50 ವರ್ಷದಿಂದ ಮನೆಗೆ ಹೋಗಲು ದಾರಿಯಿಲ್ಲ: ದಯಾಮರಣ ಕೋರಿ ಗ್ರಾಮಸ್ಥರಿಂದ ರಾಷ್ಟ್ರಪತಿಗೆ ಪತ್ರ

By Sathish Kumar KH  |  First Published Mar 26, 2023, 10:08 PM IST

ಮನೆಗೆ ದಾರಿ ಮಾಡಿಕೊಡಿ, ಇಲ್ಲವೇ ದಯಾಮರಣಕ್ಕೆ ಅವಕಾಶ ನೀಡಿ 
ರಸ್ತೆಗಾಗಿ 50 ವರ್ಷದಿಂದ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಕೆ 
ಸರ್ಕಾರದ ನಿರ್ಲಕ್ಷ್ಯಕ್ಕೆ ಬೇಸತ್ತು ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದ ಗ್ರಾಮಸ್ಥರು 


ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಮಾ.26):  ಇದೊಂದು ಕಂದಾಯ ಗ್ರಾಮವಾಗಿದ್ದು, ನಾಲ್ಕಾರು ಮನೆಗಳೂ ಇವೆ. ಆದರೆ, ಬ್ರಿಟೀಷರು ಮಾಡಿದ ಎಡವಟ್ಟಿನಿಂದಾಗಿ ಮನೆಗಳಿಗೆ ಹೋಗಲು ಕಳೆದ 50 ವರ್ಷಗಳಿಂದ ರಸ್ತೆಯೇ ಇಲ್ಲದಂತಾಗಿದೆ. ರಸ್ತೆಯನ್ನು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿ ಬೇಸತ್ತಿರುವ ಗರಾಮಸ್ಥರು, ದಾರಿ ಮಾಡಿಕೊಡದಿದ್ದರೆ ನಮಗೆ ದಯಾಮರಣವನ್ನಾದರೂ ಕರುಣಿಸಿ ಎಂದು ರಾಷ್ಟ್ರಪತಿಗೆ ಪತ್ರ ಬರೆದಿದ್ದಾರೆ.

Tap to resize

Latest Videos

undefined

ಸ್ವಾತಂತ್ರ್ಯಕ್ಕೂ ಮೊದಲೆ ಸರ್ಕಾರ ಮಾಡಿದ ಒಂದು  ಎಡವಟ್ಟಿನಿಂದಾಗಿ ಇಂದಿಗೂ ಇಡೀ ಗ್ರಾಮದ ಜನರ ಜೀವನವೇ ನರಕಕ್ಕೆ ತಳ್ಳಿದಂತಾಗಿದೆ. ಕಾನೂನು ಮೀರಿ ಅರಣ್ಯ ಭೂಮಿಯನ್ನು ಖಾಸಗಿಯವರಿಗೆ ಕೊಟ್ಟು ಜನರನ್ನ ಸಂಕಷ್ಟದ ಕೂಪಕ್ಕೆ ತಳ್ಳಿದೆ. ಮನೆ ಇದ್ರೂ ಮನೆಗೆ ಹೋಗೋಕೆ ದಾರಿಯೇ ಇಲ್ಲ. ದಾರಿ ಯಾವುದಯ್ಯಾ ಅಂತ ಮನೆ ಮಂದಿ ಗೋಗರೆದು ದಿಕ್ಕು ತೋಚದೆ ಕಡೆಗೆ ಗ್ರಾಮಸ್ಥರೆಲ್ಲರಿಗೂ ದಯಾಮರಣ ಕೊಡುವಂತೆ ಆಗ್ರಹಿಸಿ ರಾಷ್ಟ್ರಪತಿಗೆ ಅರ್ಜಿ ಹಾಕಿದ್ದಾರೆ.

