ಯಾವುದೇ ವೈರಸ್ ಮನುಷ್ಯನ ಸೋಲಿಸಿಲ್ಲ: ಜನರಿಗೆ ಧೈರ್ಯ ತುಂಬಿದ ಸಚಿವ ಸುಧಾಕರ್..!

By Suvarna News  |  First Published May 9, 2020, 4:13 PM IST

ರಾಜ್ಯವೇ ಕೊರೋನಾ ಭೀತಿಯಲ್ಲಿರುವಾಗ ಸಚಿವ ಸುಧಾಕರ್ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾವ ವೈರಸ್ ಕೂಡಾ ಮನುಷ್ಯನನ್ನು ಸೋಲಿಸಿಲ್ಲ, ಭಯ ಬೇಡ ಎಂದು ಸಾಂತ್ವನ ಹೇಳಿದ್ದಾರೆ.


ದಾವಣಗೆರೆ(ಮೇ 09): ರಾಜ್ಯವೇ ಕೊರೋನಾ ಭೀತಿಯಲ್ಲಿರುವಾಗ ಸಚಿವ ಸುಧಾಕರ್ ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಯಾವ ವೈರಸ್ ಕೂಡಾ ಮನುಷ್ಯನನ್ನು ಸೋಲಿಸಿಲ್ಲ, ಭಯ ಬೇಡ ಎಂದು ಸಾಂತ್ವನ ಹೇಳಿದ್ದಾರೆ.

ದಾವಣಗೆರೆಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ರಾಜ್ಯದಲ್ಲಿ ಲಕ್ಷಕ್ಕೂ ಅಧಿಕ ಕೊರೊನಾ ಸ್ಯಾಂಪಲ್ ಚೆಕ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ. ಈಗಷ್ಟೆ ನನಗೆ ಈ ಬಗ್ಗೆ ಮಾಹಿತಿ ಬಂದಿದೆ. ದಿನಕ್ಕೆ ನಾಲ್ಕರಿಂದ ಐದು ಸಾವಿರ ಜನರ ಪರೀಕ್ಷೆ ಮಾಡಲಾಗುತ್ತಿದೆ ಎಂದಿದ್ದಾರೆ.

Tap to resize

Latest Videos

ರಂಝಾನ್ ರೋಝಾ ಮಾಡೋಕೆ ಬಿಡಿ ಎಂದ ಸೋಂಕಿತರು..!

ಕೊರೊನಾ ಬಗ್ಗೆ ಜನರು ಆತಂಕ, ಭಯ ಬಿಡಬೇಕು. ಬೇರೆ ರೋಗಾಣು ರೀತಿಯಲ್ಲೇ ಈ ರೋಗಾಣು ಕೂಡ. ಯಾವುದೇ ವೈರಸ್ ಮನುಷ್ಯನನ್ನು ಸೋಲಿಸಿಲ್ಲ. ಕೊರೊನಾ ಮಾರಕ ಕಾಯಿಲೆ ಅಂತಾ ಭಯ ಪಡುವುದು ಬೇಡ ಎಂದು ಧೈರ್ಯ ತುಂಬಿದ್ದಾರೆ.

ಸಾರ್ಸ್ ಬಂದಾಗ ಶೇಕಡ 10 ರಷ್ಟಿತ್ತು. ಕೊರೊನಾ ಶೇಕಡಾ 3.1 ಅಷ್ಟೇ ಇರುವುದು. 60 ವರ್ಷ ಮೇಲ್ಪಟ್ಟವರು ಹೆಚ್ಚಾಗಿ ಸಾವನ್ನಪ್ಪುತ್ತಿದ್ದಾರೆ.  ಪಾಸಿಟಿವ್ ಬಂದವರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

click me!