* ರಾತ್ರಿ 9.30ರಿಂದ ಮೆಟ್ರೋ ಸೇವೆ ಇರುವುದಿಲ್ಲ
* ಸಿವಿಲ್ ಕಾಮಗಾರಿ ನಡೆಸಬೇಕಿರುವುದರಿಂದ ತಾತ್ಕಾಲಿಕ ಸ್ಥಗಿತ
* ಎಂ.ಜಿ.ರಸ್ತೆಯಿಂದ ಕೆಂಗೇರಿ ಮಧ್ಯೆ ಎಂದಿನಂತೆ ಮೆಟ್ರೋ ಸೇವೆ
ವರದಿ: ಮಮತಾ ಮರ್ಧಾಳ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಂಗಳೂರು(ಏ.23): ವೀಕೆಂಡಲ್ಲಿ ಮೆಟ್ರೋ(Namma Metro) ಸಂಚಾರ ಮಾಡ್ಬೇಕು ಅನ್ನೊ ಪ್ಲಾನ್ ಮಾಡ್ಕೊಂಡಿದ್ರೆ ಅದ್ನ ಮುಂದೂಡಿ. ಯಾಕಂದ್ರೆ ನಮ್ಮ ಮೆಟ್ರೊ ಸಂಚಾರದಲ್ಲಿ ಕೊಂಚ ವ್ಯತ್ಯಯವಾಗಲಿದೆ. ಸಾಮಾನ್ಯವಾಗಿ ವೀಕೆಂಡ್ ಅಂತಂದ್ರೆ ನಮ್ಮ ಮೆಟ್ರೋದಲ್ಲಿ ಜಾಸ್ತಿ ಪ್ರಯಾಣಿಕರು(Passengers) ಓಡಾಡ್ತಾರೆ. ತಮ್ಮ ಸ್ವಂತ ವಾಹನಗಳಿಗೆ ಬ್ರೇಕ್ ಹಾಕಿ ಮೆಟ್ರೋ ದಲ್ಲಿ ಓಡಾಡ್ತಾರೆ. ಆದ್ರೆ ಈ ವಾರದ ವೀಕೆಂಡಲ್ಲಿ ಮೆಟ್ರೋ ರೈಲು ಹಿಡಿಯೋ ಮೊದಲು ಸ್ವಲ್ಪ ಯೋಚ್ನೆ ಮಾಡ್ಬೇಕಿದೆ. ಯಾಕಂದ್ರೆ ವೀಕೆಂಡ್ ಸಂಚಾರದಲ್ಲಿ ಸ್ವಲ್ಪ ವ್ಯತ್ಯಯವಾಗಲಿದೆ. ಇಂದು(ಶನಿವಾರ) ರಾತ್ರಿ 9.30 ಯಿಂದ ಇಂದಿರಾನಗರ ಮತ್ತು ಸ್ವಾಮಿ ವಿವೇಕಾನಂದ ಮೆಟ್ರೋ ನಿಲ್ದಾಣದ ನಡುವೆ ನಿಲ್ದಾಣದ ಮಧ್ಯೆ ಸಿವಿಲ್ ನಿರ್ವಹಣೆ ಕಾಮಗಾರಿ ಹಿನ್ನಲೆ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಳ್ಳಲಿದೆ.
