ಜಗತ್ತಿನಲ್ಲಿ ಗುರು, ದೈವ, ಹಿರಿಯರು ಎಲ್ಲರ ಋುಣವನ್ನು ತೀರಿಸಲು ಸಾಧ್ಯವಿದೆ. ಆದರೆ, ತಾಯಿಯ ಋುಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಸಮೃದ್ಧಿ ಸೇವಾ ಟ್ರಸ್ಟ್ ಹೆಗ್ಗೆರೆ ಅವರು ಆಯೋಜಿಸಿದ್ದ 201 ಗರ್ಭಿಣಿ ಹೆಣ್ಣು ಮಕ್ಕಳ ಮಡಿಲು ತುಂಬುವ ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಿಳೆಯರಿಗೆ ಮಡಿಲು ತುಂಬಿ ಮಾತನಾಡಿದರು.
ತುಮಕೂರು: ಜಗತ್ತಿನಲ್ಲಿ ಗುರು, ದೈವ, ಹಿರಿಯರು ಎಲ್ಲರ ಋುಣವನ್ನು ತೀರಿಸಲು ಸಾಧ್ಯವಿದೆ. ಆದರೆ, ತಾಯಿಯ ಋುಣವನ್ನು ತೀರಿಸಲು ಎಂದಿಗೂ ಸಾಧ್ಯವಿಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಡಿ.ಸಿ.ಗೌರಿಶಂಕರ್ ಅಭಿಪ್ರಾಯಪಟ್ಟಿದ್ದಾರೆ. ಸಮೃದ್ಧಿ ಸೇವಾ ಟ್ರಸ್ಟ್ ಹೆಗ್ಗೆರೆ ಅವರು ಆಯೋಜಿಸಿದ್ದ 201 ಗರ್ಭಿಣಿ ಹೆಣ್ಣು ಮಕ್ಕಳ ಮಡಿಲು ತುಂಬುವ ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಹಿಳೆಯರಿಗೆ ಮಡಿಲು ತುಂಬಿ ಮಾತನಾಡಿದರು.
ತನ್ನ ಮಗನ ಬಗ್ಗೆ ನಾಲ್ಕಾರು ಒಳ್ಳೆಯ ಮಾತನಾಡಿದಾಗ, ಮಾತ್ರ ತನ್ನ ಮಗನ ಬಗ್ಗೆ ಅಭಿಮಾನ ತುಂಬಿ ಬರಲು ಸಾಧ್ಯ. ಅದಕ್ಕಾಗಿಯೇ ಹಿರಿಯರು ತಾಯಿಗಿಂತ ದೇವರಿಲ್ಲ ಎಂದಿದ್ದಾರೆ. ಇದರ ಹಿಂದಿನ ಗೂಡಾರ್ಥವನ್ನು ನಾವೆಲ್ಲರು ಮಾಡಿಕೊಳ್ಳಬೇಕಿದೆ ಎಂದರು.
ಹೆಣ್ಣಿಗೆ ತಾಯ್ತನವೆಂಬುದು ಅತ್ಯಂತ ಸಂತೋಷ ತರುವ ವಿಚಾರ, ಹೆರಿಗೆ ಎಂಬುದು ಪುನರ್ ಜನ್ಮ. ಅಂತಹ ಪುನರ್ ಜನ್ಮದ ಹೊಸ್ತಿನಲ್ಲಿರುವ 200ಕ್ಕು ಹೆಚ್ಚು ಹೆಣ್ಣು ಮಕ್ಕಳನ್ನು ಸಮೃದ್ಧಿ ಸೇವಾ ಟ್ರಸ್ಟ್ ನ ಶಾಂತಕುಮಾರಿ ಅವರ ಗಂಡ ನಂಜಪ್ಪ, ಮಗ ಶಶಾಂಕ ಮತ್ತು ಮಗಳು ಒಂದೆಡೆ ಕಲೆಹಾಕಿ, ಅವರನ್ನು ತಮ್ಮ ಮನೆ ಮಕ್ಕಳಂತೆ ಪರಿಗಣಿಸಿ, ಸಾಮೂಹಿಕ ಉಡಿತುಂಬುವ ಕೆಲಸ ಮಾಡುತ್ತಿರುವುದು ಸಂತೋಷದ ವಿಚಾರ. ಇದು ಸಮಾಜ ಸೇವೆಯಲ್ಲಿ ನಿರಂತರವಾಗಿರುವ ಎಲ್ಲಾ ಹೆಣ್ಣು ಮಕ್ಕಳಿಗೆ ಮಾದರಿ. ನಿಸ್ವಾರ್ಥ ಸೇವೆಗೆ ನನ್ನ ಕಡೆಯಿಂದ ಒಂದು ಲಕ್ಷ ರು. ಟ್ರಸ್ಟ್ ಗೆ ದೇಣಿಗೆ ನೀಡುವುದಾಗಿ ಶಾಸಕ ಗೌರಿಶಂಕರ್ ಹೇಳಿದರು.
