ಪಂಚಮಸಾಲಿ ಹೋರಾಟಕ್ಕೆ ಅಣಿಯಾಗಿದ್ದ ಜಯಮೃತ್ಯಂಜಯ ಸ್ವಾಮೀಜಿ ಹಾಗೂ ಶಾಸಕ ಯತ್ನಾಳ ಜೊತೆ ಸಚಿವ ಸಿಸಿ ಪಾಟೀಲ ಸಂಧಾನ ಸಭೆ ನಡೆಸಿದರು.
ವರದಿ: ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್
ಹಾವೇರಿ (ಆ.23): ರಾಜ್ಯ ಸರಕಾರ ಹಾಗೂ ಪಂಚಮಸಾಲಿ ಹೋರಾಟಗಾರರ ನಡುವೆ ಸಂಘರ್ಷ ಮುಂದುವರೆದಿದೆ. ಶಿಗ್ಗಾವಿ ಪಟ್ಟಣದ ಚೆನ್ನಮ್ಮ ವೃತ್ತದಲ್ಲಿ ಇಂದು ಬೃಹತ್ ದುಂಡು ಮೇಜಿನ ಸಭೆ ನಡೆಸಿ ಹೋರಾಟಕ್ಕೆ ತಯಾರಾಗಿದ್ದ ಜಯಮೃತ್ಯುಂಜಯ ಸ್ವಾಮೀಜಿ ಮನವೊಲಿಕೆಗೆ ಸಚಿವ ಸಿ.ಸಿ ಪಾಟೀಲ್ ಆಗಮಿಸಿದ್ರು. ಹೋರಾಟಕ್ಕೆ ಅಣಿಯಾಗಿದ್ದ ಜಯಮೃತ್ಯಂಜಯ ಸ್ವಾಮೀಜಿ ಹಾಗೂ ಶಾಸಕ ಯತ್ನಾಳ ಜೊತೆ ಸಚಿವ ಸಿಸಿ ಪಾಟೀಲ ಸಂಧಾನ ಸಭೆ ನಡೆಸಿದರು. ಶಿಗ್ಗಾವಿ ಪಟ್ಟಣದ ಹೊರ ವಲಯದಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ಸಂಧಾನ ಸಭೆ ನಡೆಯಿತು. ಸಿಎಂ ಸೂಚನೆ ಮೇರೆಗೆ ಚರ್ಚೆ ನಡೆಸಿದ ಸಿ.ಸಿ ಪಾಟೀಲ್ , ಜಯ ಮೃತ್ಯಂಜಯ ಸ್ವಾಮೀಜಿ ಮನವೊಲಿಕೆಗೆ ಪ್ರಯತ್ನಿಸಿದರು. ಸರ್ಕಾರ ಯಾವತ್ತೂ ನಿಮ್ಮ ಜೊತೆಗಿದೆ. ನಿಮ್ಮನ್ನು ಸತಾಯಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಮೀಸಲಾತಿ ಘೋಷಣೆಗೆ ಕಾನೂನು ಅಡೆತಡೆಗಳಿದೆ. ಹಿಂದೂಳಿದ ವರ್ಗದ ಆಯೋಗದ ವರದಿ ಸರ್ಕಾರದ ಕೈ ಸೇರಿಲ್ಲ. ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡೋದು ಬೇಡ. ಹೀಗಾಗಿ ಹೋರಾಟ ಕೈ ಬಿಡಿ ಎಂದು ಸಿಸಿ ಪಾಟೀಲ್ ಸಭೆಯಲ್ಲಿ ಮನವಿ ಮಾಡಿದರು. ಸರ್ಕಾರಕ್ಕೆ ಗಡುವು ನೀಡಿ ನೀಡಿ ಸಾಕಾಗಿದೆ. ಇದು ಅಂತಿಮ ಹೋರಾಟ. ಬೃಹತ್ ಹೋರಾಟಕ್ಕೆ ನಾವು ಅಣಿಯಾಗಿದ್ದೇವೆ ಎಂದು ಜಯ ಮೃತ್ಯುಂಜಯ ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
undefined
ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪ್ರಾರಂಭದಲ್ಲೇ ಐದು ಪೀಠಗಳ ಮಾಡುವ ಚಿಂತನೆ: ಬಿ.ಸಿ.ಉಮಾಪತಿ
ಇದೇ ವೇಳೆ ಸ್ವಾಮೀಜಿ ಸಮಾಧಾನ ಪಡಿಸಿದ ಸಿ.ಸಿ ಪಾಟೀಲ್ ,ಸಿಎಂ ಜೊತೆ ಸಭೆ ನಿಗಧಿ ಪಡಿಸೋದಾಗಿ ಭರವಸೆ ನೀಡಿದರು. ಎಲ್ಲ ಮುಖಂಡರ ಜೊತೆಗೆ ಸಭೆ ನಡೆಸಿ ಸರ್ಕಾರಕ್ಕೆ ತಮ್ಮ ನಿಲುವು ತಳಿಸುವುದಾಗಿ ಸ್ವಾಮೀಜಿ ಹೇಳಿದರು.ಈ ಕುರಿತು ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿ.ಸಿ ಪಾಟೀಲ್ ತಾರತುರಿಯಲ್ಲಿ ಮೀಸಲಾತಿ ಘೋಷಣೆ ಮಾಡುವುದು ಬರುವುದಿಲ್ಲ. ಮಹಾರಾಷ್ಟ್ರ ಮತ್ತು ಮದ್ರಾಸ್ ಎರಡು ರಾಜ್ಯದಲ್ಲಿ ತರಾತುರಿಯಲ್ಲಿ ಮೀಸಲಾತಿ ಘೋಷಣೆ ಮಾಡಲಾಗಿತ್ತು. ಅದರ ವ್ಯವಸ್ಥೆ ಸದ್ಯಕ್ಕೆ ಸರಿ ಇಲ್ಲ.
ಸಿಎಂ ಬೊಮ್ಮಾಯಿಗೆ ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಗಡುವು ನೆನಪಿಸಿದ ಕಾಶಪ್ಪನವರ
ಸಮಾಜದ ದೃಷ್ಟಿಯಿಂದ ಶ್ರೀಗಳು ಸರ್ಕಾರದ ಮೇಲೆ ಒತ್ತಡ ಹಾಕ್ತಿದ್ದಾರೆ. ಈ ವಿಚಾರದಲ್ಲಿ ಬಸವರಾಜ್ ಬೊಮ್ಮಾಯಿ ಅವರು ಕೂಡ ತೆರೆದ ಮನಸ್ಸಿನಿಂದ ಇದ್ದಾರೆ. ಹಾಗಾಗಿ ನಾನು ಹೋರಾಟವನ್ನು ಕೈ ಬಿಡಿ ಅಂತ ಶ್ರೀಗಳಿಗೆ ಮನವಿ ಮಾಡಿದ್ದೇನೆ. ಇಂದು ಮಾಡಬೇಕಿದ್ದ ಸತ್ಯಾಗ್ರಹ ಕೈ ಬಿಟ್ಟು ಶಿಗ್ಗಾವಿಯಲ್ಲಿನ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹೋಗುವುದಾಗಿ ಮನವಿ ಮಾಡಿದ್ದಾರೆ. ಶೀಘ್ರದಲ್ಲಿ ಸಿಎಂ ಜೊತೆಗೆ ಸಭೆ ನಿಗಧಿ ಪಡಿಸ್ತೀನಿ ಎಂದು ಹೇಳಿದರು.