Koppala: ಹನುಮನ ಜನ್ಮಸ್ಥಳದಲ್ಲಿ ಹನುಮ ಮಾಲೆಗಳಿಗಿಲ್ಲ ಗೌರವ!

By Suvarna NewsFirst Published Dec 31, 2022, 6:15 PM IST
Highlights

 ಹನುಮನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದ ಸ್ಥಳ ಅಂಜನಾದ್ರಿ ಪರ್ವತ. ಆದರೆ ಆ ಸ್ಥಳದಲ್ಲಿ ಹನುಮ‌ ಮಾಲೆಗಳಿಗೆ ಗೌರವ ಇಲ್ಲದಂತಾಗಿದೆ.‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎಲ್ಲೆಂದರಲ್ಲಿ ಹನುಮ‌ಮಾಲೆಗಳು ಬಿದ್ದಿವೆ.

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಡಿ.31): ಅದು ಹನುಮನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದ ಸ್ಥಳ. ಆದರೆ ಆ ಸ್ಥಳದಲ್ಲಿ ಹನುಮ‌ ಮಾಲೆಗಳಿಗೆ ಗೌರವ ಇಲ್ಲದಂತಾಗಿದೆ.‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಎಲ್ಲೆಂದರಲ್ಲಿ ಹನುಮ‌ಮಾಲೆಗಳು ಬಿದ್ದಿವೆ. ಅಂಜನಾದ್ರಿ ಪರ್ವತ ಯಾರಿಗೆ ತಾನೇ ಗೋತ್ತಿಲ್ಲ‌ ಹೇಳಿ.‌ ಆಂಜನೇಯನ ಎಂದ ತಕ್ಷಣವೇ ನಮಗೆ ನೆನಪಾಗುವುದು ಅಂಜನಾದ್ರಿ ಪರ್ವತ. ಆಂಜನೇಯನ ಜನ್ಮಸ್ಥಳ ಎಂದು ಪ್ರಸಿದ್ಧಿ ಪಡೆದಿರುವ ಈ ಸ್ಥಳ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿದೆ. ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಅಂಜನಾದ್ರಿಯಲ್ಲಿ ಇದೀಗ ಹನುಮ‌ ಮಾಲೆಗಳಿಗೆ ಗೌರವ ಇಲ್ಲದಂತಾಗಿದೆ.‌

ಹನುಮಮಾಲಾ ವಿಸರ್ಜನೆ ಬಳಿಕ‌ ಅಲ್ಲಿಯೇ ಉಳಿದ ಮಾಲೆಗಳು:
ಇನ್ನು‌ ಅಂಜನಾದ್ರಿ ಪರ್ವತದಲ್ಲಿ ಡಿಸೆಂಬರ್ 5 ರಂದು ಹನುಮಮಾಲಾ ವಿಸರ್ಜನೆ ಕಾರ್ಯಕ್ರಮ ಜರುಗಿತ್ತು.‌ಈ ವೇಳೆ ನಾಡಿನ‌ ಮೂಲೆ‌ ಮೂಲೆಯಿಂದ‌ ಲಕ್ಷಾಂತರ ಹನುಮ ಮಾಲಾಧಾರಿಗಳು ಅಂಜನಾದ್ರಿ ಪರ್ವತಕ್ಕೆ ಆಗಮಿಸಿದ್ದರು.‌ಈ ವೇಳೆ ಅವರೆಲ್ಲ ಆಂಜನೇಯನಿಗೆ ಪೂಜೆ ಸಲ್ಲಿಸಿದ ಬಳಕ ಗುರುಸ್ವಾಮಿಗಳಿಂದ ಹನುಮ ಮಾಲೆಯನ್ನು ಅಂಜನಾದ್ರಿ ಪರ್ವತದಲ್ಲಿ ವಿಸರ್ಜನೆ ಮಾಡಿದರು.‌ಬಳಿಕ‌ ಮಾಲೆಗಳನ್ನು ಅಂಜನಾದ್ರಿ ಬೆಟ್ಟದ ಮೇಲಿನ‌ ಮರವೊಂದಕ್ಕೆ ನೇತು ಹಾಕಿ ಹೊಗಿದ್ದಾರೆ. ಅಂದಿನಿಂದ‌ ಆ ಮಾಲೆಗಳು ಅಂಜನಾದ್ರಿ ಪರ್ವತದಲ್ಲಿಯೇ ಉಳಿದಿವೆ.

