ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಸಾಹಸಕ್ಕೆ ಕೈಹಾಕಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ನಾಯಕರಿಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ರಾಮನಗರ (ಜು.11): ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಸಾಹಸಕ್ಕೆ ಕೈಹಾಕಿದರೆ ಮುಂದಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ನಾಯಕರಿಗೆ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದರು.
ರಾಮನಗರ ಹೆಸರು ಬದಲಾವಣೆ ವಿಚಾರವಾಗಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಸರು ಬದಲಾವಣೆ ಆದ್ರೆ ಜಮೀನಿನ ಮೌಲ್ಯ, ಆಸ್ತಿ ಹೆಚ್ಚಾಗುತ್ತೆ ಅಂತಾರೆ. ರಾಮನಗರ ಅಭಿವೃದ್ಧಿ ಆಗಿಲ್ಲ ಅನ್ನೋರು ಬಂದು ಇಲ್ಲಿನ ಕಟ್ಟಡಗಳನ್ನ ನೋಡಲಿ. ಜಿಲ್ಲೆಯನ್ನಾಗಿ ಘೋಷಣೆ ಮಾಡಿದ ಮೇಲೆ ಆಗಿರುವ ಅಭವೃದ್ಧಿ ನೋಡಲಿ. ಅನಿತಾ ಕುಮಾರಸ್ವಾಮಿ ಶಾಸಕರಾದಾಗ ಎಷ್ಟು ಸೇತುವೆ ನಿರ್ಮಾಣ ಆಗಿದೆ ಗೊತ್ತಾ? ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡ ಶ್ರಮ ಇದೆ. ಇಂದು ಅಭಿವೃದ್ಧಿ ಬಗ್ಗೆ ಮಾತಾಡೋರು ಇಷ್ಟು ದಿನ ಎಲ್ಲಿದ್ರು? ಎಂದು ವಾಗ್ದಾಳಿ ನಡೆಸಿದರು.
undefined
'ರಾಮ'ನ ಹೆಸರು ಇರೊದಕ್ಕೇ ರಾಮನಗರ ಹೆಸರು ಬದಲಾವಣೆ? ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಪಾಪ ನಮ್ಮ ಕೂಪನ್ ಶಾಸಕರು ನನ್ನ ಬಗ್ಗೆ ಮಾತನಾಡಿದ್ದಾರೆ. ಕ್ಷೇತ್ರಕ್ಕೆ ನಿಮ್ಮ ಕಡೆಯಿಂದ ಎಷ್ಟು ಅನುದಾನ ಕೊಟ್ಟಿದ್ದೀರಿ? ಎಷ್ಟು ಸೇತುವೆ ನಿರ್ಮಾಣ ಮಾಡಿದ್ದೀರಿ? ಎಷ್ಟು ರಸ್ತೆ ಗುಂಡಿ ಮುಚ್ಚಿಸಿದ್ದೀರಿ? ಜನರಿಗೆ ಕುಡಿಯುವಕ್ಕೆ ನೀರನ್ನಾದರೂ ಕೊಟ್ಟಿದ್ದೀರ? ಶಾಸಕ ಇಕ್ಬಾಲ್ ಹುಸೇನ್‌ಗೆ ತಿರುಗೇಟು ನೀಡಿದರು.
ರಾಮನಗರಕ್ಕೆ ಅದರದ್ದೇ ಆದ ಅಸ್ಮಿತೆ ಇದೆ. ರಾಮನ ಬಗ್ಗೆ ಗೌರವ ಇದೆ, ಪ್ರೀತಿ ಇದೆ ಅಂತಾ ಕೂಪನ್ ಶಾಸಕರು ಹೇಳಿದ್ದಾರೆ. ರಾಮಮಂದಿರ ನಿರ್ಮಾಣ ಆದಾಗ ಕಾಂಗ್ರೆಸ್ ನವರು ಯಾಕೆ ವಿರೋಧ ಮಾಡಿದ್ರು? ನಿಮ್ಮ ರಾಷ್ಟ್ರೀಯ ನಾಯಕರು ಒಂದು ಸಮುದಾಯದ ಓಲೈಕೆ ಮಾಡಲು ಹಿಂದೂಗಳಿಗೆ ಅವಮಾನ ಮಾಡ್ತಿದ್ದಾರೆ ಕೇಂದ್ರ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.
ಜೆಡಿಎಸ್ ಪಕ್ಷದ ಚುಕ್ಕಾಣಿ ಪರೋಕ್ಷವಾಗಿ ನಿಖಿಲ್‌ಗೆ?: ಸದ್ಯಕ್ಕೆ ರಾಜ್ಯಾಧ್ಯಕ್ಷ HDK ಬದಲಾವಣೆ ಇಲ್ಲ
ಒಂದು ವೇಳೆ ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಮಾಡಿದರೆ ಮುಂದೊಂದು ದಿನ ತಾಲೂಕಿಗೂ ರಾಮನಗರ ಹೆಸರು ತೆಗೆದು ಇನ್ನೊಂದು ಹೆಸರು ಸೇರಿಸುವ ಆತಂಕ ಇದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹೆಸರು ಬದಲಾವಣೆ ಮಾಡುವ ಸಾಹಸಕ್ಕೆ ಕೈ ಹಾಕಿದ್ರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡ್ತೀವಿ. ಈಗಾಗಲೇ ಸಾಕಷ್ಟು ಸಂಘಟನೆಗಳು ಈ ಬಗ್ಗೆ ಚರ್ಚೆ ಮಾಡಿವೆ. ದೊಡ್ಡ ಮಟ್ಟದಲ್ಲಿ ಶಾಂತಿಯುತ ಹೋರಾಟ ನಡೆಯಲಿದೆ. ಹೆಸರು ಬದಲಾವಣೆ ಸಾಹಸಕ್ಕೆ ಕೈಹಾಕಬೇಡಿ ಎಂದು ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.