ಏಪ್ರಿಲ್‌ನಿಂದ ಪಡಿತರ ಗೋಧಿ ಸಿಗಲ್ಲ: ಕೇಂದ್ರದ 5 ಕೆ ಜಿ ಅಕ್ಕಿಗೂ ಕೊಕ್ಕೆ!

By Suvarna News  |  First Published Mar 23, 2022, 7:40 PM IST

ನ್ಯಾಯಬೆಲೆ ಅಂಗಡಿಗಳಲ್ಲಿ ಇದುವರೆಗೂ ವಿತರಿಸಲಾಗುತ್ತಿದ್ದ ಗೋಧಿ ಇನ್ನು ಪಡಿತರ ಚೀಟಿದಾರರಿಗೆ ಸಿಗುವುದಿಲ್ಲ. ಮಾರ್ಚ್ ತಿಂಗಳೇ ಗೋಧಿ ವಿತರಣೆ ಕೊನೆಯಾಗಲಿದೆ. ಇದರ ಬದಲು ಏಪ್ರಿಲ್‌ನಿಂದ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತಣೆಯಾಗಲಿದೆ.


ವರದಿ: ರವಿಕುಮಾರ್ ವಿ, ಚಿಕ್ಕಬಳ್ಳಾಪುರ 

ಚಿಕ್ಕಬಳ್ಳಾಪುರ (ಮಾ.23): ನ್ಯಾಯಬೆಲೆ ಅಂಗಡಿಗಳಲ್ಲಿ (Ration Center) ಇದುವರೆಗೂ ವಿತರಿಸಲಾಗುತ್ತಿದ್ದ ಗೋಧಿ ಇನ್ನು ಪಡಿತರ ಚೀಟಿದಾರರಿಗೆ (Ration Card) ಸಿಗುವುದಿಲ್ಲ. ಮಾರ್ಚ್ ತಿಂಗಳೇ ಗೋಧಿ ವಿತರಣೆ ಕೊನೆಯಾಗಲಿದೆ. ಇದರ ಬದಲು ಏಪ್ರಿಲ್‌ನಿಂದ ಹೆಚ್ಚುವರಿಯಾಗಿ ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ವಿತಣೆಯಾಗಲಿದೆ. ಪಡಿತರ ಅಂಗಡಿಗಳಲ್ಲಿ ಸರ್ಕಾರದಿಂದ ಇದುವರೆಗೂ ಕೇಂದ್ರ (Central Government) ಮತ್ತು ರಾಜ್ಯ ಸರ್ಕಾರದ (State Government) ಕೋಟಾದಲ್ಲಿ ಪ್ರತಿ ಸದಸ್ಯನಿಗೆ 10 ಕೆ.ಜಿ. ಹಾಗೂ ಒಂದು ಪಡಿತರ ಕಾರ್ಡ್‌ಗೆ 2 ಕೆ.ಜಿ. ಗೋಧಿ ವಿತರಣೆ ಮಾಡಲಾಗುತ್ತಿತ್ತು ಆದರೆ ಏಪ್ರಿಲ್ ತಿಂಗಳಿಂದ ಕೊರೊನಾ ಕಾರಣ ಕೇಂದ್ರ ಸರ್ಕಾರ ವಿತರಣೆ ಮಾಡುತ್ತಿದ್ದ ತಲಾ 5 ಕೆ.ಜಿ. ಅಕ್ಕಿ ವಿತರಣೆಯ ಬಾಬ್ತು  ಕೂಡ ಮುಗಿಯಲಿದೆ. 

Tap to resize

Latest Videos

ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ: ಪಡಿತರದಾರರಿಗೆ ಏಪ್ರಿಲ್‌ನಿಂದ ಪ್ರತಿ ಸದಸ್ಯನಿಗೆ ತಲಾ 5 ಕೆ.ಜಿ. ಅಕ್ಕಿ ಹಾಗೂ ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಸೇರಿ 6 ಕೆ.ಜಿ.ಅಕ್ಕಿ ಸಿಗಲಿದ್ದು, ಇನ್ಮುಂದೆ ಗೋಧಿ ವಿತರಣೆ ಇರುವುದಿಲ್ಲ ಎಂದು ಸರ್ಕಾರ ಆದೇಶ ಹೊರಡಿಸಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಇನ್ನು ಅಕ್ಕಿಯಷ್ಟೇ ಪಡಿತರದಾರರಿಗೆ ಸಿಗಲಿದೆ.

