Booster Dose: ಸತ್ತವರಿಗೂ ಬೂಸ್ಟರ್‌ ಡೋಸ್‌ ಸಂದೇಶ: 9 ಜನಕ್ಕೆ ನೋಟಿಸ್‌

By Girish Goudar  |  First Published May 13, 2022, 5:24 AM IST

*  ಕನ್ನಡಪ್ರಭ ವರದಿ ಉಲ್ಲೇಖಿಸಿ ಶೋಕಾಸ್‌ ನೋಟಿಸ್‌
*  ಪ್ರಮಾದಕ್ಕೆ ಕಾರಣರಾದವರ ವಿರುದ್ಧ ಕ್ರಮ 
*  ನೋವು ತೋಡಿಕೊಂಡ ಆರೋಗ್ಯ ಇಲಾಖೆಯ ಸಿಬ್ಬಂದಿ
 


ಯಾದಗಿರಿ(ಮೇ.13):  ಜಿಲ್ಲೆಯ ದೋರನಹಳ್ಳಿ ಆರೋಗ್ಯ ಕೇಂದ್ರದಲ್ಲಿ ಸತ್ತವರಿಗೂ ಬೂಸ್ಟರ್‌ ಡೋಸ್‌(Booster Dose) ಸಂದೇಶ ರವಾನೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ವೈದ್ಯಾಧಿಕಾರಿಗಳಿಗೆ ಶಹಾಪುರ ತಾಲೂಕು ಆರೋಗ್ಯ ಅಧಿಕಾರಿ ಡಾ.ರಮೇಶ ಗುತ್ತೇದಾರ್‌ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದರೆ, ಈ ಇಬ್ಬರೂ ವೈದ್ಯರು ತಮ್ಮ 7 ಜನ ಸಿಬ್ಬಂದಿಗೆ ವಿವರಣೆ ಕೇಳಿದ್ದಾರೆ.

ಮೇ.11ರಂದು ‘ಕನ್ನಡಪ್ರಭ’ದಲ್ಲಿ(Kannada Prabha) ಪ್ರಕಟಗೊಂಡಿದ್ದ ವರದಿಯನ್ನು ಉಲ್ಲೇಖಿಸಿ, ಚಟ್ನಳ್ಳಿ ಆರೋಗ್ಯ ಕೇಂದ್ರದ ಡಾ.ರತ್ನಾ ಹಾಗೂ ದೋರನಹಳ್ಳಿ ಸಮುದಾಯ ಕೇಂದ್ರದ ಡಾ.ರವಿ ಅವರಿಗೆ ನೋಟಿಸ್‌(Notice) ನೀಡಲಾಗಿದೆ. ಈ ಬಗ್ಗೆ ವಿವರಣೆ ನೀಡುವಂತೆ ಹಾಗೂ ಈ ಪ್ರಮಾದಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಲಾಗಿದೆ.

Tap to resize

Latest Videos

undefined

Booster Dose Vaccine: ಸತ್ತವರಿಗೆ 2ನೇ ಡೋಸ್‌ ಆಯ್ತು, ಈಗ ಬೂಸ್ಟರ್‌ ಡೋಸ್‌ ಮೆಸೇಜ್‌..!

ಈ ವಿಚಾರದಲ್ಲಿ ಮೇಲಧಿಕಾರಿಗಳ ತಪ್ಪಿದ್ದರೂ ಸಹ, ತಮ್ಮ ಉಳಿವಿಕೆಗಾಗಿ ಕೆಳಹಂತದ ಸಿಬ್ಬಂದಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಮೇಲಧಿಕಾರಿಗಳು ಮುಂದಾಗಿದ್ದಾರೆಂದು ನೋವು ತೋಡಿಕೊಂಡ ಆರೋಗ್ಯ ಇಲಾಖೆಯ(Department of Health) ಸಿಬ್ಬಂದಿಯೊಬ್ಬರು, ಜಿಲ್ಲಾ ಕೇಂದ್ರದಲ್ಲಿ ಕಂಪ್ಯೂಟರಿನಲ್ಲಿ ದಾಖಲೀಕರಣ ವೇಳೆ ಪಟ್ಟಿಯಲ್ಲಿಲ್ಲದವರ ಹೆಸರುಗಳೂ ನುಸುಳುತ್ತಲಿವೆ. ಗುರಿ ಸಾಧನೆಯ ಭರದಲ್ಲಿ 2ನೇ ಡೋಸ್‌ ವೇಳೆಯೂ ಜಿಲ್ಲೆಯಲ್ಲಿ ಇಂತಹ ಸಾವಿರಾರು ಲಸಿಕಾಕರಣಗಳ(Vaccination) ದಾಖಲೆಯಲ್ಲಿ ತೋರಿಸಿದ್ದರೆ, ಈಗ 3ನೇ ಡೋಸ್‌ ವೇಳೆಯೂ ಮತ್ತದೇ ಪ್ರಮಾದ ಮುಂದುವರೆಯುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಆತಂಕ ವ್ಯಕ್ತಪಡಿಸಿದರು.

