ವಲಸೆ ತಡೆಗೆ ದುಡಿಯೋಣ ಬಾ ಅಭಿಯಾನ : ಪ್ರತಿ ಕುಟುಂಬಕ್ಕೆ 60 ದಿನ ಉದ್ಯೋಗ

By Kannadaprabha News  |  First Published Mar 12, 2021, 3:51 PM IST

ವಲಸೆ ತಡೆಯುವ ಉದ್ದೇಶದಿಂದ ಕೂಲಿ ಕಾರ್ಮಿಕರಿಗೆ ಆ ಗ್ರಾಮದಲ್ಲಿಯೇ ಉದ್ಯೋಗ ನೀಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದೆ. ಹೌದು, ರಾಜ್ಯ ಗ್ರಾಮೀಣಾಭಿವೃದ್ಧಿ ಆಯಕ್ತಾಲಯ ಬೇಸಿಗೆ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಮಹತ್ವಕಾಂಕ್ಷಿ ನರೇಗಾ ಕಾರ್ಯಕ್ರಮಡಿ ದುಡಿಯೋಣ ಬಾ ಎನ್ನುವ ವಿನೂತನ ಅಭಿಯಾನ ಸಿದ್ಧತೆ ನಡೆಸಿದೆ.


ವರದಿ : ಕಾಗತಿ ನಾಗರಾಜಪ್ಪ

 ಚಿಕ್ಕಬಳ್ಳಾಪುರ (ಮಾ.12):  ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟುಉದ್ಯೋಗ ಚಟುವಟಿಕೆಗಳು ಸ್ಥಗಿತಗೊಳ್ಳುವ ಕಾರಣಕ್ಕೆ ಬಡ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತವೆ. ಜೊತೆಗೆ ಬಹಳಷ್ಟುಕುಟುಂಬಗಳು ಉದ್ಯೋಗ ಅರಿಸಿ ವಲಸೆ ಹೋಗುತ್ತೇವೆ. ಇದೇ ಕಾರಣಕ್ಕೆ ವಲಸೆ ತಡೆಯುವ ಉದ್ದೇಶದಿಂದ ಕೂಲಿ ಕಾರ್ಮಿಕರಿಗೆ ಆ ಗ್ರಾಮದಲ್ಲಿಯೇ ಉದ್ಯೋಗ ನೀಡಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಮುಂದಾಗಿದೆ.

Tap to resize

Latest Videos

undefined

ಹೌದು, ರಾಜ್ಯ ಗ್ರಾಮೀಣಾಭಿವೃದ್ಧಿ ಆಯಕ್ತಾಲಯ ಬೇಸಿಗೆ ಅವಧಿಯಲ್ಲಿ ಕೂಲಿ ಕಾರ್ಮಿಕರಿಗೆ ಉದ್ಯೋಗ ಒದಗಿಸಲು ಮಹತ್ವಕಾಂಕ್ಷಿ ನರೇಗಾ ಕಾರ್ಯಕ್ರಮಡಿ ದುಡಿಯೋಣ ಬಾ ಎನ್ನುವ ವಿನೂತನ ಅಭಿಯಾನ ಸಿದ್ಧತೆ ನಡೆಸಿದ್ದು, ಮಾ.15 ರಿಂದ ಸತತ ಮೂರು ತಿಂಗಳ ಕಾಲ ಈ ಅಭಿಯಾನ ನಡೆಯಲಿದೆ.

ಅಭಿಯಾನದ ಮೂಲ ಉದ್ದೇಶ ಗ್ರಾಮೀಣ ಜನರಿಗೆ ಬೇಸಿಗೆ ಅವಧಿಯಲ್ಲಿ ನರೇಗಾದಡಿ ನಿರಂತರವಾಗಿ ಕೆಲಸ ಒದಗಿಸುವುದು. ಯೋಜನೆಯಿಂದ ಹೊರಗುಳಿದ ದುರ್ಬಲ ಕುಟುಂಬಗಳನ್ನು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ನೋಡಿಕೊಳ್ಳುವುದು. ಗ್ರಾಮೀಣ ಜನರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದಾಗಿದೆ.

ಕೊಪ್ಪಳ: ಎಡೆ ಹೊಡೆಯಲು ಸೈಕಲ್‌ ಬಳಕೆ, ಯುವಕನ ಹೊಸ ಐಡಿಯಾಗೆ ರೈತರ ಮೆಚ್ಚುಗೆ..! .

