದಲ್ಲಿ ಕೆಇಬಿ ಬಿಲ್‌ ಕಟ್ಟಿದ್ದಾರೆ ಎಂದು ಆರೋಪಿಸಿದರು. ಇವರು ವಿರುದ್ಧ ಕ್ರಮಕೆ ಮುಂದಾಗದಿದ್ದಲ್ಲಿ ಗ್ರಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ.ಸದಸ್ಯರಾದ ಸವಿತಾ, ರಮ್ಯಲೋಕೇಶ್‌, ರೇಷ್ಮಾಭಾನು ಇದ್ದರು.

click me!