ಕೊಡವ ಸ್ವಾಯತ್ತ ಲ್ಯಾಂಡ್ ಬೇಡಿಕೆಗೆ ಅಭಿವೃದ್ಧಿ ನಿಗಮ ಕೊಡುಗೆ

ಬ್ರಿಟೀಷರ ನಿರ್ಧಾರದಿಂದ ಭಾರಿ ಎಡವಟ್ಟು: ಹೌದು ಕೊಡಗಿನ ಅರಣ್ಯ ಸಂಪತ್ತಿಗೆ, ಕೊಡಗಿನ ಸಂಸ್ಕೃತಿ ಇತಿಹಾಸಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಅದು ಇಂದು ಮರೆಯಾಗ್ತಿದೆ. ಕೊಡಗಿನ ಜನ ಭೂಮಿಯ ವಿಚಾರವಾಗಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅದಕ್ಕೆ ಬ್ರಿಟೀಷರ ಕಾಲದಲ್ಲಿ ನಡೆದ ಕೆಲವು ದೌರ್ಜನ್ಯಗಳು‌ ಸಾಕ್ಷಿಯಾಗುತ್ತಿವೆ. ಅಂತಹುದೇ ಒಂದು ಬ್ರಿಟಿಷ್ ಕಾಲದ ನಿರ್ಧಾರ ಗ್ರಾಮದ ಜನರ ಮನೆಗಳ ರಸ್ತೆಯನ್ನೇ ನುಂಗಿ ಹಾಕಿದೆ. ಇಂತಹ ಸಮಸ್ಯೆಗೆ ಸಿಲುಕಿ ನಲುಗ್ತಿರೋದು ಮಡಿಕೇರಿ ತಾಲೂಕಿನ ಸಂಪಾಜೆ ಮತ್ತು ಚೆಂಬು ಗ್ರಾಮ.‌ 

999 ವರ್ಷಗಳಿಗೆ ಅರಣ್ಯ ಲೀಸ್‌ ಕೊಟ್ಟ ಬ್ರಿಟೀಷರು: ಈ ಗ್ರಾಮದಲ್ಲಿ ಇದ್ದ ಸಂಪದ್ಭರಿತ ನೂರಾರು ಎಕರೆ ಅರಣ್ಯವನ್ನ ಸರ್ಕಾರ ಖಾಸಗಿಯವರಿಗೆ 999 ವರ್ಷಗಳಿಗೆ ಲೀಸ್‌ಗೆ ಕೊಟ್ಟಿತ್ತು. ಅದೂ ಕೂಡ 1926ರಲ್ಲಿ. ಅಂದು ಅರಣ್ಯವನ್ನ ಪಡೆದ ಖಾಸಗಿ‌ ಸಂಸ್ಥೆ ಅರಣ್ಯ ನಾಶ ಮಾಡಿ ರಬ್ಬರ್ ತೋಟ ಮಾಡಿದೆ. ಅದೇ ಅರಣ್ಯದ ಅಂಚಿನಲ್ಲಿ ಗ್ರಾಮದ ಜನರು ಗೂಡು ಕಟ್ಟಿಕೊಂಡಿದ್ದರು. ಆದರೆ, ಗ್ರಾಮಸ್ಥರು ಹಿಂದಿನ ಕಾಲದಿಂದಲೂ ಬಳಸುತ್ತಿದ್ದ ರಸ್ತೆಯನ್ನ ಈ ಖಾಸಗಿ ರಬ್ಬರ್ ತೋಟದ ಮಾಲೀಕ ಮುಚ್ಚಿದ್ದಾನೆ. 300 - 400 ಮೀಟರ್ ರಸ್ತೆಯನ್ನು ಬಿಟ್ಟು ಕೊಡದೆ ಗ್ರಾಮಸ್ಥರನ್ನ ಸಂಕಷ್ಟಕ್ಕೆ ತಳ್ಳಿದ್ದಾನೆ.

ಗ್ರಾಮಕ್ಕೆ ರಸ್ತೆಯೇ ಇಲ್ಲದಂತೆ ರಬ್ಬರ್‌ ತೋಟ ನಿರ್ಮಾಣ: ಮುಖ್ಯವಾಗಿ ರಸ್ತೆಯನ್ನು ಮುಚ್ಚಲು ಕಾರಣ ಅರಣ್ಯ ಇಲಾಖೆ ಹಾಗೂ ಸರ್ಕಾರ ಸೇರಿಕೊಂಡು ಖಾಸಗಿಯವರೊಂದಿಗೆ ಸಾಥ್ ನೀಡಿದೆ ಎಂದು ಗ್ರಾಮದ ಮಹೇಶ್ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಚೆಂಬು ಗ್ರಾಮದ ಯು-ಚೆಂಬು ಬಳಿಯ ನಾಲ್ಕು‌ ಮನೆಗಳಿಗೆ ದಾರಿಯೇ ಇಲ್ಲ. ಸ್ವಾತಂತ್ರ್ಯ ಬಂದು ಏಳು ದಶಕಗಳಾದರೂ ರಸ್ತೆ ಸಂಪರ್ಕವೇ ಇಲ್ಲವೆಂದರೆ ನಿಜಕ್ಕೂ ಇಡೀ ನಾಗರಿಕ ಸಮಾಜವೇ ತಲೆ‌ತಗ್ಗಿಸುವಂತಿದೆ. ಯು‌ಚೆಂಬುವಿನ ನಾಲ್ಕು ಮನೆಗಳಿಗೆ ಸರ್ಕಾರ ಖಾಸಗಿಯವರಿಗೆ ನೀಡಿದ ರಬ್ಬರ್ ತೋಟದ ಒಳಗೆಯೇ ರಸ್ತೆ ನೀಡಬೇಕು ಅಂತ ತಹಶೀಲ್ದಾರ್ ಲಿಖಿತ ಸೂಚನೆ ನೀಡಿದ್ದಾರೆ. ಆದರೆ, ಇದಕ್ಕೆ ತೋಟದ ಮಾಲೀಕರು ಒಪ್ಪುತ್ತಿಲ್ಲ. 

