ಹಿಂದು ಸಂಪ್ರದಾಯವನ್ನು ಯಾರು ಮರೆಯಬಾರದು: ಯದುವೀರ್ ಒಡೆಯರ್

Published : Jun 14, 2023, 10:03 PM IST
ಹಿಂದು ಸಂಪ್ರದಾಯವನ್ನು ಯಾರು ಮರೆಯಬಾರದು: ಯದುವೀರ್ ಒಡೆಯರ್

ಸಾರಾಂಶ

ಹಿಂದು ಸಂಪ್ರದಾಯವನ್ನು ಯಾರು ಯಾವತ್ತೂ ಮರೆಯಬಾರದು. ಅದರ ಪಾಲನೆ ತುಂಬಾ ಅಗತ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು.   

ಶ್ರೀರಂಗಪಟ್ಟಣ (ಜೂ.14): ಹಿಂದು ಸಂಪ್ರದಾಯವನ್ನು ಯಾರು ಯಾವತ್ತೂ ಮರೆಯಬಾರದು. ಅದರ ಪಾಲನೆ ತುಂಬಾ ಅಗತ್ಯ ಎಂದು ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದರು. ತಾಲೂಕಿನ ಬೆಳಗೊಳ ಬಳಿ ವಿಶ್ವ ಮಂಗಳ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ದೀರ್ಘಸತ್ರ ಮಹಾ ಯಾಗದ ವಿಶೇಷ ಪೂರ್ಣಾಹುತಿ ಪ್ರಯುಕ್ತ ಆಗಮಿಸಿ ಸಂಸ್ಕೃತ ಶಾಲೆಯ ಆಗಮಿಕ ವಿದ್ಯಾರ್ಥಿಗಳ ಕುರಿತು ಮಾತನಾಡಿದರು.

400 ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಇರುವ ಮೈಸೂರು ಸಂಸ್ಥಾನದ ರಾಜರು ವಿಜಯನಗರ ಆಳ್ವಿಕೆ ಕಾಲದಿಂದಲೂ ರಾಜ ಒಡೆಯರ್‌ ನಡೆಸಿಕೊಂಡು ಬಂದ ಪಾರಂಪರಿಕ ಶ್ರೀವೈಷ್ಣವ ಸಂಪ್ರದಾಯಗಳು ವಿಶ್ವದಲ್ಲಿ ಹೆಸರಾಗಿದೆ. ಅದರಲ್ಲಿ ಧಾರ್ಮಿಕವಾಗಿ ಯೋಗ ಪರಂಪರೆಯು ಸಹ ಸೇರಿದೆ ಎಂದರು. ನೂರಾರು ವರ್ಷಗಳಿಂದ ಮೈಸೂರು ಸಂಸ್ಥಾನದಲ್ಲಿ ಧಾರ್ಮಿಕ ಪರಂಪರೆ ಸಂಪ್ರದಾಯಗಳ ಜೊತೆ ಬೆಳೆದು ಬಂದಿದೆ. ನಾವು ಹಿಂದು ಸಂಪ್ರದಾಯವನ್ನು ಯಾವತ್ತು ಮರೆಯಬಾರದು. ಇದರ ಪಾಲನೆ ಅಗತ್ಯ. ಹಿರಿಯ ಕಲಿಸಿದ್ದನ್ನು ಮರೆತು ಇಂದಿನ ಪಾಶ್ಚಿಮಾತ್ಯ ಸಂಸ್ಕೃತಿಗೆ ಕೆಲವರು ಮಾರು ಹೋಗುತ್ತಿದ್ದಾರೆ. ಸರಿಯಾದ ಬೆಳವಣಿಗೆಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನೇಕಾರ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಒತ್ತು: ಶಾಸಕ ಧೀರಜ್‌ ಮುನಿರಾಜ್‌