ಅಧಿಕಾರಿಗಳ ನಿರ್ಲಕ್ಷದಿಂದ‌ ಗೌರವ ಕಳೆದುಕೊಂಡ ಮಾಲೆಗಳು:
ಇನ್ನು‌ ಹನುಮಮಾಲಾಧಾರಿಗಳು ಮಾಲೆಗಳನ್ನು ವಿಸರ್ಜನೆ ಮಾಡಿದ ಬಳಿಕ‌ ಮಾಲೆಗಳನ್ನು ಧಾರ್ಮಿಕ‌ ದತ್ತಿ ಇಲಾಖೆ ಅಧಿಕಾರಿಗಳು ನದಿಯಲ್ಲಾಗಲಿ ಅಥವಾ ಬೇರೆ ಸ್ಥಳಗಳಲ್ಲಿ‌ ವಿಸರ್ಜನೆ ಮಾಡಬೇಕಿತ್ತು.‌ಆದರೆ ಈಗಾಗಲೇ ಹನುಮ‌ ಮಾಲೆ ವಿಸರ್ಜನೆ ಆಗಿ ಒಂದು ತಿಂಗಳು ಕಳೆದಿದೆ.‌ ಇಷ್ಟಾದರೂ ಸಹ ಅಧಿಕಾರಿಗಳು ಹನುಮ‌ ಮಾಲೆಗಳನ್ನು ಬೇರೆ ಕಡೆ ಸಾಗಿಸುವ ಕೆಲಸ‌ ಮಾಡಿಲ್ಲ.‌ ಇದರಿಂದಾಗಿ ಹನುಮ‌ ಮಾಲೆಗಳು ಗೌರವ ಇಲ್ಲದಂತಾಗಿದೆ.

ಅಂಜನಾದ್ರಿ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು?

ಹನುಮ‌‌ ಮಾಲೆಗಳನ್ನು ತುಳಿತುತ್ತಾ ನಡೆದಾಡುತ್ತಿರುವ ಭಕ್ತರು:
ಇನ್ನು‌ ಹನುಮ‌ ಮಾಲೆಗಳನ್ನು ಬೇರೆಡೆ ಸಾಗಿಸದ ಹಿನ್ನಲೆಯಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಎಲ್ಲೆಂದರಲ್ಲಿ ಹನುಮ‌‌ ಮಾಲೆಗಳು ಬಿದ್ದಿವೆ. ಇನ್ನು ಪ್ರತಿನಿತ್ಯ ಅಂಜನಾದ್ರಿ ಪರ್ವತಕ್ಕೆ ಸಾವಿರಾರು ಸಂಖ್ಯೆಯ ಭಕ್ತರು,ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ.‌ಇದರಿಂದಾಗಿ ಭಕ್ತರು ಮಾಲೆಗಳನ್ನು ತುಳಿದಾಡುತ್ತಾ ಅಡ್ಡಾಡುತ್ತಿದ್ದಾರೆ.ಜೊತೆಗೆ ವಿದ್ಯಾರ್ಥಿಗಳು ಮಾಲೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

Koppal News: ಅಂಜನಾದ್ರಿ ಅಭಿವೃದ್ಧಿ ಕಾರ್ಯ ಶೀಘ್ರ ಕೈಗೊಳ್ಳಿ: ಸಚಿವ ಆನಂದ್ ಸಿಂಗ್

ಇನ್ನು ಹನುಮ‌ ಮಾಲಾಧಾರಿಗಳು ಶ್ರದ್ಧಾ ಭಕ್ತಿಯಿಂದ ಹನುಮ‌ಮಾಲೆ ಧರಿಸಿ ಬಳಿಕ‌ ವಿಸರ್ಜನೆ  ಮಾಡಿರುತ್ತಾರೆ. ಆದರೆ ಅಂಜನಾದ್ರಿ ಪರ್ವತದಲ್ಲಿ ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಆ ಮಾಲೆಗಳಿಗೆ ಗೌರವ ಇಲ್ಲದಂತಾಗಿದೆ. ಇನ್ನಾದರೂ ಅಧಿಕಾರಿಗಳು ಎಚ್ಚೇತ್ತು ಕೂಡಲೇ ಎಲ್ಲೆಂದರಲ್ಲಿ ಬಿದ್ದಿರುವ ಹನುಮ‌ ಮಾಲೆಗಳನ್ನು ನದಿಯಲ್ಲಿ ವಿಸರ್ಜಿಸುವ ಕೆಲಸ‌ ಮಾಡಬೇಕಿದೆ..

click me!