ರಾತ್ರಿ ಅಷ್ಟೇ ಕೊರೋನಾ ಅಂಟತ್ತೆ ಅಂತ ಯಾವ ವಿಜ್ಞಾನಿ ಹೇಳಿದಾನೋ?:ಸರ್ಕಾರದ ವಿರುದ್ಧ ಡಿಕೆಶಿ ಕಿಡಿ

By Suvarna NewsFirst Published Apr 10, 2021, 3:38 PM IST
Highlights

ರಾಜಕೀಯ ಸಭೆ ಹೋಗಿ ಎಲ್ಲಿಯೇ ಹೋಗಲಿ ಜನ ಇರ್ತಾರೆ| ರಾಜ್ಯ ಸರ್ಕಾರ ಮಾನಸಿಕವಾಗಿ ಜನರನ್ನು ಕುಗ್ಗುಸುತ್ತಿದೆ| ರಾತ್ರಿ ಪ್ರಯಾಣ ನಿಲ್ಲಿಸಿಬಿಡ್ತೀರಾ?| ಬೆಳಕಿದ್ದಾಗ ಕೊರೋನಾ ಓಡಾಡಲ್ವ?| ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಅವೈಜ್ಞಾನಿಕ| ಈ ಸರ್ಕಾರವನ್ನು ಕಿತ್ತೊಗೆಯಬೇಕು: ಡಿ‌.ಕೆ.ಶಿವಕುಮಾರ್| 

ಬೆಳಗಾವಿ(ಏ.10): ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ಇಂದಿನಿಂದ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಹಗಲು ಕೊರೋನಾ ಅಂಟಲ್ಲ ರಾತ್ರಿ ಅಂಟತ್ತೆ ಅಂತ ಯಾವ ವಿಜ್ಞಾನಿ ಹೇಳಿದಾನೋ? ಎಂದು ಹೇಳುವ ಮೂಲಕ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ‌.ಕೆ.ಶಿವಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಇಂದು(ಶನಿವಾರ) ಜಿಲ್ಲೆಯ ಬೈಲಹೊಂಗಲದಲ್ಲಿ ನಡೆಯುತ್ತಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜಕೀಯ ಸಭೆ ಹೋಗಿ ಎಲ್ಲಿಯೇ ಹೋಗಲಿ ಜನ ಇರ್ತಾರೆ. ರಾಜ್ಯ ಸರ್ಕಾರ ಮಾನಸಿಕವಾಗಿ ಜನರನ್ನು ಕುಗ್ಗುಸುತ್ತಿದೆ. ರಾತ್ರಿ ಪ್ರಯಾಣ ನಿಲ್ಲಿಸಿಬಿಡ್ತೀರಾ? ಬೆಳಕಿದ್ದಾಗ ಕೊರೋನಾ ಓಡಾಡಲ್ವ?, ನೈಟ್ ಕರ್ಫ್ಯೂ ಜಾರಿ ಮಾಡಿದ್ದು ಅವೈಜ್ಞಾನಿಕವಾಗಿದೆ. ಈ ಸರ್ಕಾರವನ್ನು ಕಿತ್ತೊಗೆಯಬೇಕು ಎಂದ ಹೇಳಿದ್ದಾರೆ.

ಬೆಳಗಾವಿ ಬೈಎಲೆಕ್ಷನ್‌: ಜಾರಕಿಹೊಳಿ‌ ಗೆಲುವು ಖಚಿತ ಎಂದ ಎಂ.ಬಿ.ಪಾಟೀಲ್‌

ಸಾರಿಗೆ ಸಿಬ್ಬಂದಿ ಬೀದಿ ಪಾಲಾಗ್ತಾರೆ ಎಂಬ ಸಚಿವ ಲಕ್ಷ್ಮಣ ಸವದಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಲಕ್ಷಣ ಸವದಿ ಲೀಡರ್ ಶಿಪ್‌ನಲ್ಲಿ ಹೇಗೆ ನಡೀತಿದೆ ಅಂತಾ ಗೊತ್ತು, ಅವರು ತಗೆದುಕೊಂಡ ನಿರ್ಧರಗಳೆಲ್ಲವೂ ರಿವರ್ಸ್ ಹೊಡೆದಿವೆ ಎಂದು ತಿಳಿಸಿದ್ದಾರೆ.

ಸತೀಶ ಜಾರಕಿಹೊಳಿ ಹಿಂದೂ ಸಂಸ್ಕೃತಿ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕ್ಯಾಂಡಿಡೇಟ್ ಮೂಢನಂಬಿಕೆ ಬೇಡ ಅಂತಾರೆ, ಸತೀಶ್ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ತತ್ವ ಇದೆ, ನೀತಿ ಇದೆ. ಅರುಣ್ ಸಿಂಗ್‌ಗೆ ತಮ್ಮ ಪಕ್ಷದ ಅಭ್ಯರ್ಥಿ ಭಯ ಬಂದಿದೆ. ಆ ಭಯದಿಂದಲೇ ಅರುಣ್ ಸಿಂಗ್ ಹೀಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
 

click me!