ಕೊರೋನಾ ಭೀತಿ: 100ಕ್ಕೂ ಹೆಚ್ಚು ಹಂದಿಗಳ ಸಾವು, ಕಾರಣ?

Published : Mar 18, 2020, 02:52 PM IST
ಕೊರೋನಾ ಭೀತಿ: 100ಕ್ಕೂ ಹೆಚ್ಚು ಹಂದಿಗಳ ಸಾವು, ಕಾರಣ?

ಸಾರಾಂಶ

100ಕ್ಕೂ ಅಧಿಕ ಹಂದಿಗಳು ಸಾವು| ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ನಂದಗಾಂವ ಗ್ರಾಮದಲ್ಲಿ ನಡೆದ ಘಟನೆ| ಪ್ರತಿನಿತ್ಯ ಸಾಯುತ್ತಿರುವ ಹಂದಿಗಳು| 

ಹುಮನಾಬಾದ(ಮಾ.18): ಕೊರೋನಾ, ಹಕ್ಕಿಜ್ವರ ಆತಂಕದ ನಡುವೆಯೇ ಬೀದರ್‌ ಜಿಲ್ಲೆಯ ಹುಮನಾಬಾದ್‌ ತಾಲೂಕಿನ ನಂದಗಾಂವ ಗ್ರಾಮದಲ್ಲಿ 100ಕ್ಕೂ ಅಧಿಕ ಹಂದಿಗಳು ಮೃತಪಟ್ಟಿದ್ದು, ಈ ಭಾಗದ ಜನರ ತಲ್ಲಣಗೊಳಿಸಿದೆ. 

ಕಳೆದ 3-4 ದಿನಗಳಿಂದ ಗ್ರಾಮದಲ್ಲಿ ಹಂದಿಗಳು ಪ್ರತಿನಿತ್ಯ ಸಾಯುತ್ತಿದ್ದು, ಸದ್ಯ ಗ್ರಾಮದ ಹೊರ ಭಾಗದಲ್ಲಿ ಹಳ್ಳ ತೆಗೆದು ಹಂದಿಗಳನ್ನು ಹೂಳಲಾಗುತ್ತಿದೆ. 

ಕೊರೋನಾ ಕಾಟ ಅಷ್ಟಿಷ್ಟಲ್ಲ: ಬರೀ ಕೆಮ್ಮಿದ್ದಕ್ಕೆ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಸಾಗಿಸಿದ ಜನ!

ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಪಿಡಿಒ ಸೇರಿದಂತೆ ಇತರ ಅಧಿಕಾರಿಗಳು ಗ್ರಾಮದಲ್ಲಿನ ಹಂದಿಗಳನ್ನು ಬೇರೆಡೆ ಸಾಗಿಸುವಂತೆ ಮಾಲೀಕರ ಮನವೊಲಿಸುತ್ತಿದ್ದು, ಕೂಡಲೇ ಮೇಲಾಧಿಕಾರಿಗಳು ಈ ಸಂಬಂಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
 

PREV
click me!

Recommended Stories

ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
ಮೃತದೇಹದ ಬಟ್ಟೆ ಮೇಲಿದ್ದ ಟ್ಯಾಗ್ ನೀಡಿತು ರೋಚಕ ಸುಳಿವು, ಒಂದೇ ವಾರಕ್ಕೆ ಕೊಲೆಯ ರಹಸ್ಯ ಬೇಧಿಸಿದ ಪೊಲೀಸರು