ರಾಮನಗರದ ಜಾಲಪದ ಲೋಕದಲ್ಲಿ ಅದ್ಧೂರಿ ಸೆಟ್ ನಡುವೆ ನಡೆಯಬೇಕಿದ್ದ ನಿಖಿಲ್ ಕುಮಾರಸ್ವಾಮಿ ವಿವಾಹ ಸ್ಥಳ ಬದಲಾವಣೆಯಾಗಿದೆ. ರಾಮನಗರದಲ್ಲಿ ನಡೆಸಲಾಗಿದ್ದ ಸಿದ್ಧತೆಯನ್ನು ನಿಲ್ಲಿಸಲಾಗಿದೆ.
ರಾಮನಗರ [ಮಾ.18]: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿವಾಹಕ್ಕೆ ರಾಮನಗರದಲ್ಲಿ ನಡೆದಿದ್ದ ಸಿದ್ಧತೆಗೆ ಫುಲ್ ಸ್ಟಾಪ್ ಬಿದ್ದಿದೆ.
ವಿಶ್ವದೆಲ್ಲೆಡೆ ತಲ್ಲಣ ಮೂಡಿಸಿರುವ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಏಪ್ರಿಲ್ 17 ರಂದು ರಾಮನಗರದಲ್ಲಿ ನಡೆಸಲು ನಿಗದಿಯಾಗಿದ್ದ ವಿವಾಹದ ಸ್ಥಳ ಬದಲಾವಣೆ ಮಾಡುವುದು ಬಹುತೇಕ ಖಚಿತವಾಗಿದೆ.
ರಾಮನಗರ - ಚನ್ನಪಟ್ಟಣ ಮಧ್ಯ ಭಾಗದ ಜಾನಪದ ಲೋಕದಲ್ಲಿ ಮದುವೆ ಮಾಡಲು ನಿಶ್ಚಯಿಸಲಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಆಶಯದಂತೆ ಸಿದ್ಧತೆಗಳು ನಡೆದಿದ್ದವು.
ನಿಖಿಲ್ ಮದುವೆ ಪ್ಲಾನ್ ಫುಲ್ ಚೇಂಜ್ : ಆಪ್ತರಿಗಷ್ಟೇ ಆಮಂತ್ರಣ?...
ಆದರೆ ಇದೀಗ ಕಳೆದ ಒಂದು ತಿಂಗಳಿನಿಂದ ನಡೆಸಿದ್ದ ಸಿದ್ಧತೆಯನ್ನು ನಿಲ್ಲಿಸಲಾಗಿದೆ. ಸಾಕಷ್ಟು ದಿನಗಳಿಂದ ನಡೆಸಿದ್ದ ಚರ್ಚೆಯ ಬಳಿಕ ಇದೀಗ ಸ್ಥಳ ಬದಲಾವಣೆ ಬಹುತೇಕ ಖಚಿತವಾಗಿದೆ.
ಮಗನ ಮದುವೆಗೆ ಯಾವ ಗಿಫ್ಟೂ ಇಲ್ಲ : ಸಿಂಪಲ್ ಆಗಿ ಮಾಡ್ತೀವಿ ಅಷ್ಟೇ
ಮದುವೆಗೆಂದು ಹಾಕಿದ್ದ ಶೆಟರ್ಗಳನ್ನು ಖಾಲಿ ಮಾಡಲಾಗುತ್ತಿದೆ. ಇದೀಗ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮದುವೆ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಅಂದೇ ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ವಿವಾಹ ನಡೆಯಲಿದೆ.
ವಿಶ್ವದಾದ್ಯಂತ ಕೊರೋನಾ ವೈರಸ್ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಸಾವಿರಾರು ಜನರನ್ನು ಬಲಿ ಪಡೆದಿದೆ. ಲಕ್ಷಾಂತರ ಜನರು ಸೋಂಕಿತರಾಗಿದ್ದಾರೆ. ಮಾರಕ ವೈರಸ್ ಭೀತಿ ನಿಖಿಲ್ ಮದುವೆಗೂ ತಟ್ಟಿದೆ.