* ಮಿನಿ ಊಟಿಯಂತಾದ ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ
* ಕಳೆದೊಂದು ವಾರದಿಂದ ರಾಜ್ಯದಲ್ಲಿ ಅಬ್ಬರಿಸ್ತಿರೋ ಅಸಾನಿ ಚಂಡಮಾರುತ
* ಮಿನಿ ಊಟಿ ವೀಕ್ಷಿಸಲು ರೆಡಿ ಆಗಿ ಅಂತ ಗ್ರೀನ್ ಸಿಗ್ನಲ್ ಕೊಡ್ತಿದೆ ಅರಣ್ಯ ಇಲಾಖೆ
ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿತ್ರದುರ್ಗ, (ಮೇ.12): ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಅಸಾನಿ ಚಂಡಮಾರುತ ಅಬ್ಬರಿಸುತ್ತಿದೆ. ಆದ್ರೆ ಕೋಟೆನಾಡಿನಲ್ಲಿರೋ ಜೋಗಿಮಟ್ಟಿ ವನ್ಯಧಾಮ ಮಾತ್ರ ಮಿನಿ ಊಟಿ ಅಂತೆ ಕಂಗೊಳಿಸುತ್ತಿರುವ ಮನಮೋಹಕ ಪರಿಸರ ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿದೆ.
ಹೌದು.. ಕೈಗೆ ಸಿಗೋ ರೀತಿ ಕಾಣ್ತಿರೋ ಬಿಳಿ ಮೋಡಗಳು. ಎತ್ತ ನೋಡಿದರತ್ತ ಮಂಜು ಕವಿದ ವಾತಾವರಣ. ಇಂತಹ ಅದ್ಭುತ ದೃಶ್ಯಗಳು ಕಂಡು ಬಂದಿದ್ದು ಮಧ್ಯ ಕರ್ನಾಟಕದ ಮಿನಿ ಊಟಿ ಎಂದೇ ಪ್ರಖ್ಯಾತಿ ಪಡೆದಿರೋ ಚಿತ್ರದುರ್ಗ ನಗರದ ಹೊರವಲಯದಲ್ಲಿ ಜೋಗಿಮಟ್ಟಿ ವನ್ಯಧಾಮದಲ್ಲಿ.
ಯೆಸ್.. ಕಳೆದ ಒಂದು ವಾರದಿಂದಲೂ ಅಸಾನಿ ಚಂಡಮಾರುತ ರಾಜ್ಯಾದ್ಯಂತ ಅರ್ಭಟಿಸ್ತಿದೆ. ಆದ್ರೆ ಇಂತಹ ಸಮಯದಲ್ಲಿ ಬರ್ತಿರೋ ಜಿಟಿ ಜಿಟಿ ಮಳೆಯಿಂದ ಕಂಗೊಳಿಸ್ತಿರೋ ಜೋಗಿಮಟ್ಟಿಯನ್ನು ನೋಡೋದಕ್ಕೆ ಎರಡು ಕಣ್ಣು ಸಾಲದು ಆಕಾಶವೇ ಕೆಳಗಿಳಿದೆ ಬಂದಂತೆ ಫೀಲ್ ಆಗ್ತಿದೆ. ಜೊತೆಗೆ ಕಳೆದೊಂದು ತಿಂಗಳಿಂದ ಬೇಸಿಗೆ ಹಿನ್ನೆಲೆ ಜೋಗಿಮಟ್ಟಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿತ್ತು. ಆದ್ರೆ ಈಗ ಮಳೆಗಾಲ ಬೇಗನೇ ಶುರುವಾಗಿರೋದ್ರಿಂದ ನಮ್ಮ ಮಿನಿ ಊಟಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳೋದಕ್ಕೆ ಅವಕಾಶ ಮಾಡಿಕೊಡಬೇಕು ಅಂತಾರೆ ಪ್ರವಾಸಿಗರು.
ಬೆಂಗ್ಳೂರಲ್ಲಿ 10 ದಿನದ ಬಳಿಕ ವಿರಾಮ ಕೊಟ್ಟ ವರುಣ: ಚಳಿಯ ವಾತಾವರಣ
ಇನ್ನೂ ಈ ಬಗ್ಗೆ ಅರಣ್ಯಾಧಿಕಾರಿಯನ್ನೇ ಕೇಳಿದ್ರೆ, ಪ್ರತೀ ವರ್ಷ ಬೇಸಿಗೆ ಸಮಯದಲ್ಲಿ ಜೋಗಿಮಟ್ಟಿ ವನ್ಯಧಾಮವನ್ನು ವೀಕ್ಷಿಸಲು ಯಾವುದೇ ಪ್ರವಾಸಿಗರಿಗೆ ಅವಕಾಶ ಇರೋದಿಲ್ಲ. ಯಾಕಂದ್ರೆ ಬೇಸಿಗೆ ಸಮಯದಲ್ಲಿ ಯಾರಾದ್ರು ಕಿಡಿಗೇಡಿಗಳು ದಟ್ಟ ಅರಣ್ಯಧಾಮಕ್ಕೆ ಬೆಂಕಿ ಹಾಕಿ ಹೋಗ್ತಾರೆ. ಇದ್ರಿಂದ ಪ್ರಾಣಿ ಪಕ್ಷಿಗಳಿಗೆ ಅನಾಹುತ ಆಗುತ್ತೆ ಎಂಬ ಕಾರಣಕ್ಕೆ ಕ್ಲೋಸ್ ಮಾಡಲಾಗುತ್ತದೆ. ಸದ್ಯ ಜೋಗಿಮಟ್ಟಿ ಅರಣ್ಯಧಾಮದಲ್ಲಿ ಮಳೆ ಹೆಚ್ಚೆಚ್ಚು ಬೀಳ್ತಿರೋದ್ರಿಂದ ಹಚ್ಚ ಹಸಿರಿನಿಂದ ಕೂಡಿದೆ. ಈ ಸಂದರ್ಭದಲ್ಲಿ ಯಾವುದೇ ಅನಾಹುತ ಆಗುವ ಸಂಭವ ಕಡಿಮೆ ಇರುತ್ತದೆ. ಆದ್ದರಿಂದ ಇದೇ ಶನಿವಾರದಿಂದ ಪ್ರವಾಸಿಗರಿಗೆ ಅವಕಾಶ ಕಲ್ಪಿಸಲಾಗುವುದು. ಮಿನಿ ಊಟಿ ಎಂದೇ ಪ್ರವಾಸಿಗರು ನಾನಾ ರಾಜ್ಯಗಳಿಂದಲೂ ಆಗಮಿಸಿ ವೀಕ್ಷಣೆ ಮಾಡೋದಕ್ಕೆ ಬರ್ತಾರೆ ಅದಕ್ಕೆ ಇದೇ ವಾರದ ವೀಕೆಂಡ್ ನಿಂದಲೇ ಜೋಗಿಮಟ್ಟಿ ನೋಡಲು ಪ್ರವಾಸಿಗರು ಬರಬಹುದು ಅಂತಾರೆ ಅರಣ್ಯಾಧಿಕಾರಿ.
ಒಟ್ಟಾರೆ ಮಳೆ ಬಂದ್ರೆ ಸಾಕು ಬರದನಾಡು ಚಿತ್ರದುರ್ಗದಲ್ಲಿರೋ ಜೋಗಿಮಟ್ಟಿಗೆ ಮಾತ್ರ ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗುತ್ತೆ. ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಸುಂದರ ಪರಿಸರವನ್ನು ಎಂಜಾಯ್ ಮಾಡ್ತಾರೆ.