ಮಡಿಕೇರಿ: ಲೈಸೆನ್ಸ್‌ ಬೇಕಂದ್ರೆ 'ಇಂತಿಷ್ಟು' ಕೊಡಲೇ ಬೇಕು..! RTO ಕಚೇರಿಯಲ್ಲಿ ಲಂಚಬಾಕತನ

By Kannadaprabha News  |  First Published Jan 15, 2020, 8:24 AM IST

ಆರ್‌ಟಿಒ ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ಲಂಚನ್ನು ಪಡೆದುಕೊಳ್ಳಲಾಗುತ್ತಿದೆ. ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಲೈಸನ್ಸ್‌ಗೆ ಇಂತಿಷ್ಟೇ ಬೇಕು ಎಂದು ಫಿಕ್ಸ್‌ ಮಾಡಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್‌ ಆರೋಪಿಸಿದ್ದಾರೆ.


ಮಡಿಕೇರಿ(ಜ.15): ಆರ್‌ಟಿಒ ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ಲಂಚನ್ನು ಪಡೆದುಕೊಳ್ಳಲಾಗುತ್ತಿದೆ. ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಲೈಸನ್ಸ್‌ಗೆ ಇಂತಿಷ್ಟೇ ಬೇಕು ಎಂದು ಫಿಕ್ಸ್‌ ಮಾಡಲಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್‌ ಆರೋಪಿಸಿದ್ದಾರೆ.

ನಗರದ ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಪ್ರತಾಪ್‌ ಸಿಂಹ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಯಲ್ಲಿ ಮಾತನಾಡಿದ್ದಾರೆ.

Tap to resize

Latest Videos

ಆರ್‌ಟಿಒ ಇಲಾಖೆಯಲ್ಲಿ ಲಂಚ ಆರೋಪ!

ಆರ್‌ಟಿಒ ಕಚೇರಿಯಲ್ಲಿ ವಿವಿಧ ದಾಖಲೆಗಳಿಗಾಗಿ ಲಂಚನ್ನು ಪಡೆದುಕೊಳ್ಳಲಾಗುತ್ತಿದೆ. ಬ್ರೋಕರ್‌ಗಳ ಹಾವಳಿ ಹೆಚ್ಚಾಗಿದೆ. ಲೈಸನ್ಸ್‌ಗೆ ಇಂತಿಷ್ಟೇ ಬೇಕು ಎಂದು ಫಿಕ್ಸ್‌ ಮಾಡಲಾಗಿದೆ ಎಂದು ಸಭೆಯಲ್ಲಿ ತೀವ್ರ ಆರೋಪ ಮಾಡಿದ್ದಾರೆ. ಈ ಸಂದರ್ಭ ಆರ್‌ಟಿಒ ಅಧಿಕಾರಿ ಮಾತನಾಡಿ ಆ ರೀತಿ ಏನು ನಡೆಯುತ್ತಿಲ್ಲ, ಆನ್‌ಲೈನ್‌ನಲ್ಲೇ ಅರ್ಜಿ ಹಾಕುತ್ತಿದ್ದಾರೆ ಎಂದಿದ್ದಾರೆ. ಈ ಸಂದರ್ಭ ಶಾಸಕ ರಂಜನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಕಚೇರಿಯಲ್ಲಿ ಏನೆಲ್ಲ ನಡೆಯುತ್ತಿದೆ ಎಂದು ಎಲ್ಲ ಗೊತ್ತಿದೆ. ಸದ್ಯದಲ್ಲೇ ನಾನು ಭೇಟಿ ನೀಡುತ್ತೇನೆ. ಜಿಲ್ಲಾಧಿಕಾರಿ ಬ್ರೋಕರ್‌ಗಳ ಹಾವಳಿ ಬಗ್ಗೆ ಕಚೇರಿಗೆ ಖುದ್ದಾಗಿ ಭೇಟಿ ನೀಡಬೇಕೆಂದು ಸೂಚನೆ ನೀಡಿದ್ದಾರೆ.

ಮೈಸೂರು: ಸಂಕ್ರಾಂತಿ ಹಬ್ಬಕ್ಕೆ ಖರೀದಿ ಭರಾಟೆ..!

ಸಂಸದ ಪ್ರತಾಪ ಸಿಂಹ ಅವರು ಎಸ್‌ಎಸ್‌ಎಲ್‌ಸಿ ಫರೀಕ್ಷಾ ಫಲಿತಾಂಶ ಕಡಿಮೆ ಇದ್ದು, ಈ ಬಾರಿ ಹೆಚ್ಚಿನ ಫಲಿತಾಂಶ ಪಡೆದುಕೊಳ್ಳುವಂತೆ ಮಾಡಬೇಕೆಂದು ಡಿಡಿಪಿಐಗೆ ಸೂಚನೆ ನೀಡಿದರು. ಡಿಡಿಪಿಐ ಮಚ್ಚಾಡೋ ಪ್ರತಿಕ್ರಿಯಿಸಿ ಈ ಬಾರಿ ಫಲಿತಾಂಶವನ್ನು ಹೆಚ್ಚು ಪಡೆದುಕೊಳ್ಳುವ ನಿಟ್ಟಿನಲ್ಲಿ ಹಲವು ತರಬೇತಿ ಕಾರ್ಯಕ್ರಮ, ವಿಶೇಷ ತರಗತಿಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದರು.

ಆಶ್ರಯ ಮನೆಯ ರು.25 ಸಾವಿರ ಸದಸ್ಯರಿಗೆ!

ಸಂಸದ ಪ್ರತಾಪ ಸಿಂಹ ಮಾತನಾಡಿ, ಆಶ್ರಯ ಮನೆಯ ಆಯ್ಕೆ ಮಾಡುವ ಸಂದರ್ಭ ಫಲಾನುಭವಿಗಳ ತಾರತಮ್ಯ ಮಾಡಬೇಡಿ. ಸೂಕ್ತ ಫಲಾನುಭವಿಗಳಿಗೆ ವಸತಿ ನೀಡುವಂತೆ ಮೂರು ತಾಪಂ ಇ.ಒ.ಗಳಿಗೆ ಸೂಚನೆ ನೀಡಿದ್ದಾರೆ. ಈ ಸಂದರ್ಭ ರಂಜನ್‌ ಮಾತನಾಡಿ, ಜಿಲ್ಲೆಯ ಶೇ.90ರಷ್ಟುಪಂಚಾಯಿತಿಗಳಲ್ಲಿ ಆಶ್ರಯ ಮನೆ ಯೋಜನೆಯಲ್ಲಿ ರು.25 ಸಾವಿರ ಹಣವನ್ನು ಸದಸ್ಯರು ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಮಾಡಿದರೆ ಬಡವರು ಮನೆ ನಿರ್ಮಾಣ ಮಾಡಲು ಸಾಧ್ಯವೇ. ಈ ರೀತಿ ಕಂಡುಬಂದರೆ ಸದಸ್ಯರಿಗೆ ನೋಟೀಸ್‌ ನೀಡಬೇಕೆಂದು ಇಒಗಳಿಗೆ ಸೂಚನೆ ನೀಡಿದ್ದಾರೆ.

click me!