Chikkaballapur: ಚಿಂತಾಮಣಿ ಸ್ಟೇಡಿಯಂಗೆ ಸೌಲಭ್ಯ ಕಲ್ಪಿಸಲು ಸಚಿವ ಸುಧಾಕರ್‌ ಸೂಚನೆ

By Kannadaprabha NewsFirst Published Jun 14, 2023, 9:43 PM IST
Highlights

ಇಲ್ಲಿಯ ಝಾನ್ಸಿ ರಾಣಿ ಲಕ್ಷ್ಮೇಬಾಯಿ ಕ್ರೀಡಾಂಗಣದ ಸ್ವಚ್ಛತೆ ಕಾಪಾಡುವ ಮೂಲಕ ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಸೂಚಿಸಿದರು. 

ಚಿಂತಾಮಣಿ (ಜೂ.14): ಇಲ್ಲಿಯ ಝಾನ್ಸಿ ರಾಣಿ ಲಕ್ಷ್ಮೇಬಾಯಿ ಕ್ರೀಡಾಂಗಣದ ಸ್ವಚ್ಛತೆ ಕಾಪಾಡುವ ಮೂಲಕ ಕ್ರೀಡಾಪಟುಗಳಿಗೆ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಲಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್‌ ಸೂಚಿಸಿದರು. ಕ್ರೀಡಾಂಣಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಚಿವರು, ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ ಸ್ಟೇಡಿಯಂ ಅಭಿವೃದ್ಧಿಪಡಿಸಲಾಗಿತ್ತು. ಕ್ರೀಡಾಪಟುಗಳಿಗೆ, ವಾಯುವಿಹಾರ ಮಾಡುವವರಿಗೆ ಅನುಕೂಲವಾಗಬೇಕೆಂದು ಮುಂದಾಲೋಚನೆಯೊಂದಿಗೆ ಅಭಿವೃದ್ಧಿಪಡಿಸಿದ್ದೇ. ಆದರೆ ಕಳೆದ ಹತ್ತು ವರ್ಷಗಳು ಬೇರೆಯವರ ಅಧಿಕಾರದಲ್ಲಿದ್ದಾಗ ಈ ಕ್ರೀಡಾಂಗಣ ಅಭಿವೃದ್ಧಿಯನ್ನೇ ಕಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ಟೇಡಿಯಂನಲ್ಲಿ ಸೌಲಭ್ಯಗಳ ಕೊರತೆ: ಕ್ರೀಡಾಂಗಣದಲ್ಲಿ ಶೌಚಾಲಯ ಸೌಲಭ್ಯ ಇಲ್ಲ. ವ್ಯಾಯಾಮ ಮಾಡುವವರಿಗೆ ಪರಿಕರಗಳು ಇಲ್ಲ ಮತ್ತು ಮಹಿಳೆಯರು ವ್ಯಾಯಮ ಮಾಡುವ ಕಡೆ ಪುರುಷರೆ ವ್ಯಾಯಾಮ ಮಾಡುತ್ತಿದ್ದಾರೆ. ಆದ್ದರಿಂದ ಮಹಿಳೆಯರಿಗೆ ತೊಂದರೆಯಾಗುತ್ತಿದೆ ಎಂಬ ದೂರುಗಳು ಬಂದಿವೆ. ಸ್ಟೇಡಿಯಂನ ಅಭಿವೃದ್ಧಿಗೆ ಬಹಳಷ್ಟುಅವಕಾಶಗಳು ಇದ್ದರೂ ಕೂಡ ಅವುಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ. ಕಳೆದು ಹೋದ ದಿನಗಳನ್ನು ಮರೆತು ಯುವಜನ ಸೇವಾ ಇಲಾಖೆಯ ಸ್ಟೇಡಿಯಂ ಅಭಿವೃದ್ಧಿಗೆ ಮುಂದಾಗುವಂತೆ ಸೂಚಿಸಿದರು.

