ನಾ ಸತ್ತ ಸಂಗತಿ ನನ್ನ ತಂದೆಗೆ ತಿಳಿಸಿ: ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

Kannadaprabha News   | Asianet News
Published : Jan 31, 2020, 10:08 AM IST
ನಾ ಸತ್ತ ಸಂಗತಿ ನನ್ನ ತಂದೆಗೆ ತಿಳಿಸಿ:  ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಸಾರಾಂಶ

ಡೆತ್‌ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ| ವಿಜಯಪುರದ ಖಾಸಗಿ ಹೋಟೆಲ್ ವಸತಿ ಗೃಹದಲ್ಲಿ ನಡೆದ ಘಟನೆ|ಬೆಲ್ಟ್‌ನಿಂದ ಆತ್ಮಹತ್ಯೆಗೆ ಶರಣಾದ ಯುವಕ|

ವಿಜಯಪುರ[ಜ.31]: ಯುವಕನೊಬ್ಬನು ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಖಾಸಗಿ ಹೋಟೆಲ್ ವಸತಿ ಗೃಹದಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಚಿಕ್ಕರಕೊಪ್ಪ ಗ್ರಾಮದ ಗಿರೀಶ (28) ಎಂಬಾತ ವಸತಿ ಗೃಹದಲ್ಲಿ ಬೆಲ್ಟ್‌ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 

ಕಳೆದ 2-3  ದಿನಗಳಿಂದ ಗಿರೀಶ ಖಾಸಗಿ ಹೋಟೆಲ್ ವಸತಿ ಗೃಹದಲ್ಲಿ ತಂಗಿದ್ದ. ಗುರುವಾರ ಬೆಳಗ್ಗೆ ಎದ್ದು ಕೆಳಗಡೆ ಹೋಟೆಲ್‌ನಲ್ಲಿ ಚಹಾ ಸೇವಿಸಿ, ಪತ್ರಿಕೆಗಳನ್ನು ಓದಿ ರೂಂಗೆ ತೆರಳಿದ್ದ. ಬಳಿಕ ರೂಂ ಬಾಗಿಲು ಭದ್ರಪಡಿಸಿ ಕೊಂಡು ಬೆಲ್ಟ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗಾಂಧಿ ವೃತ್ತ ಠಾಣೆ ಪೊಲೀಸರು ತಿಳಿಸಿದ್ದಾರೆ. 
ನನ್ನ ಸಾವಿಗೆ ನಾನೇ ಕಾರಣನಾಗಿದ್ದೇನೆ. ನಾ ಸತ್ತ ಸಂಗತಿಯನ್ನು ನನ್ನ ತಂದೆಯವರಿಗೆ ತಿಳಿಸಿ ಎಂದು ತಂದೆಯವರ ಮೊಬೈಲ್ ನಂಬರ್ ಬರೆದಿರುವ ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಸತಿ ಗೃಹದಲ್ಲಿ ಕೇವಲ ಗಿರೀಶ ಎಂದಷ್ಟೇ ಹೆಸರು ಬರೆಸಿದ್ದರಿಂದಾಗಿ ಆತನ ಬಗ್ಗೆ ಹೆಚ್ಚಿನ ವಿವರ ಲಭ್ಯವಾಗಿಲ್ಲ ಎಂದು ಪೊಲೀಸ್‌ರು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಹೋಟೆಲ್‌ನಲ್ಲಿ ಚಹಾ ಸೇವಿಸಿ, ಪತ್ರಿಕೆಗಳನ್ನು ಓದಿ ರೂಂಗೆ ತೆರಳಿದ್ದ ಬಳಿಕ ರೂಂ ಬಾಗಿಲು ಭದ್ರಪಡಿಸಿಕೊಂಡು ಬೆಲ್ಟ್‌ನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 
 

PREV
click me!

Recommended Stories

ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್