ಕರ್ನಾಟಕವನ್ನ ಕಾಂಗ್ರೆಸ್ ಮುಕ್ತ ಮಾಡುತ್ತೇವೆ: ಸಚಿವ ರಾಮುಲು

By Suvarna NewsFirst Published Apr 10, 2021, 3:16 PM IST
Highlights

ನಮ್ಮದು 30 ಪರ್ಸೆಂಟ್ ಸರ್ಕಾರವಲ್ಲ. ನಿಮ್ಮದು 10 ಪರ್ಸೆಂಟ್ ಸರ್ಕಾರವಾಗಿತ್ತು| ರೈತರ ಶಾಪದಿಂದಲೇ ಕಾಂಗ್ರೆಸ್ ಸೋಲು ಅನುಭವಿಸಿದೆ| ಹಿಂದಿನ ಮೈತ್ರಿ ಸರ್ಕಾರ ಐದು ಜಿಲ್ಲೆಗೆ ಸೀಮಿತ ಸರ್ಕಾರವಾಗಿತ್ತು: ಸಚಿವ ರಾಮುಲು|

ರಾಯಚೂರು(ಏ.10): ಬಿಜೆಪಿ ಅಭ್ಯರ್ಥಿ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅಪಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಗೆ ಬರುಲು ಪ್ರತಾಪಗೌಡ 40 ಕೋಟಿ ಡೀಲ್ ಆಗಿದ್ದಾರೆ ಎಂದು ಹೇಳಿದ್ದಾರೆ. ಹಾಗಾದ್ರೆ ಜನತಾದಳ ಬಿಟ್ಟು ಕಾಂಗ್ರೆಸ್‌ಗೆ ಹೋದಾಗ ನೀವು ಎಷ್ಟು ಕೋಟಿಗೆ ಡೀಲ್ ಆಗಿದ್ರಿ, ಅದನ್ನ ರಾಜ್ಯದ ಜನತೆ ಮುಂದಿಡಿ, ನೀವು ಡೀಲ್‌ನಲ್ಲಿ ಬಹಳ ಎಕ್ಸಪರ್ಟ್ ಇದ್ದೀರಿ ಎಂದು ಸಿದ್ದರಾಮಯಯ್ಯ ವಿರುದ್ಧ ಕೃಷಿ ಸಚಿವ ಬಿ ಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ.

ಇಂದು(ಶನಿವಾರ) ಜಿಲ್ಲೆಯ ಮಸ್ಕಿ ತಾಲೂಕಿನ ತುರ್ವಿಹಾಳ ಪಟ್ಟಣದಲ್ಲಿ ನಡೆಯುತ್ತಿರುವ ಬಿಜೆಪಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದ ಜನ 15 ಜನರಲ್ಲಿ 12 ಜನರನ್ನ ವಿಧಾನಸಭೆಗೆ ಕಳುಹಿಸಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ಬಿ.ವೈ.ವಿಜಯೇಂದ್ರ ಅವರ ಉನ್ನತಿಯನ್ನು ಸಹಿಸಿಕೊಳ್ಳಲಿ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಬೈಎಲೆಕ್ಷನ್‌ ಬ್ಯಾಟಲ್‌: ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಅಡ್ರೆಸ್ ಇರೋದಿಲ್ಲ, ಬಿಎಸ್‌ವೈ

ಕಾಂಗ್ರೆಸ್‌ಗೆ ನಡುಕ ಶುರು 

ಈಗ ಕಾಂಗ್ರೆಸ್‌ನವರಿಗೆ ನಡುಕ ಉಂಟಾಗಿದೆ. ಕರ್ನಾಟಕವನ್ನ ಕಾಂಗ್ರೆಸ್ ಮುಕ್ತ ಮಾಡುತ್ತೇವೆ. ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದರೂ ಅವರು ಮಸ್ಕಿಗೆ ಬಂದು ಕುಳಿತಿದ್ದಾರೆ. ಹಿಂದಿನ ಮೈತ್ರಿ ಸರ್ಕಾರ ಐದು ಜಿಲ್ಲೆಗೆ ಸೀಮಿತ ಸರ್ಕಾರವಾಗಿತ್ತು. 5A ಕಾಲುವೆ ಬಗ್ಗೆ ಮಾತನಾಡುವ ಕಾಂಗ್ರೆಸ್‌ನವರು ರಾಜಕೀಯ ಮಾಡುತ್ತಿದ್ದಾರೆ.  ಪ್ರತಾಪಗೌಡ ಗೆದ್ದರೆ ಮತ್ತೊಮ್ಮೆ ಪರಿಶೀಲಿ ಕಾಲುವೆಗೆ ಮಂಜೂರಾತಿ ಕೊಡಿಸುತ್ತೇವೆ. ನಮ್ಮದು 30 ಪರ್ಸೆಂಟ್ ಸರ್ಕಾರವಲ್ಲ. ನಿಮ್ಮದು 10 ಪರ್ಸೆಂಟ್ ಸರ್ಕಾರವಾಗಿತ್ತು. ಡಿ.ಕೆ.ಶಿವಕುಮಾರ ಮಗ್ಗಲು‌ ಕೂಡಿಸಿಕೊಂಡು ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ರೈತರ ಶಾಪದಿಂದಲೇ ಕಾಂಗ್ರೆಸ್ ಸೋಲು ಅನುಭವಿಸಿದೆ ಎಂದು ಎಂದು ಸಚಿವ ಬಿ ಶ್ರೀರಾಮುಲು ಹೇಳಿದ್ದಾರೆ.
 

click me!