ಭಾರತದ ಸಂವಿಧಾನ ಜಗತ್ತಿಗೇ ಮಾದರಿ: ಮಸಾಲಾ ಜಯರಾಮ್‌

By Kannadaprabha News  |  First Published Jan 28, 2023, 6:39 AM IST

 ಡಾ.ಅಂಬೇಡ್ಕರ್‌ ರಚಿಸಿರುವ ಭಾರತದ ಸಂವಿಧಾನವು ಜಗತ್ತಿಗೇ ಮಾದರಿ ಸಂವಿಧಾನ ಎಂದು ಶಾಸಕ ಮಸಾಲಾ ಜಯರಾಮ್‌ ಹೇಳಿದರು.


 ತುರುವೇಕೆರೆ: ಡಾ.ಅಂಬೇಡ್ಕರ್‌ ರಚಿಸಿರುವ ಭಾರತದ ಸಂವಿಧಾನವು ಜಗತ್ತಿಗೇ ಮಾದರಿ ಸಂವಿಧಾನ ಎಂದು ಶಾಸಕ ಮಸಾಲಾ ಜಯರಾಮ್‌ ಹೇಳಿದರು.

ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 74ನೇ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

Tap to resize

Latest Videos

ಸೋಂಕು ಪ್ರಪಂಚವನ್ನೇ ತಲ್ಲಣಗೊಳಿಸಿತ್ತು. ಅಭಿವೃದ್ಧಿ ಎಂಬುದು ಮರೀಚಿಕೆಯಾಗಿತ್ತು.  ಪ್ರಧಾನಿ ಮೋದಿ ದೂರದೃಷ್ಟಿತ್ವದಿಂದ ಇಂದು ಕೋಟ್ಯಂತರ ಜನರು ತಮ್ಮ ಪ್ರಾಣವನ್ನು ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದರು.

ತ್ಯಾಗ ಬಲಿದಾನದ ಸಂಕೇತವಾಗಿರುವ ಗಣರಾಜ್ಯೋತ್ಸವನ್ನು ಸಂಭ್ರಮದಿಂದ ಆಚರಿಸುತ್ತಿದ್ದು, ಜವಹರಲಾಲ್‌, ಸರ್ದಾರ್‌ ವಲ್ಲಬಾಯ್‌ ಪಟೇಲ್‌,ಅಂಬೇಡ್ಕರ್‌ ಸೇರಿದಂತೆ ಹಲವು ಹೋರಾಟಗಾರರನ್ನು ಭಕ್ತಿಪೂರ್ವಕವಾಗಿ ನೆನೆಯಬೇಕಿದೆ ಎಂದರು.

ತಹಶೀಲ್ದಾರ್‌ ವೈ.ಎಂ.ರೇಣುಕುಮಾರ್‌, ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನ ಒಗ್ಗೂಡಿಸಿ. ಒಂದು ಏಕೀಕೃತ ರಾಷ್ಟ್ರವಾಗಿ ಕಟ್ಟಿದ ದಿನವನ್ನು ನಾವೆಲ್ಲರೂ ಹೆಮ್ಮೆಯಿಂದ ನೆನೆಯಬೇಕಿದೆ ಎಂದರು.

ಅಂಬೇಡ್ಕರ್‌ ಅವರು ರಚಿಸಿರುವ ಸಂವಿಧಾನವನ್ನು 1950 ಜನವರಿ 26 ರಂದು ಸ್ವೀಕರಿಸಿದ ದಿನವೂ ಭಾರತೀಯರ ಸುದಿನ ಎಂಬುದನ್ನು ಮರೆಯಬಾರದು.

ಅನಕ್ಷರತೆ, ಸಾಮಾಜಿಕ ತಾರತಮ್ಯಗಳಿಗೆ ಗುಲಾಮರಾಗಲು ಬಿಡದೆ ಪ್ರಜಾಸತಾತ್ಮಕ ಮೌಲ್ಯಗಳನ್ನು ಎತ್ತಿ ಹಿಡಿದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯೋಣ ಎಂದರು. ಜಾನಪದ, ಪತ್ರಿಕೋದ್ಯಮ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಗಮನ ಸೆಳೆಯಿತು.

ಪ.ಪಂ. ಅಧ್ಯಕ್ಷ ಪ್ರಭಾಕರ್‌, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಚಿದಾನಂದ್‌, ಇ.ಒ.ಸತೀಶ್‌ಕುಮಾರ್‌, ಕ್ಷೇತ್ರ ಶಿಕ್ಷಣಾ​ಕಾರಿ ಎಸ್‌.ಕೆ.ಪದ್ಮನಾಭ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ನಂರಾಜು ಮುನಿಯೂರು, ಬೆಸ್ಕಾಂ ಎಇಇ ಚಂದ್ರಾನಾಯಕ್‌, ಕೃಷಿ ಸಹಾಯಕ ನಿರ್ದೇಶಕಿ ಪೂಜಾ.ಬಿ, ಕಸಾಪ ಅಧ್ಯಕ್ಷ ಡಿ.ಪಿ.ರಾಜು, ಡಾ.ಸುಪ್ರಿಯಾ ಸೇರಿದಂತೆ ಹಲವಾರು ಮಂದಿ ಪಾಳ್ಗೊಂಡಿದ್ದರು.

