ಸಮಾಜದಲ್ಲಿನ ಎಲ್ಲ ಸಮುದಾಯಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೀಸಲು ನೀತಿ ಜಾರಿಗೊಳಿಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್
ಬಾಗಲಕೋಟೆ (ಮಾ.26): ಸಮಾಜದಲ್ಲಿನ ಎಲ್ಲಾ ಸಮುದಾಯಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮೀಸಲು ನೀತಿ ಜಾರಿಗೊಳಿಸಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಹೇಳಿದರು. ಅವರು ಬಾಗಲಕೋಟೆ ಜಿಲ್ಲೆಯ ಕೆರಕಲಮಟ್ಟಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಿಧಾನಸಭೆಗೆ ಕೂಗು ಕೇಳದಂತಹ ಸಣ್ಣ, ಸಣ್ಣ ಸಮುದಾಯಗಳಿವೆ. ಅಂತವರ ಕಡೆಗೆ ಗಮನ ಹರಿಸುವವರು ಯಾರು ಎಂದು ಪ್ರಶ್ನಿಸಿ, ಅಂತವರ ಕಡೆಗೆ ಗಮನ ಹರಿಸುವುದರ ಸಲುವಾಗಿಯೇ. ಕೇವಲ ಪಂಚಮಸಾಲಿ, ಒಕ್ಕಲಿಗ ಅಂತೇಳಿ ಮಾಡಲಿಲ್ಲ. ಸಂಪೂರ್ಣ ಲಿಂಗಾಯತ ಸಮಾಜ ಅಂತೇಳಿ ಮಾಡಿದ್ದೀವಿ ಎಂದರು.
undefined
ಬೌದ್ಧಿಕವಾಗಿ ಬುದ್ಧಿವಂತರ ಜತೆಗೆ ಮುಸ್ಲಿಮರು ಸ್ಪರ್ಧೆ ಮಾಡೋಕೆ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಬೌದ್ಧಿಕವಾಗಿ ಬುದ್ದಿವಂತರರಿಗೆ ಇಲ್ಲಿಯ ಶೇ. 4ರಲ್ಲೂ ಅವಕಾಶ ಇಲ್ಲ. ಡಿಕೆಶಿ, ಸಿದ್ದರಾಮಯ್ಯ ಅವರಿಗೆ ಹೇಳುತ್ತೇನೆ. ಮೊದಲೇನು ನಿಯಮ ಇತ್ತು, ಈಗೇನು ನಿಯಮ ಇದೆ ಎನ್ನುವ ಅಭ್ಯಾಸ ಮಾಡಿ ಹೇಳಿ ಎಂದರು. ಚುನಾವಣೆ ಎದುರಿಸೋಕೆ ಕಂಡು ಕೊಂಡ ದಾರಿ ಮೀಸಲಾತಿ ಎಂಬ ಕಾಂಗ್ರೆಸ್ಸಿಗರ ಹೇಳಿಕೆಗೆ ತಿರುಗೇಟು ನೀಡಿದ ಅವರು ಹಿಂದುಳಿದ ಆಯೋಗ ಅಧ್ಯಕ್ಷ ಜಯಪ್ರಕಾಶ್ ಅವರಿಗೆ ಜವಾಬ್ದಾರಿ ಕೊಟ್ಟಾಗ, ಅವರು ಪ್ರತಿಯೊಂದು ತಾಲ್ಲೂಕನ್ನು ಸುತ್ತಾಡಿದ್ದಾರೆ. ಪ್ರತಿಯೊಂದು ತಾಲ್ಲೂಕಿನಲ್ಲಿ ಅಭಿಪ್ರಾಯ ಪಡೆದಿದ್ದಾರೆ. ಸಾವಿರಾರು ಪೇಜಿನ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಬೇಕಂದ್ರೆ ಡೇಟ್ ವೈಸ್ ಸಂಪೂರ್ಣ ಮಾಹಿತಿ ಕೊಡುತ್ತೇವೆ. ಎಲ್ಲ ಮಾಹಿತಿ ಸಂಗ್ರಹಣೆ ಮಾಡಿ, ಯಾವ ಸಮಾಜಕ್ಕೂ ಅನ್ಯಾಯ ಆಗದಂತೆ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಹೇಳಿದರು.