ಬೇಸಿಗೆಯಲ್ಲಿ 60 ದಿನ ಕೆಲಸ:  ಪ್ರತಿ ಕುಟುಂಬಕ್ಕೆ ನರೇಗಾದಡಿ 100 ದಿನ ಕೆಲಸ ಮಾಡಲು ಅವಕಾಶ ಇರುತ್ತದೆ. ಬೇಸಿಗೆ ಅವಧಿಯಲ್ಲಿ ಕನಿಷ್ಠ 60 ದಿನ ಕೆಲಸ ಮಾಡಿದ್ದಲ್ಲಿ 16.500 ರು. ಆದಾಯ ಬರುತ್ತದೆ. ಇದರಿಂದ ಮುಂಬರುವ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ರಸಗೊಬ್ಬರ, ಬಿತ್ತನೆ ಬೀಜ, ಮಕ್ಕಳ ಶಾಲಾ, ಕಾಲೇಜು ಶುಲ್ಕ ಕಟ್ಟಲು ಅನುಕೂಲವಾಗುತ್ತದೆ ಎಂಬ ಸದುದ್ದೇಶದಿಂದ ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಒತ್ತು ನೀಡಲಾಗಿದೆ. ವಿಶೇಷವಾಗಿ ಬೇಸಿಗೆ ಅವಧಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಾದ ಬದು ನಿರ್ಮಾಣ, ಸೋಕ್‌ ಪಿಟ್‌, ಸಮಗ್ರ ಕೆರೆ ಅಭಿವೃದ್ಧಿ, ಕೊಳವೆ ಬಾವಿ ಪುನಶ್ಚೇತನ, ರಸ್ತೆ ಬದಿ ನಡೆತೋಪು, ಕೃಷಿ, ಅರಣ್ಯೀಕರಣ, ಕೆರೆ ಕಾಲುವೆಗಳ ಪುನಶ್ಚೇತನ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಆಯಾ ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ವಿಶೇಷವಾಗಿ ಅಭಿಯಾನವನ್ನು ಚುನಾಯಿತ ಜನಪ್ರತಿನಿಧಿಗಳ ಮೂಲಕ ಉದ್ಘಾಟಿಸಬೇಕು. ಪ್ರತಿ ತಾಲೂಕಿಗೆ ಒಬ್ಬ ನೋಡಲ್‌ ಅಧಿಕಾರಿ ನೇಮಿಸಬೇಕು, ಪ್ರತಿ ವಾರ ಅಭಿಯಾನದ ಪ್ರಗತಿ ಪರಿಶೀಲಿಸಬೇಕು, ಕೂಲಿ ಕಾರ್ಮಿಕರ ಕೆಲಸದ ಬೇಡಿಕೆ ಪಟ್ಟಿಇರಿಸುವಂತೆ ಗ್ರಾಪಂಗಳಿಗೆ ಸೂಚಿಸುವಂತೆ ರಾಜ್ಯದ ಎಲ್ಲಾ ಜಿಪಂ ಸಿಇಒಗಳಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ಗ್ರಾಮೀಣಾಭಿವೃದ್ಧಿ ಆಯುಕ್ತ ಅನಿರುದ್‌್ದ ಶ್ರವಣ್‌ ಫೆ.8 ರಂದು ಆದೇಶ ಹೊರಡಿಸಿದ್ದಾರೆ. ವಿಶೇಷವಾಗಿ ಕೆಲಸದ ಸ್ಥಳದಲ್ಲಿ ಕಡ್ಡಾಯವಾಗಿ ಕುಡಿಯುವ ನೀರು, ಶಿಶುಪಾಲನಾ ಸೌಲಭ್ಯಗಳನ್ನು ಕಲ್ಪಿಸಿ ಅಭಿಯಾನದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕ ಪ್ರಚಾರ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಹರಪನಹಳ್ಳಿ: ಕೂಲಿ ಮಾಡುವ ಹುಡುಗ ಈಗ ಪಿಎಸ್‌ಐ..!

ಅಭಿಯಾನಕ್ಕೆ ರಾಯಭಾರಿಗಳ ನೇಮಕ:

ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಬಡ ಕೂಲಿ ಕಾರ್ಮಿಕರಿಗೆ ಅನುಕೂಲವಾಗುವಂತೆ ಆಯೋಜಿಸಿರುವ ದುಡಿಯೋಣ ಬಾ ಅಭಿಯಾನದ ಯಶಸ್ಸಿಗೆ ಪ್ರತಿ ಗ್ರಾಪಂ ಮಟ್ಟದಲ್ಲಿ ರಾಯಭಾರಿ ನೇಮಕಕ್ಕೂ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ ಸೂಚಿಸಿದೆ.

60 ದಿನ ಕೆಲಸಕ್ಕೆ 16,500 ಕೂಲಿ

ಪ್ರತಿ ಕುಟುಂಬಕ್ಕೆ ನರೇಗಾದಡಿ 100 ದಿನ ಕೆಲಸ ಮಾಡಲು ಅವಕಾಶ ಇರುತ್ತದೆ. ಬೇಸಿಗೆ ಅವಧಿಯಲ್ಲಿ ಕನಿಷ್ಠ 60 ದಿನ ಕೆಲಸ ಮಾಡಿದ್ದಲ್ಲಿ 16.500 ಆದಾಯ ಬರುತ್ತದೆ. ಇದರಿಂದ ಮುಂಬರುವ ಕೃಷಿ ಚಟುವಟಿಕೆಗಳಿಗೆ ಅಗತ್ಯ ಇರುವ ರಸಗೊಬ್ಬರ, ಬಿತ್ತನೆ ಬೀಜ, ಮಕ್ಕಳ ಶಾಲಾ, ಕಾಲೇಜು ಶುಲ್ಕ ಕಟ್ಟಲು ಅನುಕೂಲವಾಗುತ್ತದೆ ಎಂಬ ಸದುದ್ದೇಶದಿಂದ ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನಕ್ಕೆ ಒತ್ತು ನೀಡಲಾಗಿದೆ.

click me!