ಮಂಗಳೂರು ಪ್ರತಿಭಟನೆಗೆ ಸಂಬಂಧಿಸಿ ಪ್ರಚೋದನಾತ್ಮಕ ಸಂದೇಶ ಕಳುಹಿಸಿದ 60 ಜನರ ವಿರುದ್ಧ ಸೈಬರ್ ಕ್ರೈಂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು(ಜ.04): ಮಂಗಳೂರಿನಲ್ಲಿ ಡಿ.19ರಂದು ನಡೆದ ಹಿಂಸಾಚಾರ ಸಂದರ್ಭ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದ ಆರೋಪದಲ್ಲಿ 60ಕ್ಕೂ ಅಧಿಕ ಮಂದಿಗೆ ವಿಚಾರಣೆಗೆ ಹಾಜರಾಗಲು ಮಂಗಳೂರು ಸೈಬರ್ ಕ್ರೈಂ ಪೊಲೀಸರು ನೋಟಿಸ್ ಜಾರಿಗೊಳಿಸಿದ್ದು, ಅದಕ್ಕೆ ವಿವರಣೆ ನೀಡದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂಸಾಚಾರ ಘಟನೆ ನಡೆಯುವ ಮುನ್ನ ಹಾಗೂ ನಡೆದ ಬಳಿಕ ಹಲವು ಸಾಮಾಜಿಕ ಜಾಲತಾಣದಲ್ಲಿ ಧರ್ಮ ಅವಹೇಳನ, ಪ್ರಚೋದನಕಾರಿಯಾಗಿ ಸಂದೇಶ ರವಾನಿಸಿದ್ದರು. ಪೊಲೀಸ್ ತನಿಖೆಯ ವೇಳೆ ಈ ಅಂಶಗಳು ಬಹಿರಂಗವಾಗಿ ಸೈಬರ್ ಠಾಣೆ ಪೊಲೀಸರು ಇದುವರೆಗೆ 60ಕ್ಕೂ ಹೆಚ್ಚು ಮಂದಿಗೆ ನೋಟಿಸ್ ಕಳುಹಿಸಿದ್ದಾರೆ.
ಕಪಿಲಾ ನದಿಯಲ್ಲಿ ತೇಲುತ್ತಿತ್ತು ನವಜಾತ ಶಿಶುವಿನ ಮೃತದೇಹ..!
ನೋಟಿಸ್ ನೀಡಿದ ಪೈಕಿ ಮೊಯ್ದೀನ್ ಹಮೀಜ್, ಜಲ್ದಿ ಸಿದ್ಧಿಕ್ ಎಂಬವರನ್ನು ನಗರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಗ್ಗೆ ತನಿಖೆ ನಡೆಯುತ್ತಿದೆ. ನೋಟಿಸ್ ಸಿಕ್ಕಿದವರು ಖುದ್ದು ತನಿಖಾಧಿಕಾರಿ ಮುಂದೆ ಹಾಜರಾಗಿ ವಿವರಣೆ ನೀಡಬೇಕಿದೆ. ನಾವು ಯಾವುದೇ ಪ್ರಚೋದನೆ ಮಾಡಿಲ್ಲ ಎಂದು ವಾದಿಸುವವರು ಅದಕ್ಕೆ ತಕ್ಕ ಪುರಾವೆಗಳನ್ನು ತನಿಖಾಧಿಕಾರಿಗೆ ಸಲ್ಲಿಬೇಕಾಗುತ್ತದೆ.
ಮಂಗಳೂರು ಗೋಲಿಬಾರ್ ಸಂತ್ರಸ್ತರ ನೆರವಿಗೆ 2 ಕೋಟಿ ಸಂಗ್ರಹ?
ಸೈಬರ್ ಆರೋಪ ಹಿನ್ನೆಲೆಯಲ್ಲಿ ನಗರ ಪೊಲೀಸರು ನೋಟೀಸು ನೀಡುತ್ತಿದ್ದಂತೆ ಕೆಲವರು ಮುಂದೆ ತೊಂದರೆಯಾಗದಿರಲೆಂದು ಗ್ರೂಪ್‌ಗಳಿಂದ ಸ್ವಯಂ ಲೆಫ್ಟ್ ಆಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ಇದು ಮಾತ್ರವಲ್ಲದೆ ಕೆಲವರು ವಾಟ್ಸಪ್ ಗ್ರೂಪ್‌ಗಳಲ್ಲಿ ನೋಟಿಸ್ ಪ್ರತಿಗಳನ್ನು ಫಾರ್ವರ್ಡ್ ಮಾಡಿ ಯಾರೂ ಪ್ರಚೋದನಾತ್ಮಕ ಸಂದೇಶ ಹಾಕದಂತೆ ಜಾಗೃತಿ ಸಂದೇಶ ಹಾಕುತ್ತಿದ್ದಾರೆ.
ತುಮಕೂರಲ್ಲಿ ಭೀಕರ ರಸ್ತೆ ಅಪಘಾತ: ಮೂವರು ಸಜೀವ ದಹನ