ಮಣಿಪಾಲ ಕಾಲೇಜಿನಲ್ಲಿ ಸಾವಿರದ ಗಡಿ ದಾಟಿತು ಸೋಂಕಿತರ ಸಂಖ್ಯೆ

By Kannadaprabha NewsFirst Published Apr 3, 2021, 7:27 AM IST
Highlights

ಮಣಿಪಾಲದ ಎಂಐಟಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ದಿನದಿದಂದ ದಿನಕ್ಕೆ ಏರಿಕೆಯಾಗುತ್ತಲೇ ಸಾಗಿದೆ. ಇದೀಗ ಇಲ್ಲಿನ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಕೊರೋನಾ ಕಾಣಿಸಿಕೊಂಡಿದೆ. 

ಉಡುಪಿ (ಏ.03): ತೀವ್ರ ಕೊರೋನಾತಂಕ ಎದುರಿಸುತ್ತಿರುವ ಮಣಿಪಾಲದ ಎಂಐಟಿ ಕ್ಯಾಂಪಸಿನಲ್ಲಿ ಶುಕ್ರವಾರ ಮತ್ತೆ 22 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಕಂಟೈನ್ಮೆಂಟ್‌ ಝೋನ್‌ ಆಗಿರುವ ಎಂಐಟಿಯಲ್ಲಿ ಸೋಂಕಿತರ ಸಂಖ್ಯೆ 1021 ಆಗಿದೆ.

 ಈಗಾಗಲೇ ಕ್ಯಾಂಪಸ್ಸಿನ ವಿದ್ಯಾರ್ಥಿನಿಲಯ ಮತ್ತು ಸಿಬ್ಬಂದಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ. ಇದರೊಂದಿಗೆ ಕ್ಯಾಂಪಸ್ಸಿನ ಹೊರಗೆ ಇರುವ ಬಾಡಿಗೆ ಮನೆ ಮತ್ತು ಫ್ಲಾಟ್‌ಗಳಲ್ಲಿ ವಾಸಿಸುತ್ತಿರುವ ವಿದ್ಯಾರ್ಥಿಗಳನ್ನೂ ಪರೀಕ್ಷೆಗೊಳಪಡಿಸಲಾಗುತ್ತಿದ್ದು ಅವರಲ್ಲಿಯೂ ಸೋಂಕು ಪತ್ತೆಯಾಗುತ್ತಿದೆ. 

ಬೆಂಗ್ಳೂರಲ್ಲಿ ಕೊರೋನಾರ್ಭಟ: 4 ತಿಂಗಳ ಬಳಿಕ ಗರಿಷ್ಠ ಕೇಸ್‌..!

ಈ ಹಿನ್ನೆಲೆಯಲ್ಲಿ ಒಂದು ಬಹುಮಹಡಿ ಅಪಾರ್ಟ್‌ಮೆಂಟ್‌ ಅನ್ನು ಬುಧವಾರವೇ ಸೀಲ್‌ಡೌನ್‌ ಮಾಡಲಾಗಿದೆ. ಬುಧವಾರ ಎಂಐಟಿಯಲ್ಲಿ 17 ಮಂದಿ ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿದ್ದರೆ ಗುರುವಾರ 11 ವಿದ್ಯಾರ್ಥಿಗಳಿಗೆ ದೃಢಪಟ್ಟಿತ್ತು. 

ಇದೀಗ ಮತ್ತೆ 22 ವಿದ್ಯಾರ್ಥಿಗಳಲ್ಲಿ ಕಾಣಿಸಿಕೊಂಡಿರುವುದು ಮಣಿಪಾಲದ ಸಾರ್ವಜನಿಕರ ಕಳವಳಕ್ಕೆ ಕಾರಣವಾಗಿದೆ.

click me!