ಜೆಡಿಎಸ್‌-ಬಿಜೆಪಿ ಮೈತ್ರಿ ಕೇವಲ ವದಂತಿ: ಎಚ್‌.ಡಿ.ಕುಮಾರಸ್ವಾಮಿ

ಕ್ರೀಡಾಂಗಣದ ಸುತ್ತಲೂ ನಿರ್ಮಿಸಿರುವ ಬಹಳಷ್ಟು ಮಳಿಗೆಗಳ ಬಾಡಿಗೆ ಹಣ ವಸೂಲಿ ಆಗಿಲ್ಲ. ಹರಾಜು ಪ್ರಕ್ರಿಯೆ ನಡೆದು ಬಹಳಷ್ಟುವರ್ಷಗಳೇ ಕಳೆದರೂ ಎಷ್ಟೋ ಅಂಗಡಿ ಮಾಲೀಕರು ಹರಾಜು ಪ್ರಕ್ರಿಯೆಯಲ್ಲಿ ಹರಾಜು ಪಡೆದ ಮೊತ್ತದ ಬಹುಪಾಲನ್ನು ಉಳಿಸಿಕೊಂಡಿದ್ದಾರೆ. ಬಹಳಷ್ಟುಮಳಿಗೆಗಳು ಶ್ರೀಮಂತರ ಪಾಲಾಗಿದ್ದು, ವ್ಯಾಪಾರದಿಂದಲೇ ಬದುಕು ಸಾಗಿಸುವ ಬಡವರಿಗೆ ಅಂಗಡಿ ಲಭ್ಯವಾಗಿಲ್ಲ. ಹರಾಜು ಪ್ರಕ್ರಿಯೆಯಲ್ಲಿ ಶ್ರೀಮಂತರು ಮಳಿಗೆಗಳನ್ನು ಪಡೆದು ಬೇರೆಯವರಿಗೆ ದುಬಾರಿ ಬಾಡಿಗೆಗೆ ನೀಡಿದ್ದಾರೆಂದು ಸಚಿವರು ಟೀಕಿಸಿದರು.

ಬೇರೆಯವರಿಗೆ ಬಾಡಿಗೆ: ಬಹಳಷ್ಟು ಮಳಿಗೆಗಳ ಮಾಲೀಕರು ಬಾಡಿಗೆಯ ಬಾಕಿಯನ್ನು ಪಾವತಿಸದೆ ಇರುವುದು ಮತ್ತು ಮುಂಗಡದ ಹಣವನ್ನು ಕೂಡ ಪಾವತಿಸದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ಇದು ದುರಾದೃಷ್ಟಕರ ಬೆಳವಣಿಗೆ. ರಾಜ್ಯದಲ್ಲಿ ಎಲ್ಲೂ ಕೂಡ ವಾಣಿಜ್ಯ ಮಳಿಗೆಗಳನ್ನು ಹರಾಜಿನಲ್ಲಿ ಪಡೆದು ಬೇರೆಯವರಿಗೆ ಬಾಡಿಗೆ ನೀಡಿರುವುದು ಚಿಂತಾಮಣಿಯಲ್ಲಿ ಬಿಟ್ಟರೆ ಬೇರೆ ಎಲ್ಲೂ ಇಲ್ಲ. ಸ್ಟೇಡಿಯಂ ಮಳಿಗೆಗಳ ಮಾಲೀಕರುಗಳು ಸುಮಾರು 1.5 ಕೋಟಿಯಷ್ಟುಬಾಡಿಗೆ ಹಣವನ್ನು ಪಾವತಿಸಿಲ್ಲ ಆದ್ದರಿಂದ ಕೂಡಲೇ ಪಾವತಿಸಿ ಸ್ಟೇಡಿಯಂನ ಅಭಿವೃದ್ದಿಗೆ ಸಹಕರಿಸಬೇಕೆಂದು ಮನವಿ ಮಾಡಿದರು.

ಕೋಲಾರಕ್ಕೆ ಸಿಎಂ ನೀಡಿದ್ದ ಭರವಸೆ ಈಡೇರಿಸಲು ಶ್ರಮಿಸುವೆ: ಸಚಿವ ಬೈರತಿ ಸುರೇಶ್‌

ಜನತೆ ನನ್ನ ಮೇಲೆ ಹೆಚ್ಚಿನ ರೀತಿಯಲ್ಲಿ ನಿರೀಕ್ಷೆ ಇಟ್ಟಿದ್ದು ಅದರ ಅನುಗುಣವಾಗಿ ಕ್ಷೇತ್ರದಾದ್ಯಂತ ಯುವಜನತೆಗೆ ಕ್ರೀಡಾ ಇಲಾಖೆಯ ವತಿಯಿಂದ ಸಿಗವ ಸವಲತುಗಳನ್ನು ಕೊಡಿಸುವುದರಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೇನೆಂದು ಯುವಜನತೆಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಬುಕ್ಕನಹಳ್ಳಿ ಶಿವಣ್ಣ, ಕುರುಟಹಳ್ಳಿ ಶಿವಣ್ಣ, ಬಾಬುರೆಡ್ಡಿ, ದೇವರಾಜ್‌, ನಗರ ಸಭೆ ಸದಸ್ಯ ಜಗದೀಶ್‌ರೆಡ್ಡಿ, ಎ.ಟಿ.ಎಸ್‌.ಶ್ರೀನಿವಾಸ್‌, ಅಮರ್‌, ರಮೇಶ್‌, ಕರಾಟೆ ಗೋವಿಂದ, ಅಶೋಕ್‌ ಕುಮಾರ್‌, ರವಣಪ್ಪ, ಉಮೇಶ್‌, ಡಾ. ಪ್ರಸನ್ನ ಕುಮಾರ್‌ ಮತ್ತಿತರರು ಉಪಸ್ಥಿತರಿದ್ದರು.

click me!