ಒಂದು ಕಾಲದಲ್ಲಿ ವಾರದಲ್ಲಿ ಒಂದು ದಿನ ನುಚ್ಚಕ್ಕಿ ಗಂಜಿ ಊಟ ಮಾಡುತಿದ್ದ ನಾವು ಇಂದು ಒಂದು ಲಕ್ಷ ಜನರಿಗೆ ಊಟ ಹಾಕುವ ಶಕ್ತಿ ಇದೆ ಎಂದರೆ, ಅದಕ್ಕೆ ನಮ್ಮ ತಾಯಿ ಮಾಡಿದ ದಾನ, ಧರ್ಮವೇ ಕಾರಣ. ಕಾಲದಲ್ಲಿ ಜಾತಿ, ಧರ್ಮದ ಹಂಗಿಲ್ಲದೆ ಕ್ಷೇತ್ರದ ವ್ಯಾಪ್ತಿಯ ಎಲ್ಲ ಜನರಿಗೆ ಆಹಾರ ಧಾನ್ಯ, ತರಕಾರಿ,ಹಣ್ಣು, ಮೆಡಿಷನ್ ನೀಡಿದಲ್ಲದೆ, ಹತ್ತಾರು ಲಕ್ಷ ರು. ಖರ್ಚು ಮಾಡಿ, ಸರಕಾರಿ ಶಾಲೆಯನ್ನು ಕೋವಿಡ್ ಆಸ್ಪತ್ರೆಯಾಗಿ ಪರಿವರ್ತಿಸಿ ಕ್ಷೇತ್ರದ ಜನರ ಆರೋಗ್ಯ ಕಾಪಾಡಿದ್ದೇನೆ. ಈ ಎಲ್ಲಾ ಕಾರ್ಯಕ್ರಮಗಳ ಹಿಂದಿನ ಸ್ಫೂರ್ತಿ ನನ್ನ ತಾಯಿ ಎಂದರು.
ಪ್ರಾಸ್ತಾವಿಕ ವಾಗಿ ಮಾತನಾಡಿದ ಸಮೃದ್ಧಿ ಟ್ರಸ್ಟ್‌ನ ಅಧ್ಯಕ್ಷೆ ಶಾಂತಕುಮಾರಿ ನಂಜಪ್ಪ , ಹೆಣ್ಣಿಗೆ ತಾಯ್ತನದ ಸಂದರ್ಭದಲ್ಲಿ ಅನೇಕ ಬಯಕೆಗಳಿರುತ್ತೆವೆ. ಕೆಲವೊಂದು ಸಂದರ್ಭದಲ್ಲಿ ಕುಟುಂಬದವರು, ಅದನ್ನು ಪೂರೈಸಲಾಗದೆ ಕಷ್ಟಪಡುವುದನ್ನು ನೋಡಿದ್ದೇನೆ ಎಂದರು.
ಪ್ರತಿಬಾರಿಯು ನಮಗೆ ಗ್ರಾಮಾಂತರ ಶಾಸಕ ಗೌರಿಶಂಕರ್ ಅವರು ಸಹಕಾರ ನೀಡುತ್ತಾ ಬಂದಿದ್ದಾರೆ. ಶಾಸಕರಾಗಿ ಕ್ಷೇತ್ರದ ಮನೆ ಮಗನಂತೆ ಹಬ್ಬ ಹರಿದಿನಗಳಲ್ಲಿ ಮಹಿಳೆಯರಿಗೆ ಬಾಗೀನ ನೀಡುವ ಕೆಲಸ ಮಾಡಿದ್ದಾರೆ. ಇಂತಹ ಜನಪ್ರತಿನಿಧಿಯೂ ಮುಂದೆಯೂ ನಮ್ಮ ಜೊತೆ ಇರಬೇಕೆಂಬುದು ನಮ್ಮ ಆಶಯ ಎಂದರು
ಕಾರ್ಯಕ್ರಮದಲ್ಲಿ ತುಮಕೂರು ಗ್ರಾಮಾಂತರ ಜೆಡಿಎಸ್ ಅಧ್ಯಕ್ಷ ಹಾಲೆನೂರು ಆನಂತ್, ತುಮಕೂರು ನಗರ ಜೆಡಿಎಸ್ ಅಧ್ಯಕ್ಷ ಪ್ರಸನ್ನ, ಜಿ.ಪಂ.ಮಾಜಿ ಉಪಾಧ್ಯಕ್ಷ ಮುದಿಮಡು ರಂಗಸ್ವಾಮಿ, ಮಾಜಿ ಸಚಿವ ಬಿ.ಸತ್ಯನಾರಾಯಣ ಅವರ ಪತ್ರ ಸತ್ಯಪ್ರಕಾಶ್ ಕಾರ್ಯಕ್ರಮ ಕುರಿತು ಮಾತನಾಡಿದರು, ಜೆಡಿಎಸ್ ಪಕ್ಷದ ಮುಖಂಡರುಗಳು ಭಾಗವಹಿಸಿದ್ದರು
ಸಿದ್ದಾರ್ಥ ವೈದ್ಯಕೀಯ ವಿದ್ಯಾಲಯದಿಂದ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಹಮ್ಮಿಕೊಳ್ಳಲಾಗಿತ್ತು. 200ಕ್ಕೂ ಹೆಚ್ಚು ಗರ್ಭಿಣಿಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.