ಸರ್ಕಾರದ ನಿರ್ಧಾರ: ರಾಜ್ಯ ಸರ್ಕಾರದಿಂದ ಆದೇಶ ಬಂದಿದ್ದು, ನ್ಯಾಯಬೆಲೆ ಅಂಗಡಿಗಳಲ್ಲಿ ಮುಂದಿನ ತಿಂಗಳಿಂದ ಗೋಧಿ ಸಿಗಲ್ಲ. ಗೋಧಿ ಬದಲು ಪ್ರತಿ ಸದಸ್ಯನಿಗೆ 1 ಕೆ.ಜಿ. ಅಕ್ಕಿ ಹೆಚ್ಚುವರಿಯಾಗಿ ವಿತರಿಸಲಿದ್ದಾರೆ ಎಂದು ತಿಳಿಸಲಾಗಿದೆ. ಜೊತೆಗೆ ಕೇಂದ್ರ ಸರ್ಕಾರದಿಂದ ಕೋವಿಡ್ ಪ್ರಯುಕ್ತ ನೀಡಲಾಗುತ್ತಿದ್ದ ತಲಾ 5 ಕೆ ಜಿ ಅಕ್ಕಿ ಕೂಡ ಏಪ್ರಿಲ್‌ನಿಂದ ಸಿಗುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಸರ್ಕಾರದ ನಿರ್ಧಾರಕ್ಕೆ ಆಗಲೇ ಪಡಿತರದಾರರಿಗೆ ಆಕ್ಷೇಪ ವ್ಯಕ್ತವಾಗಿದೆ.

ರೈತರ ಫಲವತ್ತಾದ ಭೂಮಿ ಸ್ವಾಧೀನಕ್ಕೆ ಮುಂದಾದ ಸರ್ಕಾರ

ಅಂತ್ಯೋದಯ ಕಾರ್ಡ್ ನವರಿಗೆ ರಾಗಿ ವಿತರಣೆ: ರಾಜ್ಯದ ಅಂತ್ಯೋದಯ ಕಾರ್ಡ್ ಇರೋ ಪಡಿತರದಾರರಿಗೆ ಸರ್ಕಾರದಿಂದ ರಾಗಿ ಖರೀದಿ ಮಾಡಿ ಪ್ರತಿ ಕಾರ್ಡ್ಗೆ 15 ಕೆ ಜಿ ರಾಗಿ ಕೂಡ ವಿತರಣೆ ಮಾಡಲು ನಿರ್ಧರಿಸಿದ್ದು, ಈಗಾಗಲೇ ರಾಗಿಯನ್ನು ಬೆಂಬಲ ಬೆಲೆಗೆ ಖರೀದಿ ಮಾಡಲಾಗಿದ್ದು, ಏಫ್ರಿಲ್ ನಿಂದಲೇ ರಾಗಿ ವಿತರಣೆ ಮಾಡೋದಾಗಿ ಸರ್ಕಾರ ಹೇಳಿದೆ.. ಈ ಕಾರ್ಡ್ ಗೆ ಒಟ್ಟು 35 ಕೆ ಜಿ ನೀಡಬೇಕಿದ್ದು, ಇದರಲ್ಲಿ ರಾಗಿ 15 ಕೆ ಜಿ ಹಾಗೂ ಅಕ್ಕಿ 20 ಕೆ ಜಿ ವಿತರಣೆಯಾಗಲಿದೆ.

