'ಹಿಂದುಳಿದವರಿಗೆ ನ್ಯಾಯ ಒದಗಿಸಿದವರು ಸಿದ್ದರಾಮಯ್ಯ'

By Kannadaprabha NewsFirst Published Sep 27, 2021, 3:41 PM IST
Highlights

*  ಸಿದ್ದರಾಮಯ್ಯ ನೇತೃತ್ವದಲ್ಲಿ ಜಾತಿವಾರು ಸಮೀಕ್ಷೆಯ ವರದಿ ಬಿಡುಗಡೆಗೆ ಒತ್ತಾಯ
*  ಸೆ. 29ರಂದು ದಾವಣಗೆರೆಯಲ್ಲಿ ಧರಣಿ ಸತ್ಯಾಗ್ರಹ
*  ಸಮೀಕ್ಷೆ ವರದಿ ಬಿಡುಗಡೆಗೆ ಮುಂದಾಗದ ಬಿಜೆಪಿ ಸರ್ಕಾರ  
 

ಹರಪನಹಳ್ಳಿ(ಸೆ.27): ಹಿಂದುಳಿದ ಸಮುದಾಯ ಜಾತಿಗಳನ್ನು ಗುರುತಿಸಿ ಸಾಮಾಜಿಕ ನ್ಯಾಯ ಒದಗಿಸಿಕೊಟ್ಟು, ಏಳಿಗೆಗೆ ಶ್ರಮಿಸಿದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಎಂದು ದಾವಣಗೆರೆ ಜಿಲ್ಲಾ ಅಹಿಂದ ನಾಯಕ ರಾಜಕುಮಾರ್‌ ಹೇಳಿದರು.

ಪಟ್ಟಣದ ಹೊರವಲಯದಲ್ಲಿರುವ ಸಮತಾ ರೆಸಾರ್ಟ್‌ನ ಸಭಾ ಭವನದಲ್ಲಿ ಹಮ್ಮಿಕೊಂಡಿದ್ದ ದಾವಣಗೆರೆ(Davanagere) ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದಿಂದ ಸೆ. 29ರಂದು ದಾವಣಗೆರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಜಾತಿವಾರು ಸಮೀಕ್ಷೆಯ ವರದಿ ಬಿಡುಗಡೆಗೆ ಒತ್ತಾಯಿಸಿ ನಡೆಯುವ ಧರಣಿ ಸತ್ಯಾಗ್ರಹದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಅಂಬೇಡ್ಕರ್‌ ನೀಡಿದ ಸಂವಿಧಾನದ ರಥವನ್ನು ಮುಂದುವರೆಸಬೇಕಾದರೆ ಹಿಂದುಳಿದ ಎಲ್ಲ ಸಮುದಾಯಗಳು ಸಂಘಟಿತರಾಗಿ ಹೋರಾಟ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸೆ. 29ರಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ತಾವೆಲ್ಲಾರೂ ಭಾಗವಹಿಸಿ ಅ​ವ​ರ ಕೈ ಬಲಪಡಿಸಬೇಕೆಂದು ಕರೆ ನೀಡಿದರು.

'2023ಕ್ಕೆ ಕಾಂಗ್ರೆಸ್‌ಗೆ ಅಧಿಕಾರ : ಸಿದ್ದರಾಮಯ್ಯಗೆ ಸಿಎಂ ಪಟ್ಟ'

ನಿವೃತ್ತ ಉಪನ್ಯಾಸಕ ರಾಮಚಂದ್ರಪ್ಪ ಮಾತನಾಡಿ, ಅಲಕ್ಷಿತ ಸಮುದಾಯದ ಜಾತಿಗಳು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಮಂದೆ ಬರಬೇಕಾದರೆ ಮೊದಲು ಸಂಘಟಿತರಾಗಿ ಹೋರಾಡಬೇಕಾಗಿದೆ, ಸಿದ್ದರಾಮಯ್ಯನವರ ಸರ್ಕಾರದಲ್ಲಿ ಆದ ಜಾತಿವಾರು ಸಮೀಕ್ಷೆ ವರದಿ ಬಿಡುಗಡೆಗೆ ಈಗಿನ ಸರ್ಕಾರ ಮುಂದಾಗುತ್ತಿಲ್ಲ ಎಂದು ಹೇಳಿದರು. 

ಜಿ.ಎಸ್‌. ಪರಶುರಾಮಪ್ಪ, ಹೊದುಗೆರೆ ರಾಮೇಶ್‌, ಉಮ್ಮೇಶ್‌ ಬಾಬು, ಪಿ.ಟಿ. ಭರತ್‌ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಪಂ ಸದಸ್ಯ ಹೆಚ್‌.ಬಿ. ಪರಶುರಾಮಪ್ಪ ವಹಿಸಿದ್ದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಿಂಗಪ್ಪ, ಲೋಕಿಕೇರಿ ಸಂಗಪ್ಪ, ಮಾಜಿ ತಾಪಂ ಸದಸ್ಯ ದಿಳ್ಯೇಪ್ಪ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ವಕೀಲ ಬಂಡ್ರಿ ಗೋಣಿಬಸಪ್ಪ, ಯರಬಳ್ಳಿ ಉಮಾಪತಿ, ಅಂಬೇಡ್ಕರ್‌ಸಂಘದ ಅಧ್ಯಕ್ಷ ನಿಚ್ಚಾವನಳ್ಳಿ ಭೀಮಪ್ಪ, ಆರ್‌. ಹನುಮಂತಪ್ಪ, ವಾಲ್ಮೀಕಿ ಸಮಾಜದ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ, ಉಪ್ಪಾರ ಸಮಾಜದ ಅಧ್ಯಕ್ಷ ಶಂಕರನಹಳ್ಳಿ ಹನುಮಮತಪ್ಪ, ಪುರಸಭೆ ಮಾಜಿ ಅಧ್ಯಕ್ಷ ಎಚ್‌.ಕೆ. ಹಾಲೇಶ್‌, ಮುತ್ತಗಿ ಜಂಭಣ್ಣ, ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಮೂಸಾಸಾಬ್‌, ಬಳಿಗಾನೂರು ಪರಶುರಾಮ್‌, ಪುರಸಭೆ ಸದಸ್ಯರಾದ ಜೋಗಿನರ ಭರತೇಶ್‌, ಜಾಕೀರ್‌ ಹುಸೇನ್‌ ಸೇರಿದಂತೆ ಹಿಂದುಳಿದ ಜಾತಿಗಳ ಸಮಾಜದ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
 

click me!