ಹೈದರಾಬಾದ್ ಎನ್‌ಕೌಂಟರ್ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ನಮ್ಮ ಕಾನೂನಿನಲ್ಲೆ ಕೆಲ ತಿದ್ದುಪಡಿಯಾಗಬೇಕು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ತುಮಕೂರು(ಡಿ.07): ಅತ್ಯಾಚಾರಿಗಳಿಗೆ ತಕ್ಷಣ ಶಿಕ್ಷೆಯಾಗುವ ಸ್ಥಿತಿಯನ್ನು ತರದೇ ಹೋದರೆ ಕಷ್ಟವಾಗಲಿದೆ. ಹೀಗಾಗಿ ಕೆಲ ಕಾನೂನು ತಿದ್ದುಪಡಿ ಮಾಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಶಿಪಾರಸ್ಸು ಮಾಡಲಾಗುವುದು ಎಂದು ಕಾನೂನು ಸಚಿವ ಮಾಧುಸ್ವಾಮಿ ತಿಳಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೈದರಾಬಾದ್ ಎನ್‌ಕೌಂಟರ್ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ. ಆದರೆ, ನಮ್ಮ ಕಾನೂನಿನಲ್ಲೆ ಕೆಲ ತಿದ್ದುಪಡಿಯಾಗಬೇಕು ಎಂದಿದ್ದಾರೆ.
undefined
'ಬಿಜೆಪಿ ಸರ್ಕಾರ ಉಳಿಯುತ್ತೆ': ಭವಿಷ್ಯ ನುಡಿದ JDS ಶಾಸಕ
ಐಪಿಸಿ ಕಾಯಿದೆಯನ್ನು ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕಿದ್ದು, ಇದು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ ಕಾನೂನು ಸಚಿವರು, ಎರಡು-ಮೂರು ಕಾನೂನು ವಿಷಯದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಲಿದ್ದೇನೆ ಎಂದು ತಿಳಿಸಿದರು.
ಆರೋಪಿಗಳು ಖುಷಿಯಾಗಿ ಹೋಗುತ್ತಾರೆ:
1860ರಲ್ಲಿ ಆಗಿರುವಂತಹ ಐಪಿಸಿ, ಸಿಆರ್‌ಪಿಸಿ ಕಾಯಿದೆಯಲ್ಲಿ ಏನೂ ಸತ್ವ ಇಲ್ಲ. ಹೀಗಾಗಿ ಆ ಕಾಯಿದೆಯ ತಿದ್ದುಪಡಿ ಆಗಬೇಕಾಗಿದೆ ಎಂದಿದ್ದಾರೆ.
ಹೆಣ್ಣುಮಕ್ಕಳ ಮೇಲೆ ದೌರ್ಜನ್ಯ ಮಾಡಿದರೆ 1 ಸಾವಿರ ರು. ದಂಡ ಅಂತ ಇದೆ. 1 ಸಾವಿರ ರು. ದಂಡವನ್ನು ಆರೋಪಿಗಳು ಖುಷಿಯಾಗಿ ಕೊಟ್ಟು ಹೋಗುತ್ತಾರೆ. ಈ ಬಗ್ಗೆಯೂ ಕಾನೂನು ಬಿಗಿಯಾಗಬೇಕಿದೆ. ಇದರ ಕುರಿತು ನಾವು ಸೆಮಿನಾರ್‌ನಲ್ಲಿ ಚರ್ಚೆ ಮಾಡಿ ಕಾನೂನು ತಿದ್ದುಪಡಿ ಮಾಡುವಂತೆ ಸಂಸತ್ತಿಗೆ ಸಲಹೆ ನೀಡುತ್ತೇವೆ ಎಂದಿದ್ದಾರೆ.
'ಬಿಜೆಪಿಗೆ ಬೆಂಬಲ ನೀಡುವ ಸುಳಿವು ಬಿಟ್ಟು ಕೊಟ್ಟ ಜೆಡಿಎಸ್ ನಾಯಕ'
ಹೈದ್ರಾಬಾದ್‌ನಂತಹ ಘಟನೆ ನಡೆಯಲು ರಾಜ್ಯದಲ್ಲಿ ಆಗಲು ಬಿಡುವುದಿಲ್ಲ ಎಂದ ಮಾಧುಸ್ವಾಮಿ, ತಾವು ಹಾಗೂ ಗೃಹಸಚಿವರು ಸದಾ ಸಂಪರ್ಕದಲ್ಲಿ ಇದ್ದು, ಮುಖ್ಯವಾಗಿ ಬೆಂಗಳೂರು ನಗರವನ್ನು ಮಾನಿಟರಿಂಗ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಹೈದರಾಬಾದ್ ಎನ್‌ಕೌಂಟರ್ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಆದರೆ, ನಮ್ಮ ಕಾನೂನಿನಲ್ಲೇ ಕೆಲ ತಿದ್ದುಪಡಿ ಮಾಡುವಂತೆ ರಾಜ್ಯದಿಂದ ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ.
ಬರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸಲ್ಲ : ಆನಂದ್ ಸಿಂಗ್