ನೀರಿಗಾಗಿ 3ನೇ ಜಾಗತಿಕ ಯುದ್ಧ ನಡೆದರೂ ಅಚ್ಚರಿಯಿಲ್ಲ: ಡಾ. ರಾಜೇಂದ್ರ ಪೋದ್ದಾರ

By Kannadaprabha News  |  First Published Jan 19, 2023, 7:41 AM IST

ದೇಶದಲ್ಲಿ ನೀರಿನ ವೈಜ್ಞಾನಿಕ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಆಣೆಕಟ್ಟುಗಳ ನೀರಿನ ಹಂಚಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ನೀರಿಗಾಗಿ ಪೈಪೋಟಿ ನಡೆದಿದೆ. ಭವಿಷ್ಯದಲ್ಲಿ ಜಗತ್ತಿನಲ್ಲಿ ನೀರಿಗಾಗಿಯೇ 3ನೇ ಜಾಗತಿಕ ಯುದ್ಧ ಸಂಭವಿಸಿದರೂ ಆಶ್ಚರ್ಯಪಡಬೇಕಿಲ್ಲ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.


ಧಾರವಾಡ (ಜ.19) : ದೇಶದಲ್ಲಿ ನೀರಿನ ವೈಜ್ಞಾನಿಕ ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಆಣೆಕಟ್ಟುಗಳ ನೀರಿನ ಹಂಚಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದು, ನೀರಿಗಾಗಿ ಪೈಪೋಟಿ ನಡೆದಿದೆ. ಭವಿಷ್ಯದಲ್ಲಿ ಜಗತ್ತಿನಲ್ಲಿ ನೀರಿಗಾಗಿಯೇ 3ನೇ ಜಾಗತಿಕ ಯುದ್ಧ ಸಂಭವಿಸಿದರೂ ಆಶ್ಚರ್ಯಪಡಬೇಕಿಲ್ಲ ಎಂದು ವಾಲ್ಮಿ ನಿರ್ದೇಶಕ ಡಾ. ರಾಜೇಂದ್ರ ಪೋದ್ದಾರ ಹೇಳಿದರು.

ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಮರಿಗೌಡ ಫಕ್ಕೀರಗೌಡ ಪಾಟೀಲ ದತ್ತಿ ಉಪನ್ಯಾಸ ಅಂಗವಾಗಿ ಆಯೋಜಿಸಿದ್ದ ಜಲ-ನೆಲ ಸಂರಕ್ಷಣೆ ಮತ್ತು ನಿರ್ವಹಣೆ ಸವಾಲುಗಳು ಹಾಗೂ ಪರಿಹಾರಗಳು ವಿಷಯ ಕುರಿತು ಉಪನ್ಯಾಸ ನೀಡಿದರು. ನೀರು ಇಂದು ಜಗತ್ತಿನ ಅತ್ಯಂತ ಜ್ವಲಂತ ಸಮಸ್ಯೆಯಾಗಿ ಮಾರ್ಪಟ್ಟಿದೆ. ಭಾರತದಲ್ಲಿ ನೀರನ್ನು ಕೃಷಿ ಹಾಗೂ ಕೈಗಾರಿಕೆಗೆ ವ್ಯಾಪಕವಾಗಿ ಉಪಯೋಗಿಸುವುದರಿಂದ ನೀರಿನ ಸರಬರಾಜು ಮಾತ್ರ ಮಿತವಾಗಿದೆ ಎಂದರು.

