
ರಾಮನಗರ(ಜ.23): ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ಅಪಘಾತವನ್ನುಂಟು ಮಾಡಿ, ದರೋ ಡೆಗೆ ಯತ್ನ ಎಂಬ ವಿಷಯ ಕುರಿತು ಸಾಮಾ ಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಬಗ್ಗೆ ವಿವರಣೆ ನೀಡಿರುವ ಜಿಲ್ಲಾ ಪೊಲೀಸ್ ಇಲಾಖೆ ದರೋಡೆ ಎಂಬುದು ಸುಳ್ಳು ಎಂದು ಸ್ಪಷ್ಟ ಪಡಿಸಿದೆ.
ಜನವರಿ 20ರಂದು ಸಾಮಾಜಿಕ ಜಾಲತಾಣದಲ್ಲಿ ಖಾಸಗಿ ವ್ಯಕ್ತಿಯೊಬ್ಬರು, ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಪ್ರಯಾಣಿಕರು ಎಚ್ಚರ. ದುಷ್ಕರ್ಮಿಯೊಬ್ಬ ಡಿವೈಡರ್ ಬಳಿ ಮರದ ದಿಮ್ಮಿಯನ್ನು ಹಿಡಿದುಕೊ೦ಡು ಅಪಘಾತವನ್ನುಂಟು ಮಾಡಿ ದರೋಡೆ ಮಾಡುವ ಯತ್ನ ಮಾಡಿದ್ದಾರೆ ಎಂದು ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಾಕಿದ್ದಾರೆ.
ಒಂದೇ ವಾರದಲ್ಲಿ 10 ಭಯಾನಕ ಅಪರಾಧ, ಉತ್ತರದಿಂದ ದಕ್ಷಿಣವರೆಗೂ ದರೋಡೆ: ಕರ್ನಾಟಕದಲ್ಲಿ ಏನಾಗ್ತಿದೆ?
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಫ್ಯಾಕ್ಟ್ ಚೆಕ್ ಮಾಡಿರುವ ಪೊಲೀಸ್ ಇಲಾಖೆಗೆ, ಅಂದು ಬೆಂಗಳೂರು ಮೈಸೂರು ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಓರ್ವ ಗಾರೆ ಕೆಲಸ ಮಾಡುವ ವ್ಯಕ್ತಿ ಹೆಜ್ಜಾಲ ಗ್ರಾಮದ ಕಡೆಗೆ ಹೋಗಲು, ತನ್ನೊಂದಿಗೆ ಸಾರ್ವೆ ಮರದ ಬೊಂಬನ್ನು ಹೊತ್ತು, ಹೆದ್ದಾರಿಯ ಸರ್ವಿಸ್ ರಸ್ತೆಯ ಮೂಲಕ ಬಂದು ನಂತರ ಸುಮಾರು 1 ನಿಮಿಷಗಳ ಮಧ್ಯೆ ಡಿವೈಡರ್ ನಲ್ಲಿ ನಿಂತು ಹೆದ್ದಾರಿಯಲ್ಲಿ ಕಾರುಗಳು ಹೋದ ನಂತರ ಹೆದ್ದಾರಿಯನ್ನು ದಾಟಿ ಸರ್ವಿಸ್ ರಸ್ತೆ ಮೂಲಕ ಹೋಗಿರುವುದು ಸಿಸಿ ಕ್ಯಾಮೆರಾ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಆ ವ್ಯಕ್ತಿ ತನ್ನ ಕಾರ್ಯ ನಿಮಿತ್ತ ಸಾರ್ವೆ ಮರದ ಬೊಂಬುವಿನೊಂದಿಗೆ ರಸ್ತೆಯನ್ನು ದಾಟುತ್ತಿದ್ದು, ಯಾವುದೇ ಅಪರಾಧ ಮಾಡುವ ಉದ್ದೇಶವನ್ನು ಹೊಂದಿರುವುದಿಲ್ಲವೆಂದು ಸ್ಥಳ ಪರಿಶೀಲನೆ ಹಾಗೂ ಸಿಸಿ ಕ್ಯಾಮೆರಾ ದೃಶ್ಯಾವಳಿಗಳ ತನಿಖೆಯಲ್ಲಿ ಕಂಡು ಬಂದಿದೆ.
ಸಾರ್ವಜನಿಕರು ಇಂತಹ ಯಾವುದೇ ಗೊಂದಲ ಮತ್ತು ಆಂತಕ ವಿಲ್ಲದೆ, ಹೆದ್ದಾರಿಯಲ್ಲಿ ಪ್ರಯಾಣಿಸಬಹು ದಾಗಿದೆ. ಸಾವಜನಿಕರ ಸುಗಮ ಪ್ರಯಾಣಕ್ಕೆ ಅನುಕೂಲವಾಗುವಂತೆ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಹೆದ್ದಾರಿ ಗಸ್ತು ವಾಹನಗಳನ್ನು ನಿಯೋಜಿಸಲಾಗಿವೆ. ಈ ವಾಹನಗಳು ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರ ನೆರವಿಗೆ ಧಾವಿಸಲಿದ್ದಾರೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.