ಕೇರಳದಿಂದ ಬರುವವರಿಗೆ ಕೋವಿಡ್‌ ನೆಗೆಟಿವ್‌ ರಿಪೋರ್ಟ್ ಇದ್ದರಷ್ಟೇ ಪ್ರವೇಶ

By Kannadaprabha NewsFirst Published Aug 8, 2021, 2:39 PM IST
Highlights
  • ಕೇರಳ ಗಡಿಯಿಂದ ಜನರು ಮೈಸೂರು ಜಿಲ್ಲೆಗೆ ಬರಬೇಕೆಂದರೆ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯ
  • ನೆಗೆಟಿವ್‌ ರಿಪೋರ್ಟ್‌ ಕಡ್ಡಾಯವಾಗಿ ತಂದರೆ ಮಾತ್ರ ಪ್ರವೇಶ 
  • ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿಕೆ

 ಎಚ್‌.ಡಿ. ಕೋಟೆ (ಆ.08):  ಕೇರಳ ಗಡಿಯಿಂದ ಜನರು ಮೈಸೂರು ಜಿಲ್ಲೆಗೆ ಬರಬೇಕೆಂದರೆ ಕೋವಿಡ್‌ ನೆಗೆಟಿವ್‌ ರಿಪೋರ್ಟ್‌ ಕಡ್ಡಾಯವಾಗಿ ತಂದರೆ ಮಾತ್ರ ಪ್ರವೇಶ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಹೇಳಿದರು.

ಶನಿವಾರ ಮೈಸೂರು ಜಿಲ್ಲೆಯ ಗಡಿಭಾಗ ತಾಲೂಕಿನ ಬಾವಲಿ ಚೆಕ್‌ಪೋಸ್ವ್‌ಗೆ ಭೇಟಿ ನೀಡಿ ಮಾತನಾಡಿದ ಅವರು, ಚಾಮರಾಜನಗರದಲ್ಲಿ ಕೋವಿಡ್‌ ಸಭೆ ನಡೆಸಿ, ಅಲ್ಲಿನ ಗಡಿ ಭಾಗಕ್ಕೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಕೋವಿಡ್‌ 2ನೇ ಅಲೆಯ ವೇಳೆ ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿದಾಗ ಇಲ್ಲಿನ ಸಮಸ್ಯೆಗಳನ್ನು ಮನಗಂಡು ಶೆಡ್‌ ನಿರ್ಮಿಸುವಂತೆ ಜಿಪಂ ಸಿಇಒ ಅಧಿಕಾರಿಗಳಿಗೆ ಸೂಚಿಸಿದರ ಫಲವಾಗಿ ವೈದ್ಯರಿಗಾಗಿ ಶೆಡ್‌ಅನ್ನು ನಿರ್ಮಿಸಲಾಗಿದೆ ಎಂದು ಹೇಳಿದರು.

ಮುಂದಿನ ತಿಂಗಳೇ ಕೊರೋನಾ 3ನೇ ಅಲೆ..?

ಕೋವಿಡ್‌ 3ನೇ ಅಲೆ ಬರಬಹುದು ಎಂಬ ದೃಷ್ಟಿಯಿಂ¨ ಸರ್ಕಾರದಿಂದ ಆದೇಶ ಬಂದ ಹಿನ್ನೆಲೆಯಲ್ಲಿ ಜಿಲ್ಲೆ ಗಡಿಭಾಗದ ಚೆಕ್‌ಪೋಸ್ವ್‌ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್‌ ಟೆಸ್ವ್‌ ಕಡಿಮೆ ಮಾಡಿಲ್ಲ. ಪ್ರತಿನಿತ್ಯ 10 ಸಾವಿರ ಕೋವಿಡ್‌ ಪರೀಕ್ಷೆ ನಡೆಯುತ್ತಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದಂತೆಯಾವುದೇ ಕೊರತೆ ಇಲ್ಲ. ಜಿಲ್ಲೆಯ ಗಡಿಭಾಗದ ಹಳ್ಳಿಗಳಲ್ಲಿ ವ್ಯಾಕ್ಸಿನೇಷನ್‌ ಅನ್ನು ಶೇ. 100 ರಷ್ಟುನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಾರಾಂತ್ಯ ಕಫä್ರ್ಯಗೆ ಸಂಬಂಧಿಸಿದಂತೆ ಸಭೆ ನಡೆಸಿ ಸಾರ್ವಜನಿಕರಿಗೆ ಹಾಗೂ ವ್ಯಾಪಾರಿಗಳಿಗೆ ತೊಂದರೆಯಾಗದಂತೆ ಮುಂದಿನ ತೀರ್ಮಾನ ಕೈಗೊಂಡು ತಿಳಿಸಲಾಗುವುದು ಎಂದರು.

ಕಳೆದ ಬಾರಿ ಲಾಕ್‌ಡೌನ್‌ನಿಂದ ಜನಸಾಮಾನ್ಯರಿಗೆ ಹಾಗೂ ಉದ್ಯಮಕ್ಕೆ ಬಾರಿ ಹೊಡೆತ ಬಿದ್ದಿದೆ. ಈಗ ಜಿಲ್ಲೆಯಲ್ಲಿ ಲಾಕ್‌ಡೌನ್‌ ಮಾಡುವ ಪರಿಸ್ಥಿತಿ ಬಂದಿಲ್ಲ. ಪಾಸಿಟಿವ್‌ ರೆಟ್‌ ಕಡಿಮೆ ಇರುವುದರಿಂದ ಲಾಕ್‌ಡೌನ್‌ ಮಾಡುವ ಚಿಂತನೆಯಿಲ್ಲ. ನೆರೆ ರಾಜ್ಯಗಳಲ್ಲಿ ಕೋವಿಡ್‌ ಪ್ರಕರಣ ಹೆಚ್ಚಾಗಿದೆ. ಇದರಿಂದ ನಮ್ಮ ಜಿಲ್ಲೆಗೆ ಬರದಂತೆ ನಿಯಂತ್ರಿಸುವ ಸಲುವಾಗಿ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ವಿವರಿಸಿದರು.

ಬಿಡದ ಮಳೆಯ ನಡುವೆಯೂ ವೀಕ್ಷಣೆ :  ಬೆಳಗ್ಗೆಯಿಂದ ಆರಂಭವಾದ ಮಳೆಯ ನಡುವೆಯೂ ಸಚಿವರು ಬಾವಲಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ ಸಿದ್ಧತೆ ಮತ್ತು ಮುಂಜಾಗ್ರತ ಕ್ರಮಗಳನ್ನು ಪರಿಶೀಲಿಸಿದರು. ಸಚಿವರು, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕೊಡೆ ಹಿಡಿದೇ ವೀಕ್ಷಣೆ ಮಾಡಿದರು.

ಜಿಪಂ ಸಿಇಒ ಎ.ಎಂ. ಯೋಗೀಶ್‌, ಎಸ್ಪಿ ಆರ್‌. ಚೇತನ್‌, ತಹಸೀಲ್ದಾರ್‌ ನರಗುಂದ, ಡಿಎಚ್‌ಒ ಡಾ. ಪ್ರಸಾದ್‌, ಸಚಿವರ ವಿಶೇಷ ಕರ್ತವ್ಯಾಧಿಕಾರಿ ದಿನೇಶ್‌ ಗೂಳಿಗೌಡ ಇದ್ದರು.

click me!