ಸುಮಲತಾಗೆ ಈಗ ನಿಖಿಲ್‌ ಕುಮಾರಸ್ವಾಮಿ ಸಡ್ಡು

Kannadaprabha News   | Asianet News
Published : Jul 08, 2021, 08:16 AM IST
ಸುಮಲತಾಗೆ ಈಗ ನಿಖಿಲ್‌ ಕುಮಾರಸ್ವಾಮಿ ಸಡ್ಡು

ಸಾರಾಂಶ

 ನಮ್ಮ ಸಂಸ್ಕೃತಿಯನ್ನು ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ ಹಾಗಾಗಿ ಬೇರೆಯವರಿಂದ ನಾವು ಏನನ್ನೂ ಕಲಿಯಬೇಕಿಲ್ಲ ಈಗ ಸುಮಲತಾಗೆ ನಿಖಿಲ್ ಕುಮಾರಸ್ವಾಮಿಯೂ ಸಡ್ಡು

ರಾಮನಗರ (ಜು.08): ನಮ್ಮ ಸಂಸ್ಕೃತಿಯನ್ನು ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಬೇರೆಯವರಿಂದ ನಾವು ಏನನ್ನೂ ಕಲಿಯಬೇಕಿಲ್ಲ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾ​ಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯ ಸಂಸದೆ ಸುಮಲತಾ ವಿರುದ್ಧ ಹರಿಹಾಯ್ದಿದ್ದಾರೆ.

ಇಲ್ಲಿನ ಜಾನಪದ ಲೋಕದಲ್ಲಿ ಮಾತ​ನಾ​ಡಿದ ಅವರು, ಎರಡು ದಿನಗಳಿಂದ ಮಾಧ್ಯಮಗಳಲ್ಲಿ ನಾನು ಅವರ ಹೇಳಿಕೆ ಮತ್ತು ಮಾತುಗಳನ್ನು ಗಮನಿಸುತ್ತಿದ್ದೇನೆ. ಅವರ ಮಾತುಗಳಿಂದ ನಾವು ಅಥವಾ ನಮ್ಮ ಕುಟುಂಬ ಏನನ್ನೂ ಕಲಿಯುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಮಲತಾರನ್ನು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದ ಎಚ್‌ಡಿಕೆ .

ಈ ಸುದ್ದಿಯನ್ನೇ ಇಟ್ಟುಕೊಂಡು ಮುಂದಿನ ಲೋಕಸಭಾ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುವ ರೀತಿ ಕಾಣುತ್ತಿದ್ದು, ಇದನ್ನೇ ಒಂದು ಅಸ್ತ್ರವನ್ನಾಗಿಸಿಕೊಂಡಿದ್ದಾರೆ ಎಂದರು.

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!