undefined
ಸಿವಿಲ್ ಕಾಮಗಾರಿ(Civil Works) ನಿರ್ವಹಣೆ ಹಿನ್ನಲೆ ನೇರಳೆ ಮಾರ್ಗದ ಎಂ.ಜಿ ರಸ್ತೆ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ಇಂದು ರಾತ್ರಿ 9.30 ರಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಈ ವೇಳೆ ಮೆಟ್ರೋ ಪ್ರಯಾಣಿಕರಿಗೆ ಮೆಟ್ರೋ ಸೇವೆಯು ಎಂ.ಜಿ ರಸ್ತೆ(MG Road) ಮತ್ತು ಕೆಂಗೇರಿ(Kengeri) ಮೆಟ್ರೋ ನಿಲ್ದಾಣಗಳ ನಡುವೆ ಮಾತ್ರ ಲಭ್ಯವಿರುತ್ತೆ. ಹೀಗಾಗಿ ಎಂ.ಜಿ ರಸ್ತೆ ಕಡೆ ತೆರಳುವ ಪ್ರಯಾಣಿಕರಿಗೆ ಮೆಟ್ರೋ ರೈಲು ಸೇವೆ ಸಿಗೋದಿಲ್ಲ. ಆದ್ರೆ ಇಂದು ಶನಿವಾರ ರಾತ್ರಿ ಕೆಂಗೇರಿ ಮೆಟ್ರೋ ನಿಲ್ದಾಣದಿಂದ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಕ್ಕೆ ಹಾಗೂ ಬೈಯಪ್ಪನಹಳ್ಳಿ(Baiyyappanahalli) ಮೆಟ್ರೋ ನಿಲ್ದಾಣದಿಂದ ಕೆಂಗೇರಿ ಕಡೆಗೆ ರಾತ್ರಿ 8.30 ಕ್ಕೆ ಕೊನೆಯದಾಗಿ ಮೆಟ್ರೋ ಸಂಚರಿಸಲಿದೆ. ವೀಕೆಂಡ್ ಆದ ಹಿನ್ನಲೆ ಸಾಕಷ್ಟು ಸಂಖ್ಯೆಯಲ್ಲಿ ಜನ ಎಂ.ಜಿ ರಸ್ತೆ, ಬ್ರಿಗೇಡ್ ರೋಡ್ ಕಡೆಗೆ ಮುಖ ಮಾಡ್ತಾರೆ. ಅಲ್ಲದೆ ವಾರಂತ್ಯದಲ್ಲಿ ಫ್ರೀಯಾಗಿ ಮೆಟ್ರೋ ಸಂಚಾರ ಮಾಡೋಣ ಅಂತಿರ್ತಾರೆ. ಆದ್ರೆ ಇದಕ್ಕೆಲ್ಲ ಫುಲ್ಸ್ಟಾಪ್ ಹಾಕಿ ತಮ್ಮ ಸಗವಂಯ ವಾಹನದಲ್ಲೆ ಓಡಾಡ್ಬೇಕಿದೆ.
ಇನ್ನು ಭಾನುವಾರ ಹಸಿರು ಹಾಗೂ ನೇರಳೆ ಮಾರ್ಗದ ಮೆಟ್ರೋ ಸೇವೆಯಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ. ಎಂದಿನಂತೆ ಬೆಳಿಗ್ಗೆ 7 ಗಂಟೆಯಿಂದ ಮೆಟ್ರೋ ರೈಲು ಕಾರ್ಯಾರಂಭ ಮಾಡಲಿದೆ. ಕೋವಿಡ್ ನಂತರ ನಮ್ಮ ಮೆಟ್ರೋ ದಲ್ಲು ಓಡಾಡುವ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿತ್ತು. ಹೀಗಾಗಿಯೇ ನಷ್ಟದ ಅಂಚೊನಲ್ಲಿದ್ದ ನಮ್ಮ ಮೆಟ್ರೋ ಪ್ರಯಾಣಿಕರನ್ನು ತನ್ನತ್ತ ಸೆಳೆಯಲೆಂದೆ ಮೆಟ್ರೋ ಪಾಸ್ ವ್ಯವಸ್ಥೆ ಕೂಡ ಮಾಡಿತ್ತು. ಆದ್ರೆ ಇದೀಗ ಅತೀ ಹೆಚ್ಚು ಪ್ರಯಾಣಿಕರು ಓಡಾಡುವ ಎಂಜಿ ರಸ್ತೆ ಬೈಯಪ್ಪನಹಳ್ಳಿ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಸಂಚಾರ ಸ್ಥಗಿತವಾಗಿದ್ದು, ವೀಕೆಂಡಲ್ಲಿ ನಮ್ಮ ಮೆಟ್ರೋ ಬಳಸೋ ಪ್ರಯಾಣಿಕರಿಗೆ ನಿರಾಸೆಯಾಗಿದೆ.