ರಾಜಧಾನಿ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ

Published : Sep 27, 2021, 05:34 PM IST
ರಾಜಧಾನಿ  ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ವಿಸ್ತರಣೆ

ಸಾರಾಂಶ

* ಬೆಂಗಳೂರಿನಲ್ಲಿ ಕೊರೋನಾ ಮೂರನೇ ಅಲೆ ಭೀತಿ * ರಾಜಧಾನಿ ಬೆಂಗಳೂರಿನಲ್ಲಿ  ನೈಟ್ ಕರ್ಫ್ಯೂ ವಿಸ್ತರಣೆ * ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್

ಬೆಂಗಳೂರು, (ಸೆ.27): ಕೊರೋನಾ (Coronavirus) ಎರಡನೇ ಅಲೆ ಏನೋ ಕಡಿಮೆಯಾಗಿದೆ. ಆದರೂ ಮೈ ಮರೆಯುವಂತಿಲ್ಲ. ತಜ್ಞರ ಪ್ರಕಾರ ಮೂರನೇ ಭೀತಿ ಕಾಡುವ ಸಾಧ್ಯತೆಗಳಿವೆ.

ಈ ಮುಂಜಾಗ್ರತಾ ಕ್ರಮವಾಗಿ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಅಕ್ಟೋಬರ್ 11ರವರೆಗೂ ನೈಟ್ ಕರ್ಫ್ಯೂ (Night Curfew) ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಕರ್ನಾಟಕದಲ್ಲಿ ತಗ್ಗಿದ ಕೊರೋನಾ: ಮಾರ್ಗಸೂಚಿ ನಿಯಮಗಳಲ್ಲಿ ಬದಲಾವಣೆ

ಈ ಕುರಿತು ಇಂದು (ಸೆ.27) ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಮಾಹಿತಿ ನೀಡಿದ್ದು, ಬೆಂಗಳೂರಿನಲ್ಲಿ ಅ.11 ರವರೆಗೆ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಸೆ.27 ರ ವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿತ್ತು. ಇದೀಗ ನೈಟ್ ಕರ್ಫ್ಯೂ ಆದೇಶದಲ್ಲಿ ಬದಲಾವಣೆ ಮಾಡಲಾಗಿದ್ದು, ಅ.11ರವರೆಗೆ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಮುಂದುವರೆಯಲಿದೆ.

ನೈಟ್ ಕರ್ಫ್ಯೂ ಇದ್ರೂ ಸಹ ಬೆಂಗಳೂರಿನಲ್ಲಿ ದೊಡ್ಡವರ ಮಕ್ಕಳು, ಸಂಬಂಧಿಕರು ಕಾರಿನಲ್ಲಿ ಜಾಲಿರೈಡು ಹಾಗೂ ಪಾರ್ಟಿ ಅಂತ ಸುತ್ತಾಡುವುದು ಬೆಳಕಿಗೆ ಬಂದಿದೆ. ಇದಕ್ಕೆ ಪೊಲೀಸರು ಕಡಿವಾಣ ಹಾಕಬೇಕಿದೆ.

PREV
click me!

Recommended Stories

ಅಪಘಾತಕ್ಕೀಡಾದ ಕುಟುಂಬಕ್ಕೆ ಪರಿಹಾರ ನೀಡುವಲ್ಲೂ ಪೊಲಿಟಿಕ್ಸ್! ಸಚಿವ ಜಮೀರ್ ಭೇಟಿ ರದ್ದಾಗಲು ರಾಜಕೀಯ ಕಾರಣವೇ?
Hubballi-Ankola National Highway ಅತಿಕ್ರಮಣದ ಪರಿಣಾಮ, ಮೃತ್ಯಕೂಪವಾದ ಹುಬ್ಬಳ್ಳಿ ಅಂಕೋಲಾ ಹೆದ್ದಾರಿ!