ತ್ಯಾಗ ಬಲಿದಾನದ ಫಲವಾಗಿ ಭಾರತ ಬಲಿಷ್ಠ

ಕೊರಟಗೆರೆ:

ಅಖಂಡ ಭಾರತ ರಚನೆಗಾಗಿ ದೇಶದಲ್ಲಿ ಸಾವಿರಾರು ಮಂದಿ ತ್ಯಾಗ ಬಲಿದಾನ ಮಾಡಿದ್ದು ಅದರ ಫಲವಾಗಿ ಭಾರತವು ವಿಶ್ವದ ಮುಂದೆ ಬಲಿಷ್ಠ ದೇಶವಾಗಿ ನಿಂತಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಜಿ.ಪರಮೇಶ್ವರ್‌ ಹೇಳಿದರು. ಅವರು ಕೊರಟಗೆರೆ ಸ.ಪ.ಪೂ. ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್‌ ದೇಶಕ್ಕೆ ನೀಡಿದ ಸಂವಿಧಾನವು ಭದ್ರ ಬುನಾದಿಯಾಗಿದೆ, ವಿಶ್ವದಲ್ಲೆ ಅತಿ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆ, ಅತಿ ದೊಡ್ಡ ಎರಡನೇ ಜನಸಂಖ್ಯೆ ಹೊಂದಿರುವ ಭಾರತ ದೇಶವು ಒಂದು ಕಾಲದಲ್ಲಿ ಆಹಾರಕ್ಕೆ, ಔಷಧಿಗೆ ಹಾಗೂ ತಂತ್ರಜ್ಞಾನಗಳಿಗೆ ಬೇರೆ ದೇಶದ ಮುಂದೆ ಕೈಚಾಚುವ ಪರಿಸ್ಥಿತಿಯಲ್ಲಿದ್ದ ನಮ್ಮ ದೇಶವು ಇಂದು ಈ ಮೂರನ್ನು ಬೇರೆ ದೇಶಗಳಿಗೆ ನೀಡುತ್ತಿದೆ, ಆರ್ಥಿಕತೆಯಲ್ಲಿ ಸದೃಡವಾಗಿದೆ, ಇದಕ್ಕೆ ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಹಾರ ಲಾಲ್‌ ನೆಹರು ನೀಡಿದ ಪಂಚವಾರ್ಷಿಕ ಯೋಜನೆಯೇ ಅಡಿಪಾಯವಾಗಿದೆ, ಭಾರತಕ್ಕೆ ಇಂದು ಬೇಕಾಗಿರುವುದು ಸೌಹಾರ್ಧಿತ ಮನೋಭಾವದ ವಾತಾವರಣ, ಜಾತ್ಯಾತೀತೆ, ಧರ್ಮ ಮತ್ತು ಜಾತಿಗಳ ಮಧ್ಯ ಉತ್ತಮ ಮನೋಭಾವ, ದೇಶದ ಐಕ್ಯತೆ, ಅಖಂಡ ತೆಯಾಗಿದ್ದು, ಭಾರತೀಯರಾದ ನಾವೆಲ್ಲರೂ ಅದನ್ನು ಪಾಲಿಸಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ತಹಶೀಲ್ದಾರ್‌ ನರಸಿಂಹಮೂರ್ತಿ ದ್ವಜಾರೋಹಣ ಮಾಡಿ ಸಂದೇಶ ನೀಡಿದರು, ವಿವಿಧ ಶಾಲಾ ಮಕ್ಕಳು ಪೆರೇಡ್‌ ನಡೆಸಿ ಸಾಂಸ್ಕೃತಿ ಕಾರ್ಯಕ್ರಮ ನೀಡಿದರು,ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಶಾಸಕರು ಲ್ಯಾಪ್‌ಟಾಪ್‌ ವಿತರಿಸಿದರು. ವೇದಿಕೆಯಲ್ಲಿ ಪ.ಪಂ.ಅಧ್ಯಕ್ಷೆ ಕಾವ್ಯರಮೇಶ್‌, ಉಪಧ್ಯಕ್ಷೆ ಭಾರತಿಸಿದ್ದಮಲ್ಲಪ್ಪ, ತಾ.ಪಂ. ಇಓ ಡಾ.ದೊಡ್ಡಸಿದ್ದಯ್ಯ, ಕಾಸಾಪ ಅಧ್ಯಕ್ಷ ಕೃಷ್ಣಮೂರ್ತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರುದ್ರೇಶ್‌, ಪ.ಪಂ.ಸದಸ್ಯ ಎ,ಡಿ.ಬಲರಾಮಯ್ಯ, ಕೆ,ಎನ್‌,ಲಕ್ಷ್ಮೀನಾರಾಯಣ್‌, ಸ್ಕೌಟ್‌ ಅಂಡ್‌ ಗೈಡ್‌್ಸ ಅಧ್ಯಕ್ಷ ಕೆ.ಆರ್‌.ಓಬಳರಾಜು ಸೇರಿದಂತೆ ಪ.ಪಂ.ಸದಸ್ಯರು ತಾಲೂಕು ಮಟ್ಟದ ಅಧಿಕಾರಿಗಳು ಸಿಬ್ಬಂದಿ ಇದ್ದರು.

click me!