ಶರತ್ ಬಚ್ಚೇಗೌಡ - ಕಾಂಗ್ರೆಸ್ ಮೈತ್ರಿಗೆ ಆಯ್ತು ಗೆಲುವು : ಬಿಜೆಪಿಗೆ ತೀವ್ರ ಮುಖಭಂಗ

By Kannadaprabha News  |  First Published Oct 20, 2020, 2:05 PM IST

ಸ್ವಾಭಿಮಾನಿ ಪಕ್ಷದ ಮುಖಂಡ ಶರತ್ ಬಚ್ಚೇಗೌಡ ಕಾಂಗ್ರೆಸ್ ಮೈತ್ರಿಗೆ ಕೊಲೆಗೂ ಗೆಲುವು ಒಲಿದಿದೆ.


ಹೊಸಕೋಟೆ (ಅ.20):  ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಸ್ವಾಭಿಮಾನಿ ಹಾಗೂ ಕಾಂಗ್ರೆಸ್‌ ಮೈತ್ರಿ ಪಕ್ಷಕ್ಕೆ ಭರ್ಜರಿ ಗೆಲುವು ಲಭಿಸಿದ್ದು, ರಾಷ್ಟ್ರೀಯ ಪಕ್ಷವಾದ ಬಿಜೆಪಿ ಖಾತೆ ತೆರೆಯದೆ ತೀವ್ರ ಮುಖಭಂಗ ಅನುಭವಿಸುವಂತಾಗಿದೆ.

ಒಟ್ಟು 13 ಅಭ್ಯರ್ಥಿಗಳ ಪೈಕಿ ಕೆ. ಕೃಷ್ಣಮೂರ್ತಿ ಹಾಗೂ ಎಂ. ಭತ್ಯಪ್ಪ ಅವಿರೋಧವಾಗಿ ಆಯ್ಕೆಯಾದರೆ, ಉಳಿದ 11 ಸ್ಥಾನಗಳಿಗೆ ಚುನಾವಣೆ ನಡೆಯಿತು. ಸೂಲಿಬೆಲೆ ಹಾಗೂ ನಂದಗುಡಿ ಕ್ಷೇತ್ರದ ಎಚ್‌.ವಿ. ಆಂಜಿನಪ್ಪ 1100, ಆರ್‌.ರವೀಂದ್ರ 1077, ಪರಿಶಿಷ್ಟಪಂಗಡದ ಮೀಸಲು ಸ್ಥಾನದಲ್ಲಿ ನಾಗರಾಜ್‌ 1131 ಮತ, ಮಹಿಳಾ ಮೀಸಲು ಸ್ಥಾನದ ಸವಿತಾ 1174 ಮತ, ಹೊಸಕೋಟೆ ಟೌನ್‌ ಮತ್ತು ಕಸಬಾ ಹೋಬಳಿಯ ಎ.ಮಂಜುನಥ್‌ 1050, ಹನುಮಂತೇಗೌಡ 1026, ಪರಿಶಿಷ್ಟಜಾತಿ ಮೀಸಲು ಸ್ಥಾನ ಎನ್‌.ಸುರೇಶ 1057, ಹಿಂದುಳಿದ ವರ್ಗದ ಮೀಸಲು ಸ್ಥಾನ ಸಿ.ಮುನಿಯಪ್ಪ 1032 ಮತ, ಜಡಿಗೇನಹಳ್ಳಿ, ಅನುಗೊಂಡಹಳ್ಳಿ ಹೋಬಳಿ ಸಾಮಾನ್ಯ ಕ್ಷೇತ್ರದ ಎಚ್‌.ಕೆ.ರಮೇಶ್‌ 870, ಹಿಂದುಳಿದ ವರ್ಗ ಮೀಸಲು ಸ್ಥಾನ ಎಂ.ಬಾಬುರೆಡ್ಡಿ 802, ಮಹಿಳಾ ಮೀಸಲು ಸ್ಥಾನ ಪಿ.ರಾಣಿ 888 ಮತಗಳನ್ನು ಪಡೆದು ಜಯಭೇರಿ ಗಳಿಸಿದ್ದಾರೆ.

Latest Videos

undefined

ಶರತ್ ಬಚ್ಚೇಗೌಡ ಕಡೆಯಿಂದ ನಡೆಯಿತಾ ಅಕ್ರಮ : ಬಿಜೆಪಿಗರ ಭಾರಿ ಆಕ್ರೋಶ ..

ಗೆಲುವು ಸಾದಿಸಿದ ಎಲ್ಲ ವಿಜೇತರಿಗೆ ಚುನಾವಣಾಧಿಕಾರಿ ಮಂಜುನಾಥ್‌ ಸಿಂಗ್‌ ಪ್ರಮಾಣ ಪತ್ರಗಳನ್ನು ವಿತರಿಸಿದರು.

ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಂಘದ ಚುನಾವಣೆಯಲ್ಲಿ 11ಕ್ಕೆ 11 ಸ್ಥಾನಗಳನ್ನು ಸ್ವಾಭಿಮಾನಿ ಬೆಂಬಲಿತರಿಗೆ ಲಭಿಸಿದೆ. ನವರಾತ್ರಿ ಸಂಧರ್ಭದ ಈ ಗೆಲುವು ಹೊಸಕೋಟೆಯಲ್ಲಿ ಮುಂದಿನ ರಾಜಕೀಯ ಶಕೆಗೆ ಶುಭ ಸೂಚನೆ ಆಗಿದೆ. ಸ್ವಾಭಿಮಾನಿ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರ ಸಹಕಾರದಿಂದ ಗೆಲುವು ಸಾಧ್ಯವಾಗಿದೆ. ಟಿಎಪಿಸಿಎಂಎಸ್‌ ಅಭಿವೃದ್ಧಿಗೆ ಎಲ್ಲರೂ ಪ್ರಾಮಾಣಿಕವಾಗಿ ದುಡಿಯಲಿದ್ದು, ಮುಂದಿನ 5 ವರ್ಷಗಳಲ್ಲಿ ಸಾಕಷ್ಟುಅಭಿವೃದ್ಧಿ ಕಾಣಲಿದೆ.

ಶಾಸಕ ಶರತ್‌ ಬಚ್ಚೇಗೌಡ, ಶಾಸಕ ಶರತ್‌ ಬಚ್ಚೇಗೌಡ

click me!