ಕೋರ್ಟ್ಗಳ ಸಮಯದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ. ಕಾರಣ ಬೇಸಿಗೆ ಆರಂಭವಾಗಿದ್ದು ಈ ನಿಟ್ಟಿನಲ್ಲಿ ಭಾರೀ ಬಿಸಿಲಿನ ಹಿನ್ನೆಲೆಯಲ್ಲಿ ಸಮಯ ಬದಲಾವಣೆ ಮಾಡಲಾಗಿದೆ.
ಬೆಂಗಳೂರು (ಮಾ.03): ಬೇಸಿಗೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದ ಕೆಲ ಜಿಲ್ಲೆಗಳ ಅಧೀನ ನ್ಯಾಯಾಲಯಗಳ ಹಾಗೂ ಕಚೇರಿ ಕೆಲಸದ ಅವಧಿಯನ್ನು ನಿಗದಿಪಡಿಸಿ ಹೈಕೋರ್ಟ್ ನೋಟಿಫಿಕೇಷನ್ ಹೊರಡಿಸಿದೆ.
ಕಲಬುರಗಿ ವಿಭಾಗದ ವ್ಯಾಪ್ತಿಯ ಬಳ್ಳಾರಿ, ಬೀದರ್, ಕೊಪ್ಪಳ, ರಾಯಚೂರು, ಕಲಬುರಗಿ ಹಾಗೂ ಬೆಳಗಾವಿ ವಿಭಾಗದ ವ್ಯಾಪ್ತಿಯ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಸಿವಿಲ್, ಕ್ರಿಮಿನಲ್ ಕೋರ್ಟ್, ಕೌಟುಂಬಿಕ ನ್ಯಾಯಾಲಯ ಮತ್ತು ಕಾರ್ಮಿಕ ನ್ಯಾಯಾಲಯಗಳ ಸಮಯ ಬೆಳಿಗ್ಗೆ 8ರಿಂದ 11 ಮತ್ತು 11.30ರಿಂದ 1.30 ಇರುತ್ತದೆ. ಕಚೇರಿ ಕೆಲಸದ ಸಮಯ ಬೆಳಿಗ್ಗೆ 7.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಇರುತ್ತದೆ. ಭೋಜನ ವಿರಾಮ ಬೆಳಿಗ್ಗೆ 11ರಿಂದ 11.30ರ ತನಕ ಇರಲಿದೆ. ಈ ಕೆಲಸದ ಅವಧಿ ಏ.3ರಿಂದ ಮೇ 31ರವರೆಗೆ ಜಾರಿಯಲ್ಲಿರುತ್ತದೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ (ಪ್ರಭಾರ) ಟಿ.ಜೆ. ಶಿವಶಂಕರೇಗೌಡ ಅಧಿಸೂಚನೆ ಹೊರಡಿಸಿದ್ದಾರೆ.
ಬೇಸಿಗೆಯಲ್ಲಿ ತುರಿಕೆ ಮತ್ತು ದದ್ದು ನಿವಾರಣೆ ಮಾಡಲು ಮನೆಮದ್ದುಗಳಿವು! ...
ಏಪ್ರಿಲ್ ಮತ್ತು ಮೇ ತಿಂಗಳ ನಾಲ್ಕನೇ ಶನಿವಾರದಂದು ಕೋರ್ಟ್ ಕೆಲಸ ಮಾಡುವುದಿಲ್ಲ. ಕೇವಲ ಕಚೇರಿಯು ಬೆಳಗ್ಗೆ 7.30ರಿಂದ ಮಧ್ಯಾಹ್ನ 12ವರೆಗೆ ಇರುತ್ತದೆ. ನ್ಯಾಯಾಂಗ ಅಧಿಕಾರಿಗಳು ನಾಲ್ಕನೇ ಶನಿವಾರವನ್ನು ಕೋರ್ಟ್ ಮತ್ತು ಜೈಲುಗಳ ಭೇಟಿ ನೀಡಲು ಬಳಸಬಹುದಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.