ಸಿದ್ದರಾಮಯ್ಯ ವರುಣಾದಲ್ಲೂ ಸೋಲು ಕಾಣುತ್ತಾರೆ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಾದಾಮಿಯಲ್ಲಿ ಗೆಲ್ಲುತ್ತಾರೆ ಎನ್ನುವ ರಿಪೋರ್ಟ್ ಇದ್ದರೆ, ಅವರೇಕೆ ಬಿಟ್ಟು ಹೋಗುತ್ತಿದ್ದರು. ಕಾಂಗ್ರೆಸ್ ಸ್ನೇಹಿತರು ಬಾದಾಮಿಗೆ ಬನ್ನಿ ಎಂದು ಸ್ವಾಗತ ಮಾಡ್ತಿದ್ದಾರೆ. ಆದರೂ ಬಿಟ್ಟು ಹೋಗ್ತಾರೆ ಎಂದ್ರೆ ಯಾಕೆ ಎಂದ ಅವರು ಆಂತರಿಕ ವರದಿಯಲ್ಲಿ ಅವರು 50 ಸಾವಿರ ಮತಗಳಿಂದ ಸೋಲುತ್ತಾರೆಂಬ ಮಾಹಿತಿ ಇದೆ. ಅದು ನಮಗೆ ಗೊತ್ತಿದೆ ಎಂದರು.
Reservation Fight: EWS ಹಂಚಿಕೆಯಿಂದ ಮುಸ್ಲಿಮರಿಗೆ ಶೇ.8 ಮೀಸಲಾತಿ ಲಭ್ಯ: ಮಾಧುಸ್ವಾಮಿ
ಕೋಲಾರ ಯಾಕೆ ಬಿಟ್ಟು ಹೋದರು. ಕೋಲಾರದಲ್ಲಿಯೂ ಸೋಲಾಗಲಿದೆ ಎನ್ನುವುದು ಗೊತ್ತಾಗಿದೆ. ಹಾಗಾಗಿ ಅವರಿಗೆ ಕ್ಷೇತ್ರವೇ ಇಲ್ಲ. ಒಬ್ಬ ರಾಜಕೀಯ ನಾಯಕರಾದವರು, ಪ್ರತಿ ಸಲವೂ ಕ್ಷೇತ್ರ ಬದಲಾವಣೆ ಮಾಡುತ್ತಾ ಹೋಗುತ್ತಾರೆ ಅಂದರೆ ಅವರಿಗೆ ಆ ಕ್ಷೇತ್ರದ ಮೇಲೆ ವಿಶ್ವಾಸ ಇಲ್ಲ. ಸೋಲಿನ ಭಯದಿಂದ ಎರಡು ಮೂರು ಕ್ಷೇತ್ರ ಹುಡುಕುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲೂ ನೂರಕ್ಕೆ ನೂರು ಸೋಲುತ್ತಾರೆ ಎಂದರು.
ಸಂವಿಧಾನಕ್ಕೆ ವಿರುದ್ಧವಾಗಿ ಮುಸ್ಲಿಮರು 4% ಮೀಸಲಾತಿ ಪಡೆದುಕೊಂಡಿದ್ರು: ಪ್ರತಾಪ್ ಸಿಂಹ
ಮೀಸಲಾತಿ ಕುರಿತು ಕಾಂಗ್ರೆಸ್ಸಿಗರು ಅಭ್ಯಾಸ ಮಾಡಲಿ:
ಇನ್ನು ಮೀಸಲು ಹಂಚಿಕೆ ಪ್ರಮಾಣ ಕುರಿತು ಕಾಂಗ್ರೆಸ್ಸಿಗರು ಅಭ್ಯಾಸ ಮಾಡಲಿ. ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಿದರೆ ಇದನ್ನು ಸ್ವಾಗತ ಮಾಡಬೇಕು. ಅವರ ಕೈಯಲ್ಲಿ ಆಗದೆ ಇರೋದನ್ನು ಬೊಮ್ಮಾಯಿ ಅವರರು ಮಾಡಿದಾರೆ. ಅವರಿಂದ ಇದನ್ನು ಕಲ್ಪನೆಯನ್ನೇ ಮಾಡಿಕೊಳ್ಳೋದಕ್ಕೆ ಆಗದೆ ಇರೋದನ್ನು ನಾವು ಮಾಡಿದ್ದೇವೆ ಎಂದರು. ಸದಾಶಿವ ಆಯೋಗ ವರದಿ ಪ್ರಕಾರ ಬಂಜಾರಾ ಸಮುದಾಯದವರಿಗೆ ಜನಸಂಖ್ಯೆ ಪ್ರಕಾರ ಶೇ. 3 ರಷ್ಟು ಮೀಸಲಾತಿ ಸಿಕ್ಕುತ್ತದೆ. ನಾವು ನಾಲ್ಕುವರೆ ಪರ್ಸೆಂಟ್ ಮಾಡಿದಿವಿ. ಯಾವುದೇ ಒಂದು ಸಮಾಜಕ್ಕೆ ಅನ್ಯಾಯ ವಾಗದೆ, ಮೂಲ ಮೀಸಲಾತಿ ಕಿತ್ತುಕೊಳ್ಳದೆ ಹೊಸ ಮೀಸಲಾತಿ ಮಾಡಿದ್ದೇವೆ ಎಂದರು.