ಜೀವಬೆದರಿಕೆ ಪತ್ರ: ನಿಜಗುಣಾನಂದ ಸ್ವಾಮೀಜಿ ಪ್ರತಿಕ್ರಿಯೆ?

By Kannadaprabha News  |  First Published Jan 31, 2020, 10:29 AM IST

ಬೆದರಿಕೆಗೆ ಹೆದರುವ ಜಾಯಮಾನ ನನ್ನದಲ್ಲ, ಪತ್ರ ಬರೆದ ವ್ಯಕ್ತಿಗೆ ಬಸವಾದಿ ಶರಣರು ಸದ್ಬುದ್ದಿ ನೀಡಲಿ: ನಿಜಗುಣಾನಂದ ಸ್ವಾಮೀಜಿ| ದರಿಕೆ ಪತ್ರದಿಂದ ನಾನು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ|


ಜೇವರ್ಗಿ[ಜ.31]: ಶರಣರ ತತ್ವ ಸಿದ್ಧಾಂತದ ಮೇಲೆ ಬದುಕುತ್ತಿರುವ ನಾವು ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಬಗ್ಗುವುದಿಲ್ಲ ಎಂದು ಮುಂಡರಗಿ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮೀಜಿ ತಮಗೆ ಬಂದಿರುವ ಬೆದರಿಕೆ ಪತ್ರದ ಕುರಿತು ಪ್ರತಿಕ್ರಿಯಿಸಿದ್ದಾರೆ. 

ಎಡಪಂಥೀಯರಿಗೆ ಜೀವಬೆದರಿಕೆ: ಬಹುಭಾಷಾ ನಟ ಪ್ರಕಾಶ್ ರೈ ಪ್ರತಿಕ್ರಿಯೆ

Tap to resize

Latest Videos

ಜೇವರ್ಗಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ದರ್ಶನ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿ, ಜ.24ರಂದು ಬಂದ ಬೆದರಿಕೆ ಪತ್ರದಿಂದ ನಾನು ಆತ್ಮಸ್ಥೈರ್ಯ ಕಳೆದುಕೊಂಡಿಲ್ಲ. ಬೆದರಿಕೆ ಪತ್ರದಲ್ಲಿ ತಮ್ಮದೊಂದೆ ಹೆಸರಿದ್ದರೇ ಸರ್ಕಾರಕ್ಕೆ ತಿಳಿಸುತ್ತಿರಲಿಲ್ಲ. ಆದರೆ ತಮ್ಮೊಂದಿಗೆ 15 ಜನರ ಹೆಸರು ನಮೂದಿಸಿರುವುದರಿಂದ ಸರ್ಕಾರಕ್ಕೆ ತಿಳಿಸುವ ಅನಿವಾರ್ಯತೆ ಎದುರಾಯಿತು. ಯಾವುದೇ ತರಹದ ಬೆದರಿಕೆಗಳಿಗೆ ಹೆದರುವ ಜಾಯಮಾನ ನನ್ನದಲ್ಲ, ತಿಳಿದೋ, ತಿಳಿಯದೆಯೋ ವ್ಯಕ್ತಿಯೊಬ್ಬ ಬೆದರಿಕೆ ಪತ್ರ ಬರೆದಿರಬಹುದು. ಅವನಿಗೆ ಬಸವಾದಿ ಶರಣರು ಸದ್ಭುದ್ದಿ ನೀಡಲಿ ಎಂದು ಸ್ವಾಮೀಜಿ ಹೇಳಿದ್ದಾರೆ. 

ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ!

ತಮಗೆ ಬೆದರಿಕೆ ಪತ್ರ ಬಂದ ಹಿನ್ನಲೆ ಕಳೆದ ರಾತ್ರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತಮಗೆ ಸಂಪರ್ಕಿಸಿ ಯೋಗಕ್ಷೇಮ ವಿಚಾರಿಸಿದ್ದಾರೆ. ಜೇವರ್ಗಿ ಪೊಲೀಸರು ತಮಗೆ ಸೂಕ್ತ ಭದ್ರತೆ ಒದಗಿಸಿದ್ದು, ಆಯುಷ್ಯ ತೀರದೇ ಮರಣವಿಲ್ಲ ಎಂದು ಬಸವಾದಿ ಶರಣರು ಪ್ರತಿಪಾದಿಸಿದಂತೆ ನಾನು ಬದುಕಿನ ಕೊನೆಯುಸಿರುವರೆಗೂ ಬಸವಾದಿ ಶರಣರ ತತ್ವ ಸಿದ್ಧಾಂತ ಜನರಿಗೆ ತಿಳಿಸುವ ಮೂಲಕ ಸಮಾಜದಲ್ಲಿ ಬೇರೂರಿರುವ ಅಜ್ಞಾನವನ್ನ ಹೋಗಲಾಡಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. 

click me!