ಬೆತ್ತಲೆಯಾಗಿ ಕುಣಿದ ಭೂಪ: ವಾಯು ವಿಹಾರಿಗಳಿಗೆ ಶಾಕ್!

Published : Jan 01, 2020, 01:34 PM ISTUpdated : Jan 01, 2020, 04:58 PM IST
ಬೆತ್ತಲೆಯಾಗಿ ಕುಣಿದ ಭೂಪ: ವಾಯು ವಿಹಾರಿಗಳಿಗೆ ಶಾಕ್!

ಸಾರಾಂಶ

ಹೊಸ ವರ್ಷದ ಎಫೆಕ್ಟ್, ಬೆತ್ತಲೆಯಾಗಿ ಕುಣಿದ ಭೂಪ| ಬೆಳ್ಳೆಂಬೆಳಗ್ಗೆ ವಾಯು ವಿಹಾರಿಗಳಿಗಳಿಗೆ ಶಾಕ್ ಕೊಟ್ಟ ಅನಾಮಿಕ| ವಿಜಯಪುರ ಜಿಲ್ಲಾಡಳಿತದ ಕಚೇರಿ‌ ಮುಂಭಾಗದ ರಸ್ತೆಯಲ್ಲಿ  ಬೆತ್ತಲೆ ಓಡಾಡಿದ ವ್ಯಕ್ತಿ| ಬೆಳಗಿನ ಜಾವದಲ್ಲಿ ರಸ್ತೆಮೇಲೆ ಬೆತ್ತಲೆಯಾಗಿ ಕುಣಿದ ಭೂಪ.

ವಿಜಯಪುರ[ಜ.01]: ಹೊಸ ವರ್ಷವನ್ನು ಎಲ್ಲರೂ ಎಲ್ಲರೂ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. ಆದರೆ ಇಲ್ಲೊಬ್ಬ ಭೂಪ ಹೊಸ ವರ್ಷದಂದು ಬೆಳ್ಳಂ ಬೆಳಗ್ಗೆ ಬಟ್ಟೆ ಧರಿಸದೆ ರಸ್ತೆ ಎಲ್ಲಾ ಬೆತ್ತಲೆಯಾಗಿ ಓಡಾಡಿ ವಾಯುವಿಹಾರಿಗಳಿಗೆ ಶಾಕ್ ಕೊಟ್ಟ ಘಟನೆ ವಿಜಯಪುರದಲ್ಲಿ ನಡೆದಿದೆ.

"

ಹೌದು ವಿಜಯಪುರ ಜಿಲ್ಲಾಡಳಿತದ ಕಚೇರಿ‌ ಮುಂಭಾಗದ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಬೆಳಗಿನ ಜಾವ ಬೆತ್ತಲೆಯಾಗಿ ಓಡಾಡಿದ್ದಾನೆ. ಮರಾಠಿ ಭಾಷಿಕನಾದ ಈ ಅನಾಮಿಕ ವ್ಯಕ್ತಿ ಹುಚ್ಚನಂತೆ ಕುಣಿದಾಡಿದ್ದು, ಇದನ್ನು ಕಂಡ ವಾಯು ವಿಹಾರಿಗಳು ಬೆಚ್ಚಿ ಬಿದ್ದಿದ್ದಾರೆ. ಬಟ್ಟೆ ತೊಟ್ಟುಕೊಳ್ಳುವಂತೆ ಹೇಳಿದರೂ ಆತ ನಿರಾಕರಿಸಿದ್ದಾನೆ. ತೀವ್ರ ಒತ್ತಾಯದ ಬಳಿಕ ರಟ್ಟಿನ ಬಾಕ್ಸ್ ಸುತ್ತಿಕೊಂಡಿದ್ದಾನೆ.

ಆ ಅನಾಮಿಕ ವ್ಯಕ್ತಿ ಕುಡಿದ ಅಮಲಿನಲ್ಲಿ ಬೆತ್ತಲೆ ಕುಣಿದಾಡಿದ್ದಾನೋ ಅಥವಾ ಬುದ್ದಿಭ್ರಮಣೆಯಾಗಿದ್ದಾನೋ ಎಂಬುದು ಸ್ಪಷ್ಟವಾಗಿಲ್ಲ. ಹೊಷ ವರ್ಷದ ಅಂಗವಾಗಿ ಕುಡಿದು ಹೀಗೆಲ್ಲ ಹುಚ್ಚಾಟ ಮಾಡಿರಬೇಕು ಎಂಬುವುದು ಜನರ ಅಭಿಪ್ರಾಯ

PREV
click me!

Recommended Stories

ವಿಜಯಲಕ್ಷ್ಮಿಗೆ ನಿಂದನೆ ಪ್ರಕರಣ, ಆರೋಪಿಗಳಿಗೆ ಜಾಮೀನು ಸಿಗದಂತೆ ಚಾರ್ಜ್‌ಶೀಟ್‌ಗೆ ಮುಂದಾದ ಸೈಬರ್ ಪೊಲೀಸರು
ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?