ಹಸುವಿನ ಕೆಚ್ಚಲು ಕತ್ತರಿಸುವ ರಾಕ್ಷಸರ ನಡುವೆ, ಕರುವಿನ ಮೊದಲ ವರ್ಷದ ಹುಟ್ಟುಹಬ್ಬ ಮಾಡಿದ ಬಾಗಲಕೋಟೆಯ ರೈತ!

Published : Jan 22, 2025, 09:56 PM IST
ಹಸುವಿನ ಕೆಚ್ಚಲು ಕತ್ತರಿಸುವ ರಾಕ್ಷಸರ ನಡುವೆ, ಕರುವಿನ ಮೊದಲ ವರ್ಷದ ಹುಟ್ಟುಹಬ್ಬ ಮಾಡಿದ ಬಾಗಲಕೋಟೆಯ ರೈತ!

ಸಾರಾಂಶ

ಬಾಗಲಕೋಟೆಯ ರೈತನೊಬ್ಬ ತನ್ನ ಒಂದು ವರ್ಷದ ಕರುವಿಗೆ ಅದ್ದೂರಿಯಾಗಿ ಜನ್ಮದಿನ ಆಚರಿಸಿದ್ದಾನೆ. ಕಳೆದ ವರ್ಷ ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ದಿನದಂದೇ ಹುಟ್ಟಿದ್ದ ಕರುವಿನ ಜನ್ಮದಿನವನ್ನು ಕೇಕ್ ಕತ್ತರಿಸಿ ಆಚರಿಸಲಾಗಿದೆ.

ಬಾಗಲಕೋಟೆ (ಜ.22): ಗೋವಿನ ವಿಚಾರವಾಗಿ ರಾಜ್ಯದಲ್ಲಿ ನಡೆದ ಇತ್ತೀಚಿನ ಎರಡು ಘಟನೆಗಳು ಬೆಚ್ಚಿಬೀಳಿಸಿದ್ದವು. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಸಯ್ಯದ್‌ ನಸ್ರು ಎಂಬಾತ ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ರಾಜಕೀಯವಾಗಿ ದೊಡ್ಡ ತಿರುವು ಪಡೆದುಕೊಂಡಿತ್ತು. ಅದಾದ ಕೆಲವೇ ದಿನಗಳಲ್ಲಿ ಹೊನ್ನಾವರದಲ್ಲಿ ಗರ್ಭಿಣಿ ಹಸುವಿನ ಕಾಲು ಹಾಗೂ ತಲೆಯನ್ನು ಕಡಿದಿದ್ದಲ್ಲದೆ, ಹೊಟ್ಟೆಯಲ್ಲಿದ್ದ ಕರುವನ್ನು ಎಸೆದು ಬರೀ ದೇಹವನ್ನು ಮಾತ್ರವೇ ದುರುಳರು ಎತ್ತಿಕೊಂಡು ಹೋಗಿದ್ದರು. ಈ ಪ್ರಕರಣದಲ್ಲಿ ಉತ್ತರ ಕನ್ನಡದ ಪೊಲೀಸ್‌ ಇನ್ನೂ ಜಾಣ ನಿದ್ರೆಯಲ್ಲಿದ್ದು ಆರೋಪಿಗಳನ್ನು ಪತ್ತೆ ಮಾಡುವ ಯಾವ ಸುಳಿವೂ ಕಾಣುತ್ತಿಲ್ಲ. ರಾಜ್ಯದಲ್ಲಿ ಮೂಕಪ್ರಾಣಿಗಳಾದ ಗೋವುಗಳ ಮೇಲೆ ರಾಕ್ಷಸೀಯ ಕೃತ್ಯಗಳು ವರದಿ ಆಗತ್ತಿರುವ ನಡುವೆ ಬಾಗಲಕೋಟೆಯ ರೈತನೊಬ್ಬ ತನ್ನ ಒಂದು ವರ್ಷದ ಕರುವಿಗೆ ಅದ್ದೂರಿಯಾಗಿ ಜನ್ಮದಿನ ಆಚರಣೆ ಮಾಡಿದ್ದಾನೆ.

ಕರುವಿನ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ರೈತನ ಕುಟುಂಬ ಆಚರಿಸಿದೆ. ಮಲ್ಲಯ್ಯ ಎನ್ನುವವರಿಗೆ ಸೇರಿದ ಕರುವಿನ ಜನ್ಮದಿನವನ್ನು ಆಚರಣೆ ಮಾಡಿದೆ. ಕಳೆದ ವರ್ಷ ಮಲ್ಲಯ್ಯ ಅವರ ಗೋವು ಕರುವಿಗೆ ಜನ್ಮ ನೀಡಿತ್ತು. ಈ ವರ್ಷ ಕೇಕ್ ತಂದು ಮಲ್ಲಯ್ಯ ಹಾಗೂ ಅವರ ಕುಟುಂಬದವರು ಕರುವಿನ ಜನ್ಮದಿನ ಆಚರಣೆ ಮಾಡಿದ್ದಾರೆ. ಕಳೆದ ವರ್ಷ ಅಯೋಧ್ಯೆಯಲ್ಲಿ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ ದಿನದಂದೇ ಈ ಕರು ಹುಟ್ಟಿತ್ತು. ಇಂದು ಅದೇ ದಿನ ಕರುವಿನ ಜನ್ಮದಿನ ಆಚರಣೆ ಮಾಡಿದ್ದೇವೆ ಎಂದು ಕುಟುಂಬದವರು ಹೇಳಿದ್ದಾರೆ.

ಗರ್ಭಿಣಿ ಹಸುವಿನ ತಲೆ, ಕಾಲು ಕಡಿದ ಕೇಸ್‌; ಸಿದ್ದರಾಮಯ್ಯ, ಜಿ.ಪರಮೇಶ್ವರ್‌ ಮಾನಸಿಕತೆ ಚೆಕ್‌ ಮಾಡಿಕೊಳ್ಳಲಿ: ಶಾಸಕನ ಆಕ್ರೋಶ!

ಇನ್ನು ಕರುವಿನ ಬರ್ತ್‌ಡೇ ಸೆಲ್ರಬೇಷನ್‌ನಲ್ಲಿ ಇಡೀ ಗ್ರಾಮದ ಜನರು ಕೂಡ ಭಾಗಿಯಾಗಿದ್ದರು. ಗೋನಾಳ ಎಸ್.ಟಿ ಗ್ರಾಮದಲ್ಲಿ ಈ ಸಂಭ್ರಮ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಗ್ರಾಮದಲ್ಲಿ ಈ ಆಚರಣೆ ಮಾಡಲಾಗಿದೆ.

ಗರ್ಭ ಧರಿಸಿದ ಹಸುವನ್ನು ಕಡಿದ ದುರುಳರು; ಕರು, ಕತ್ತು, ಕಾಲು ಬಿಟ್ಟು ದೇಹ ಕದ್ದರು!

PREV
Read more Articles on
click me!

Recommended Stories

ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್
ಸ್ಕೂಲ್ ಬಸ್ ಹರಿದು 8 ವರ್ಷದ ಬಾಲಕಿ ಸಾವು; ಚಾಲಕನ ನಿರ್ಲಕ್ಷ್ಯಕ್ಕೆ ಅಮಾಯಕ ಜೀವ ಬಲಿ