ವಿಶೇಷ ಸಾವಿರ ವರ್ಷದ ಪಚ್ಚೆಲಿಂಗ ದರ್ಶನ ಇಲ್ಲ : ಕಾರಣವೇನು..?

Kannadaprabha News   | Asianet News
Published : Oct 20, 2020, 03:01 PM IST
ವಿಶೇಷ ಸಾವಿರ ವರ್ಷದ ಪಚ್ಚೆಲಿಂಗ ದರ್ಶನ ಇಲ್ಲ : ಕಾರಣವೇನು..?

ಸಾರಾಂಶ

ಸಾವಿರ ವರ್ಷದ ಪಚ್ಚೆಲಿಂಗ ದರ್ಶನ ಭಾಗ್ಯ ಇಲ್ಲ. ಏನು ಕಾರಣ..?

ಸಾಗರ (ಅ.20):  ಕೊರೋನಾ ಹಿನ್ನೆಲೆಯಲ್ಲಿ ತಾಲೂಕಿನ ಕೆಳದಿ ಬಂದಗದ್ದೆ ರಾಜಗುರು ಹಿರೇಮಠದಲ್ಲಿ ಈ ಬಾರಿ ವಿಜಯದಶಮಿಯಂದು ಪಚ್ಚೆಲಿಂಗ ದರ್ಶನ ಇರುವುದಿಲ್ಲ ಎಂದು ಡಾ. ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದ್ದಾರೆ.

ಕಳೆದ ವರ್ಷ ವಿಜಯದಶಮಿಯಂದು ಇತಿಹಾಸ ಪ್ರಸಿದ್ಧವಾದ ಪಚ್ಚೆಲಿಂಗ ದರ್ಶನಕ್ಕೆ ಮುಖ್ಯಮಂತ್ರಿ, ಸಂಸದರು, ಸ್ಥಳೀಯ ಶಾಸಕರಾದ ಎಚ್‌.ಹಾಲಪ್ಪನವರ ಸಹಕಾರದಿಂದ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಅನೇಕ ವರ್ಷಗಳಿಂದ ಪಚ್ಚೆಲಿಂಗ ದರ್ಶನದ ಅವಕಾಶವಿಲ್ಲದೆ ಬೇಸರ ವ್ಯಕ್ತಪಡಿಸಿದ್ದ ಭಕ್ತಾದಿಗಳು ದರ್ಶನದಿಂದ ಸಂತೋಷ ವ್ಯಕ್ತಪಡಿಸಿದ್ದರು.

ಬ್ಯಾಂಕಲ್ಲಿ ಅಡವಿಟ್ಟಿದ್ದ ಸಾವಿರ ವರ್ಷ ಹಳೆಯ ಕೋಟಿ ರು.ಮೌಲ್ಯದ ಪಚ್ಚೆ ಲಿಂಗಕ್ಕೆ ಮುಕ್ತಿ ...

ಆದರೆ ಈ ಬಾರಿ ಕೊರೋನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರುವಂತಿಲ್ಲ. ಹಾಗಾಗಿ ಪಚ್ಚೆಲಿಂಗ ದರ್ಶನಕ್ಕೆ ಸಹ ಅವಕಾಶ ಕಲ್ಪಿಸಿಲ್ಲ. ಹೊರ ಊರುಗಳಿಂದ ಕೆಳದಿ ಮಠಕ್ಕೆ ಭಕ್ತಾದಿಗಳು ದಯವಿಟ್ಟು ಬರಬಾರದು ಎಂದು ಶ್ರೀಗಳು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.

PREV
click me!

Recommended Stories

ವಿದ್ಯಾರ್ಥಿನಿಯರ ಮೈಮುಟ್ಟಿ ಅಸಭ್ಯ ವರ್ತನೆ; ಪ್ರೌಢಶಾಲೆಗೆ ನುಗ್ಗಿ ಪ್ರಾಂಶುಪಾಲನಿಗೆ ಧರ್ಮದೇಟು ಕೊಟ್ಟ ಗ್ರಾಮಸ್ಥರು!
ಮೈಸೂರು ಏಕತಾ ಮಹಲ್‌ ವಿವಾದ, ಕೋರ್ಟ್ ಮೆಟ್ಟಲೇರಿದ ರಾಜಮಾತೆ ಪ್ರಮೋದಾದೇವಿ!