ಗೋಧಿ ನಿಲ್ಲಿಸುವ ಕ್ರಮಕ್ಕೆ ಅಸಮಾಧಾನ: ಹೆಚ್ಚುವರಿ ಅಕ್ಕಿ ಸಿಕ್ಕರೂ ಗೋಧಿ ವಿತರಣೆಗೆ ಬ್ರೇಕ್ ಹಾಕಿರುವುದಕ್ಕೆ ಸಹಜವಾಗಿಯೆರ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಪಡಿತರ ಅಂಗಡಿ ಎಂದರೆ ಕೇವಲ ಅಕ್ಕಿ ವಿತರಣೆ ಕೇಂದ್ರವಾಗಿ ಮಾರ್ಪಾಡಾಗಿದೆ. ಈ ಮೊದಲು ಎಣ್ಣೆ, ಸೋಪು, ಸಕ್ಕರೆ ಹೀಗೆ ಇನ್ನಷ್ಟು ಪದಾರ್ಥಗಳನ್ನು ಮಾರಲಾಗುತ್ತಿತ್ತು. ಸಕ್ಕರೆ ವಿತರಣೆ ಕೂಡ ನಿಂತು ವರ್ಷಗಳಾಗಿವೆ. ಈಗ  ಗೋಧಿಯನ್ನು ನಿಲ್ಲಿಸಲಾಗುತ್ತಿದೆ. ಹೀಗಾಗಿ ನ್ಯಾಯಬೆಲೆ ಅಂಗಡಿಗಳಲ್ಲಿ ಸದ್ಯಕ್ಕೆ ಕೇವಲ ಅಕ್ಕಿ ಮಾತ್ರ ಸಿಗಲಿದೆ.

ಮೋದಿ ಆಡಳಿತದಲ್ಲಿ ಜನ ಸಂಪತ್ಭರಿತರಾಗಿದ್ದಾರೆಂದು HDK ವ್ಯಂಗ್ಯ

ಗೋಧಿಗೆ ಬೇಡಿಕೆ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ರಾಗಿಯನ್ನು ಹೆಚ್ಚಾಗಿ ಬೆಳೆಯುತ್ತಾರೆ. ಸಕ್ಕರೆ, ಗೋಧಿ, ಅಕ್ಕಿಯ ಅವಶ್ಯಕತೆ ಈ ಭಾಗದದ ಜನರಿಗೆ ಹೆಚ್ಚಿದೆ. ಇದುವರೆಗೂ ನೀಡುತ್ತಿದ್ದ ಅಲ್ಪ ಪ್ರಮಾಣದ ಗೋಧಿಯನ್ನೇ ಹಿಟ್ಟು ಮಾಡಿಸಿಕೊಂಡು ವಿವಿಧ ಅಡುಗೆಗಳಲ್ಲಿ ಬಳಸುತ್ತಿದ್ದರು. ಆದರೆ ಈಗ ಗೋಧಿ  ನಿಲ್ಲಿಸಿರುವುದಕ್ಕೆಕ್ಕೆ ಆಕ್ಷೇಪ ವ್ಯಕ್ತವಾಗಿದೆ. ನ್ಯಾಯಬೆಲೆ ಅಂಗಡಿ ಎಂದರೆ ಕೇವಲ ಅಕ್ಕಿ ವಿತರಣಾ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಪಡಿತರದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನ್ಯಾಯಬೆಲೆ ಅಂಗಡಿಗಳಲ್ಲಿ ಕೇವಲ ಅಕ್ಕಿ ವಿತರಿಸಿದರಷ್ಟೇ ಸಾಲದು. ಅತ್ಯವಶ್ಯವಾದ ಗೋಧಿ, ಸಕ್ಕರೆ ಸೇರಿದಂತೆ ಇನ್ನಿತರ ಅಗತ್ಯ ಸಾಮಗ್ರಿಗಳು ದೊರಕಬೇಕು ಎಂಬುದು ಪಡಿತರದಾರರ ಆಗ್ರಹವಾಗಿದೆ. ಆದರೆ ರಾಜ್ಯ ಸರ್ಕಾರ ಜನರ ಬೇಡಿಕೆಗೆ ಸ್ಪಂದಿಸುತ್ತಾ ಎಂಬುದನ್ನ ಕಾದುನೋಡಬೇಕು.

click me!