Kodagu : ವಿರಾಜಪೇಟೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಫೈಟ್‌ಗೆ ರೆಡಿಯಾದ ಕಾಂಗ್ರೆಸ್

ಸರ್ಕಾರದ ಆದೇಶಕ್ಕೂ ಕ್ಯಾರೇ ಎನ್ನದ ವ್ಯಕ್ತಿ: ಇನ್ನು ಸರ್ಕಾರದ ಆದೇಶಕ್ಕೆ ಒಪ್ಪದ ಮಾಲೀಕನ ನಡೆಯಿಂದಾಗಿ ನಾಲ್ಕು ಮನೆಯ ನಿವಾಸಿಗಳು, ಮಕ್ಕಳು ಮತ್ತು ವಯಸ್ಸಾದವರು ಹತ್ತಾರು ಕಿಲೋ ಮೀಟರ್ ನಡೆದುಕೊಮಡೇ ಸಾಗಬೇಕು. ಇಂತಹ ಸಮಸ್ಯೆಯಿಂದ ಪಾರು ಮಾಡಿ ಅಂತ ಸ್ಥಳೀಯ ಪಂಚಾಯಿತಿ, ಜಿಲ್ಲಾಡಳಿತ, ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌‌ಗೂ ಮನವಿ‌ ಮಾಡಿದರೂ ಸ್ಪಂದಿಸ್ತಿಲ್ಲ. ಇದರಿಂದ ಬೇಸತ್ತ ಒಂದು ಕುಟುಂಬ ದಯಾಮರಣಕ್ಕೆ ಡಿಸಿ, ಸಿಎಂ, ಪಿಎಂ‌ಗೆ ಮತ್ತು ರಾಷ್ಟ್ರಪತಿಯವರಿಗೆ ಅರ್ಜಿ ಸಲ್ಲಿಸಿದ್ದೇವೆ ಎನ್ನುತ್ತಾರೆ ಪವನ್ ಕೃಷ್ಣ. ಇನ್ನೂ ಸಮಸ್ಯೆ ಪರಿಹರಿಸದಿದ್ರೆ ಸಾಯ್ತೇವೆ ಅಂತ ಕುಟುಂಬಗಳು ಕಣ್ಣೀರಿಡ್ತಿವೆ. 

ಒಟ್ಟಿನಲ್ಲಿ ದುರಾಸೆಗೋ ರಾಜಕೀಯ ಒತ್ತಡಕ್ಕೋ ಅಥವಾ ಬ್ರಿಟಿಷ್ ಕಾಲದ ನಿಯಮಕ್ಕೋ ಕಟ್ಟುಬಿದ್ದು, ಸರ್ಕಾರವಂತೂ ಸಂಪದ್ಭರಿತ ಅರಣ್ಯವನ್ನ ಖಾಸಗಿಯವರಿಗೆ ಧಾರೆ ಎರೆದು ಆ ಭಾಗದ ಜನರನ್ನ ಸಂಕಷ್ಟದ ಕೂಪಕ್ಕೆ ತಳ್ಳಿಬಿಟ್ಟಿದೆ. ನೂರಾರು ಏಕರೆ ಅಂತ ಸಾವಿರಾರು ಏಕರೆಯನ್ನ ಅತಿಕ್ರಮಿಸಿಕೊಂಡಿರುವ ಖಾಸಗಿ ರಬ್ಬರ್ ತೋಟದ ಕಂಪೆನಿಯೊಂದು ಗ್ರಾಮದ ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದರೂ ಇಡೀ ಸರ್ಕಾರ ಹಾಗೂ ಆಡಳಿತ ವ್ಯವಸ್ಥೆ ಮೌನಕ್ಕೆ ಶರಣಾಗಿರುವುದು ವಿಪರ್ಯಾಸವೇ ಸರಿ. ಒಂದೊಮ್ಮೆ ರಸ್ತೆ ಇಲ್ಲ ಅಂತ ಈ ಕುಟುಂಬಗಳು ಸಾವಿನ ದಾರಿ‌ ಹಿಡಿದರೆ ಅದಕ್ಕೆ ಸರ್ಕಾರವೇ ಹೊಣೆಯಾಗಲಿದೆ.

click me!