ಪ್ರತಿಯೊಬ್ಬರು ಯೋಗದ ಬಗ್ಗೆ ಆಸಕ್ತಿ ಬೆಳಸಬೇಕು. ಇದರಿಂದ ನಮ್ಮ ಆರೋಗ್ಯಕ್ಕೆ ತುಂಬಾ ಉಪಯುಕ್ತ. ಯೋಗ ನಮ್ಮ ಹಿಂದೂ ಧರ್ಮದ ಭಾಗ. ಪರಕಾಲ ಮಠದ ವತಿಯಿಂದ ನಡೆಯುವ ಎಲ್ಲ ಪೂಜಾ ಕೈಂಕರ್ಯಗಳಿಗೆ ನಾವು ಬದ್ಧರಾಗಿದ್ದೇವೆ ಎಂದರು. ಮುಮ್ಮಡಿ ಕೃಷ್ಣರಾಜ ಒಡೆಯರ್‌ ಯೋಗಕ್ಕೆ ಅಂದಿನ ಕಾಲದಲ್ಲಿ ಮಹತ್ವ ತಿಳಿಸಿ ಧಾರ್ಮಿಕ ಕ್ಷೇತ್ರದಲ್ಲಿ ದೇವಾಲಯ ನಿರ್ಮಾಣದ ಪರಂಪರೆ ಅಭಿವೃದ್ಧಿ ಜೊತೆಗೆ ಯೋಗ ಶಿಕ್ಷಣವನ್ನು ಸ್ಥಾಪಿಸಿದರು. ರಾಜ ಮನೆತನಕ್ಕೆ ಪರಕಾಲ ಸ್ವಾಮೀಜಿ ಹಾಗೂ ಶೃಂಗೇರಿ ಶಂಕರಾಚಾರ್ಯರ ಆಶೀರ್ವಾದ ಇರುವುದರಿಂದ ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕೂಡ ಈ ಭಾಗದಲ್ಲಿ ಹಲವು ಜನಪಯೋಗಿ ಕೆಲಸ ಮಾಡಿದರು ಎಂದರು.

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ನೀರಾವರಿ ಯೋಜನೆಗಳು, ಶಿಕ್ಷಣ, ಜನರಿಗೆ ಉದ್ಯೋಗ ನೀಡುವ ಕಾರ್ಖಾನೆಗಳ ಮೂಲಕ ತಾಂತ್ರಿಕತೆ ಬೆಳೆಸಿಕೊಂಡು ಹಲವು ಯೋಜನೆಗಳನ್ನು ಸ್ಥಾಪಿಸಿ ಇಲ್ಲಿನ ಜನರ ಕಷ್ಟಗಳಿಗೆ ಸ್ಪಂದನೆ ಮಾಡಿರುವುದು ಎಲ್ಲರಿಗೂ ತಿಳಿದಿದೆ. ಅದರಂತೆ ನಾವು ಕೂಡ ಅವರ ಮಾರ್ಗದರ್ಶನದ ಅನುಭವ ಪಡೆಯುತ್ತಿದ್ದೇವೆ ಎಂದರು. ನಂತರ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಮುಖ್ಯಸ್ಥರು ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ಸನ್ಮಾನಿಸಿ ಗೌರವಿಸಿದರು. ವಿಶ್ವಮಂಗಳ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯ ಅಧ್ಯಕ್ಷ ವೀರರಾಘವಸ್ವಾಮೀಜಿ, ದೇವಾಲಯದ ನಿರ್ದೇಶಕ ಲಕ್ಷ್ಮಿ ನಾರಾಯಣ್‌, ನಟ ಸುಚೇಂದ್ರ ಪ್ರಸಾದ್‌, ವ್ಯವಸ್ಥಾಪಕ ಸಂತೊಷ್‌ ಆಚಾರ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Read more Articles on
click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ಗಡುವು ಮೀರಿಸಿದರೆ ಮುಂದೆ ಕೆಲಸವಿಲ್ಲ: ಮೆಟ್ರೋ ಗುತ್ತಿಗೆದಾರರಿಗೆ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