ಆರೋಗ್ಯ ಇಲಾಖೆಯಲ್ಲಿ ಸತ್ತವರಿಗೂ ಕೋವಿಡ್ ಲಸಿಕೆ!

ಟಾರ್ಗೆಟ್ ರೀಚ್ ಮಾಡಲು ಹೋಗಿ ಯಾದಗಿರಿ ಜಿಲ್ಲಾ ಆರೋಗ್ಯ ಇಲಾಖೆಯು ಮಹಾ ಎಡವಟ್ಟು ಮಾಡಿಕೊಂಡಿದೆ. ಸತ್ತವರಿಗೂ ಇಲಾಖೆಯು ಕೊವೀಡ್ ಲಸಿಕೆ ನೀಡುತ್ತಿದ್ದಾರಾ ಎಂಬ ಅನುಮಾನ ಕಾಡುತ್ತಿದೆ. ಸತ್ತ ವ್ಯಕ್ತಿಗಳಿಗೆ ಅದು ಹೇಗೆ ಲಸಿಕೆ ನೀಡುತ್ತಿದ್ದಾರೆ ಎಂಬುದು ಮೃತ ಕುಟುಂಬಸ್ಥರ  ಆಕ್ರೋಶಕ್ಕೆ ಕಾರಣವಾಗಿದೆ.

Covid Crisis: ಕೊರೋನಾ ರೂಪಾಂತರಿ ಪತ್ತೆಗೆ ಕೊಳಚೆ ನೀರಿನ ಜೀನೋಮಿಕ್‌ ಸೀಕ್ವೆನ್ಸಿಂಗ್‌ ಟೆಸ್ಟ್‌

ಮೃತಪಟ್ಟ 1 ವರ್ಷದ ಬಳಿಕ ಬಂತು ಬೂಸ್ಟರ್ ಡೋಸ್ ಮೆಸೇಜ್: ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಮುರಾರಿರಾವ್ ಶಿಂಧೆ ಎಂಬ ವ್ಯಕ್ತಿ ಕೋವಿಡ್ ನಿಂದ ಕಲಬುರಗಿಯ ಜೀಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.  ಮೃತ ಪಟ್ಟ ವ್ಯಕ್ತಿಗೆ ಬೂಸ್ಟರ್ ಡೋಸ್ ನೀಡಲಾಗಿದೆ ಎಂದು ಮೆಸೇಜ್ ಬಂದಿದ್ದು ಮೃತ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕೊವೀಡ್ ಲಸಿಕೆ ನೀಡಿದ್ದ ಬಗ್ಗೆ ಟಾರ್ಗೆಟ್ ರೀಚ್ ಮಾಡಲು ಆರೋಗ್ಯ ಇಲಾಖೆಯು ಮುಂದಾಗಿದ್ದು, ನಿಜವಾಗಿ ಕೋವಿಡ್ ಲಸಿಕೆ ನೀಡಿ ಗುರಿ ಸಾಧಿಸಬೇಕಾದ ಆರೋಗ್ಯ ಇಲಾಖೆಯು ಲಸಿಕೆ ನೀಡದೇ ಟಾರ್ಗೆಟ್ ರೀಚ್ ಮಾಡುವ ಸಾಹಸಕ್ಕೆ ಕೈಹಾಕಿದೆ.

ಟಾರ್ಗೆಟ್ ರೀಚ್ ಗಾಗಿ ಅಡ್ಡದಾರಿ ಹಿಡಿತಾ ಆರೋಗ್ಯ ಇಲಾಖೆ: ಕೊವೀಡ್ ಲಸಿಕೆಗೆಂದೆ ಕೇಂದ್ರ ಸರಕಾರ ಕೋಟ್ಯಾಂತರ ರೂಪಾಯಿ ಹಣ ಖರ್ಚು  ಮಾಡುತ್ತಿದೆ. ಆದರೆ, ಆರೋಗ್ಯ ಇಲಾಖೆಯು ತಪ್ಪು ಮಾಡುತ್ತಿದೆ. ಕೊವೀಡ್ ಎರಡನೇ ಡೋಸ್ ಲಸಿಕೆ ನೀಡುವ ವೇಳೆಯು ಎಡವಟ್ಟು ಮಾಡಿತ್ತು ಈಗ ಮತ್ತೆ ಬೂಸ್ಟರ್ ಡೋಸ್ ನೀಡುವಲ್ಲಿ ತಪ್ಪು ಮಾಡುತ್ತಿದೆ. ಎಲ್ಲೋ ಕಚೇರಿಯಲ್ಲಿ ಕುಳಿತು ಸಿಕ್ಕ ಸಿಕ್ಕವರ ಮೊಬೈಲ್ ನಂಬರ್ ಪಡೆದು ಲಸಿಕೆ ನೀಡಿದ್ದ ಬಗ್ಗೆ ದಾಖಲೆ ಸೃಷ್ಟಿಸುವ ಕಾರ್ಯ ಮಾಡುತ್ತಿದ್ದಾರೆ.
 

click me!