ಯುವಕರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಬಟ್ಟೆಗಳನ್ನು ಕೊಡುವಂತೆ ಅಂಗಲಾಚಿದರು. ಪೊಲೀಸರು ಸಾಕಷ್ಟು ಬುದ್ದಿವಾದ ಮತ್ತು ಅಪಾಯದ ಕುರಿತು ವಿವರಿಸಿ ಎಚ್ಚರಿಕೆ ನೀಡಿ ನಂತರ ಬಟ್ಟೆಗಳನ್ನು ಹಿಂತಿರುಗಿಸಿದರು.
ಬೆಳ್ತಂಗಡಿ(ಜು.11): ತುಂಬಿ ಹರಿಯುತ್ತಿದ್ದ ಅಪಾಯಕಾರಿ ತೊರೆಯೊಂದಕ್ಕೆ ಇಳಿದು ಸ್ನಾನ ಮಾಡುತ್ತಿದ್ದವರ ಬಟ್ಟೆಗಳನ್ನು ಪೊಲೀಸರು ಹೊತ್ತೊಯ್ದು ಬುದ್ದಿ ಕಲಿಸಿದ ಘಟನೆ ಮಂಗಳವಾರ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ. ಪೋಲಿಸರ ಈ ನಡೆ ಸಾರ್ವಜನಿಕರ ಪ್ರಶಂಸೆಗೊಳಗಾಗಿದೆ.
ಅಪಾಯಕಾರಿ ತೊರೆಯೊಂದಕ್ಕೆ ಇಳಿದು ಸ್ನಾನ ಮಾಡುತ್ತಾ ಕಲ್ಲು ಬಂಡೆ ಏರುತ್ತಿದ್ದ ತಂಡವನ್ನು ಗಮನಿಸಿದ ಚಿಕ್ಕಮಗಳೂರು ವಿಭಾಗದ ಪೊಲೀಸ್ ಪ್ಯಾಟ್ರೋಲ್ ಸಿಬ್ಬಂದಿ ಯುವಕರ ಬಟ್ಟೆಗಳನ್ನು ಹೊತ್ತೊಯ್ದು ತಮ್ಮ ವಾಹನದಲ್ಲಿ ಇರಿಸಿ ತಂಡವನ್ನು ಪೇಚಿಗೆ ಸಿಲುಕಿಸಿದರು.
undefined
ಚಾರ್ಮಾಡಿಘಾಟಿ ರಸ್ತೆಯುದ್ಧಕ್ಕೂ ಧುಮ್ಮಿಕ್ಕಿ ಹರಿಯೋ ಜಲಪಾತಗಳು ಹೊಸ ಲೋಕವನ್ನೇ ಸೃಷ್ಟಿಸಿದೆ
ಈ ವೇಳೆ ಯುವಕರು ಪೊಲೀಸರ ಜತೆ ವಾಗ್ವಾದ ನಡೆಸಿದ್ದು, ಇದಕ್ಕೆ ಬಗ್ಗದ ಪೊಲೀಸರು ಯುವಕರನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕೆ ಯುವಕರಿಗೆ ತಮ್ಮ ತಪ್ಪಿನ ಅರಿವಾಗಿ ಕ್ಷಮೆಯಾಚಿಸಿ ಬಟ್ಟೆಗಳನ್ನು ಕೊಡುವಂತೆ ಅಂಗಲಾಚಿದರು. ಪೊಲೀಸರು ಸಾಕಷ್ಟು ಬುದ್ದಿವಾದ ಮತ್ತು ಅಪಾಯದ ಕುರಿತು ವಿವರಿಸಿ ಎಚ್ಚರಿಕೆ ನೀಡಿ ನಂತರ ಬಟ್ಟೆಗಳನ್ನು ಹಿಂತಿರುಗಿಸಿದರು.