Tap to resize

Latest Videos

ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅಸ್ತು: ಹೋರಾಟ ಹಾದಿ ಮೆಲುಕು ಹಾಕಿದ ಗಣ್ಯರು

ನೀರು ದುರ್ಬಳಕೆಯಿಂದಾಗಿ ಭೂಮಿಯೂ ಸಹ ತನ್ನ ಫಲವತ್ತತೆ ಕಳೆದುಕೊಂಡು ನಿಸ್ಸಾರವಾಗಿದೆ. ಈ ದೆಸೆಯಲ್ಲಿ ಪ್ರತಿ ನೀರಿನ ಹನಿ ಪ್ರಜ್ಞಾಪೂರ್ವಕವಾಗಿ ಸದ್ಬಳಕೆಯಾಗುವಂತೆ ಜಲಸಾಕ್ಷರತೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕು. ನೀರನ್ನು ವೈಜ್ಞಾನಿಕವಾಗಿ ಸದ್ಬಳಕೆ ಮಾಡಿಕೊಳ್ಳಲು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕು. ನವ ಉದಾರೀಕರಣ, ಅರ್ಥವ್ಯವಸ್ಥೆ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮಾರಕವಾಗಿದೆ. ಇಂದಿನ ಪಠ್ಯಕ್ರಮದಲ್ಲಿ ನೆಲ-ಜಲದ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುವುದು ಅಗತ್ಯ ಎಂದರು.

ವಿಶ್ರಾಂತ ಪ್ರಾಂಶುಪಾಲರಾದ ಜಯಶ್ರೀ ಪಾಟೀಲ ಮಾತನಾಡಿ, ದೇಶದಲ್ಲಿ ಪ್ರಥಮ ಸಹಕಾರ ಸಂಘ ಅವಿಭಜಿತ ಧಾರವಾಡ ಜಿಲ್ಲೆಯ ಕಣಗಿನಹಾಳದಲ್ಲಿ 1905ರಲ್ಲಿ ಪ್ರಾರಂಭವಾದದ್ದು ಕನ್ನಡಿಗರಿಗೆ ಹೆಮ್ಮೆ ವಿಚಾರ. ಇಂದು ಸಹಕಾರಿ ಕ್ಷೇತ್ರ ಸಾಕಷ್ಟುಪ್ರಗತಿ ಹೊಂದಿದೆ. ಲಿಜ್ಜತ್‌ ಪಾಪಡ, ಅಮೂಲ, ಇಫೊ್ಕೕ, ಸಹಕಾರಿ ಕ್ಷೇತ್ರದಲ್ಲಿ ಹೆಸರು ಮಾಡಿವೆ. ಸ್ತ್ರೀಶಕ್ತಿ ಗುಂಪುಗಳು ಸಹ ಸಹಕಾರಿ ಕ್ಷೇತ್ರದ ದೊಡ್ಡ ಸಾಧನೆಯಾಗಿದೆ ಎಂದು ತಿಳಿಸಿದರು.

BIG 3: 3 ತಿಂಗಳಿಂದ ನೀರಿಲ್ಲದೆ ಜನರ ಪರದಾಟ! ಕೋಟಿ ಕೋಟಿ ಖರ್ಚು ಮಾಡಿದ್ರೂ ಸಿಗುತ್ತಿಲ್ಲ ನೀರು..!

ಕರ್ನಾಟಕ ಸಹಕಾರ ಗ್ರಾಹಕರ ಮಹಾಮಂಡಳದ ಅಧ್ಯಕ್ಷ ಜಿ.ಪಿ. ಪಾಟೀಲ, ದತ್ತಿದಾನಿ ಸುರೇಖಾ ಪಾಟೀಲ, ಎಸ್‌.ಎಂ. ಪಾಟೀಲ, ಆರ್‌.ಎಂ. ಪಾಟೀಲ ಮಾತನಾಡಿದರು. ದಿ. ಎಂ.ಎಫ್‌. ಪಾಟೀಲರ ಭಾವಚಿತ್ರಕ್ಕೆ ಗಣ್ಯರು, ಕುಟುಂಬದವರು ಪುಷ್ಪನಮನ ಸಲ್ಲಿಸಿದರು. ಟಿ.ಎಸ್‌. ಗೌಡಪ್ಪನವರ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪದಾಧಿಕಾರಿಗಳಿದ್ದರು.

click me!